'ವಿಚಾರಣೆಗೆ ಕರೆದಿದ್ದಾರೆ ಅಷ್ಟೇ, ನಾನು ಅಪರಾಧಿಯಲ್ಲ': ಅನುಶ್ರೀ ಮಾಧ್ಯಮ ಪ್ರಕಟಣೆ
ಡ್ರಗ್ಸ್ ಪ್ರಕರಣದಲ್ಲಿ ಮಂಗಳೂರು ಪೊಲೀಸರು ನಟಿ, ನಿರೂಪಕಿ ಅನುಶ್ರೀ ಅವರಿಗೆ ನೋಟಿಸ್ ನೀಡಿದ್ದಾರೆ. ನೋಟಿಸ್ ಹಿನ್ನೆಲೆ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮಂಗಳೂರಿನಲ್ಲಿ ಪೊಲೀಸ್ ವಿಚಾರಣೆ ಎದುರಿಸಬೇಕಾಗಿದೆ.
Recommended Video
ಈ ವಿಚಾರ ತಿಳಿಯುತ್ತಿದ್ದಂತೆ ಅನುಶ್ರೀ ಹೆಸರು ಮಾಧ್ಯಮಗಳಲ್ಲಿ ಚರ್ಚೆಯಾಗಲು ಶುರುವಾಗಿದೆ. ಗುರುವಾರ ಸಂಜೆಯವರೆಗೂ ನನಗೆ ನೋಟಿಸ್ ಬಂದಿಲ್ಲ ಎಂದೇ ಹೇಳುತ್ತಿದ್ದ ಅನುಶ್ರೀ, ನಂತರ ನೋಟಿಸ್ ತಲುಪಿರುವುದನ್ನು ಬಹಿರಂಗಪಡಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿ 'ವಿಚಾರಣೆಗೆ ಕರೆದಿದ್ದಾರೆ ಅಷ್ಟೇ, ನಾನು ಅಪರಾಧಿಯಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ.
''ವಿಚಾರಣೆಗೆ ಕರೆದ ಕೂಡಲೇ ನಾನೇನು ಅಪರಾಧಿಯಲ್ಲ, ಇದರಲ್ಲಿ ನನ್ನ ಪಾತ್ರವೇನು ಇಲ್ಲ. ನನಗೆ ತಿಳಿದಿರುವ ಮಾಹಿತಿ ನೀಡಿ ಪೊಲೀಸರಿಗೆ ಸಂಪೂರ್ಣವಾಗಿ ಸಹರಕರಿಸುತ್ತೇನೆ'' ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

''ನೋಟಿಸ್ ಬಂದಿರುವುದು ನಿಜ, ಶುಕ್ರವಾರ ಬೆಳಗ್ಗೆ ಮಂಗಳೂರಿಗೆ ಭೇಟಿ ನೀಡಿ ವಿಚಾರಣೆಗೆ ಹಾಜರಾಗುತ್ತೇನೆ. ಅಷ್ಟು ಮಾತ್ರಕ್ಕೆ ನನ್ನ ಅಪರಾಧಿ ಎಂದು ಬಿಂಬಿಸುವುದು ಸೂಕ್ತವಲ್ಲ, ನನ್ನ ಕುಟುಂಬಕ್ಕೂ ಇದು ತೀವ್ರ ನೋವು ತಂದಿದೆ'' ಎಂದು ವಿನಂತಿಸಿದ್ದಾರೆ.
''ಪೊಲೀಸರ ವಿಚಾರಣೆ ಎದುರಿಸಿದ ನಂತರ ಸತ್ಯಾಸತ್ಯತೆಗಳ ಬಗ್ಗೆ ನನಗೂ ಮಾಹಿತಿ ಸಿಗಲಿದೆ. ಆ ಬಳಿಕ ನಾನೇ ಆ ಬಗ್ಗೆ ಸ್ಪಷ್ಟನೆ ನೀಡುತ್ತೇನೆ'' ಎಂದು ನಿರೂಪಕಿ ಅನುಶ್ರೀ ಹೇಳಿದ್ದಾರೆ.


Click it and Unblock the Notifications











