ಡ್ರಗ್ಸ್ ಕೇಸ್: ಪ್ರಶಾಂತ್ ಸಂಬರ್ಗಿ ಆರೋಪಗಳಿಗೆ ಅನುಶ್ರೀ ಕೊಟ್ಟ ಉತ್ತರ

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಿಶೋರ್ ಶೆಟ್ಟಿ ನಿರೂಪಕಿ ಅನುಶ್ರೀ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿತ್ತು. ಮಂಗಳೂರು ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಅನುಶ್ರೀ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂದು ಕಿಶೋರ್ ಹೇಳಿಕೆ ನೀಡಿರುವುದಾಗಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿತ್ತು.

Recommended Video

ಅನುಶ್ರೀ ಗೆ ಬಂತು ಆಪತ್ತು, ಯಾರನ್ನು ಸುಮ್ಮನ್ನೆ ಬಿಡಲ್ಲ ಎಂದ ಹೋಂ ಮಿನಿಸ್ಟರ್

ಇದರ ಬೆನ್ನಲ್ಲೆ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ನಿರೂಪಕಿ ಅನುಶ್ರೀ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಕಳೆದ ಎರಡು ದಿನದ ಬೆಳವಣಿಗೆ ಹಾಗೂ ಸಂಬರ್ಗಿ ಆರೋಪಗಳ ಕುರಿತು ನಿರೂಪಕಿ ಅನುಶ್ರೀ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.

ಮುಂಬೈನಿಂದ ಬೆಂಗಳೂರಿಗೆ ವಾಪಸ್ ನಿರೂಪಕಿ ಅನುಶ್ರೀ ''ನಾನು ಡ್ರಗ್ಸ್ ತೆಗೆದುಕೊಂಡಿದ್ದೇನೆ ಅಥವಾ ಮಾರಾಟ ಮಾಡಿದ್ದೇನೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ನನ್ನನ್ನು ಕಳೆದ ಸಲ ಪೊಲೀಸರು ವಿಚಾರಣೆ ಕರೆದಿರಲಿಲ್ಲ. ಕಾನೂನಿನ ಅಡಿಯಲ್ಲಿ ನಾನು ಏನೆಲ್ಲಾ ಹೇಳಬೇಕಿತ್ತು ಎಲ್ಲವೂ ಹೇಳಿದ್ದೇನೆ. ಅವರು ಕೇಳಿದ ಎಲ್ಲದಕ್ಕೂ ನಾನು ಉತ್ತರಿಸಿದ್ದೇನೆ. ಆವತ್ತು ಕೊಟ್ಟಿದ್ದೆ, ಈಗಲೂ ಕೊಟ್ಟಿದ್ದೀನಿ'' ಎಂದರು.

Drug Case: Anchor Anushree First Reaction

ಇನ್ನು ಅನುಶ್ರೀ ಅವರಿಗೆ ಮಾಜಿ ಮುಖ್ಯಮಂತ್ರಿಯೊಬ್ಬರು ಬೆಂಬಲವಾಗಿ ನಿಂತಿದ್ದಾರೆ. ಅವರಿಂದಲೇ ಅನುಶ್ರೀ ಸೇಫ್ ಆಗ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ನಟಿ, ''ನನ್ನ ಹಿಂದೆ ಯಾರೂ ಇಲ್ಲ, ನಾನು ಒಬ್ಬಳೆ. ಅವರು ಹೇಳುತ್ತಿರುವುದು ಯಾರೆಂದು ಅವರೇ ಹೇಳಬೇಕಿದೆ'' ಎಂದು ತಿರುಗೇಟು ಕೊಟ್ಟರು.

ಇನ್ನು ಆಸ್ತಿ ಹೇಗೆ ಬಂತು ಎಂದು ವಿಚಾರದ ಬಗ್ಗೆ ಮಾತನಾಡಿದ ಅನುಶ್ರೀ, ''ಬೆಂಗಳೂರಿನಲ್ಲಿ ನಾನಿರುವುದು ಬಾಡಿಗೆ ಮನೆಯಲ್ಲಿ, ಮಂಗಳೂರಿನಲ್ಲಿ ಕಟ್ಟಿರುವ ಮನೆ ಮೇಲೆ ಲೋನ್ ಇದೆ. ಬೇಕಿದ್ರೆ ಪರೀಕ್ಷೆ ಮಾಡಿಕೊಳ್ಳಿ'' ಎಂದರು.

''ನಾನು ಡ್ರಗ್ಸ್ ಸೇವಿಸಿಲ್ಲ, ಡ್ರಗ್ಸ್ ಮಾರಾಟವೂ ಮಾಡಿಲ್ಲ. ಪೊಲೀಸರ ತನಿಖೆಗೆ ನಾನು ಸಹಕರಿಸಿದ್ದೇನೆ. ಈ ವಿಚಾರಗಳು ವರದಿಯಾಗುವುದಕ್ಕೂ ಮುಂಚೆಯೇ ನಾನು ಕೆಲಸದ ನಿಮಿತ್ತ ಮುಂಬೈಗೆ ಹೋಗಿದ್ದೆ. ಈಗ ಬಂದಿದ್ದೇನೆ. ನಾನೆಲ್ಲೂ ಓಡಿ ಹೋಗಿಲ್ಲ, ತಪ್ಪಿಸಿಕೊಂಡು ಹೋಗಿಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಅನುಶ್ರೀ ಕುರಿತಾಗಿ ಸ್ಪಷ್ಟನೆ ನೀಡಿರುವ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್, ''ಆರೋಪಿಗಳಿಗೆ ಚಾರ್ಜ್‌ಶೀಟ್ ಬಗೆಗೆ ಇರುವ ಆರೋಪಗಳನ್ನು ತಮ್ಮ ವಕೀಲರ ಮೂಲಕ ಕೋರ್ಟ್‌ನಲ್ಲಿ ಹೇಳಿಕೊಳ್ಳಬಹುದು, ಇದರ ಹೊರತು ಆರೋಪಿ ಮಾಡಿರುವ ಆರೋಪದ ಬಗ್ಗೆ ಏನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಜಾರ್ಜ್ ಶೀಟ್ ನಲ್ಲಿ ಅನುಶ್ರೀ ಆರೋಪಿ ಎಂದು ಉಲ್ಲೇಖ ಆಗಿಲ್ಲ. ಕಿಶೋರ್ ಹೇಳಿಕೆಯಲ್ಲಷ್ಟೇ ಅನುಶ್ರೀ ಹೆಸರಿದೆ. ಕಿಶೋರ್ ಅಮನ್ ಮತ್ತೆ ಕರೆದು ವಿಚಾರಣೆ ನಡೆಸುವ ಅಗತ್ಯವಿಲ್ಲ. ಏಕೆಂದರೆ ಪೊಲೀಸರು ಆ ಪ್ರಕರಣದ ತನಿಖೆ ಮುಗಿಸಿದ್ದಾರೆ, ಮರು ತನಿಖೆ ಮಾಡುವ ಅಗತ್ಯವಿಲ್ಲ'' ಎಂದಿದ್ದಾರೆ.

More from Filmibeat

English summary
Drug Case: Kannada TV Anchor and Actress Anushree first reaction.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X