ಡ್ರಗ್ಸ್ ವಿವಾದ: ಸ್ಯಾಂಡಲ್ ವುಡ್ ನಟಿಯರ ಆಪ್ತರೇ ಮೊದಲ ಟಾರ್ಗೆಟ್!
ಸ್ಯಾಂಡಲ್‌ವುಡ್ ಡ್ರಗ್ಸ್ ವಿವಾದದಲ್ಲಿ ಖ್ಯಾತ ನಟಿಯರ ಹೆಸರು ತಳುಕು ಹಾಕಿಕೊಂಡಿದೆ. ಇಂದ್ರಜಿತ್ ಲಂಕೇಶ್ ನೀಡಿರುವ ಮಾಹಿತಿ ಮತ್ತು ಸಿಸಿಬಿ ಪೊಲೀಸರು ಕಲೆ ಹಾಕಿರುವ ಮಾಹಿತಿ ಹಿನ್ನೆಲೆ ಸ್ಟಾರ್ ನಟಿಯರ ಆಪ್ತರು ಟಾರ್ಗೆಟ್ ಆಗಿದ್ದಾರೆ.
Recommended Video
ಇಂಡಸ್ಟ್ರಿಗೆ ಡ್ರಗ್ಸ್ ಸರಬರಾಜು ಮಾಡ್ತಿದ್ದಾರೆ, ನಟಿಯರಿಗೆ ಇವರ ಜೊತೆ ಸಂಪರ್ಕ ಇದೆ ಎಂಬ ಅನುಮಾನದ ಹಿನ್ನೆಲೆ ಮೂವರು ವ್ಯಕ್ತಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ವ್ಯಕ್ತಿಗಳ ವಿಚಾರಣೆ ಬಳಿಕ ಒಬ್ಬೊಬ್ಬರೇ ನಟಿಯರಿಗೆ ನೋಟಿಸ್ ನೀಡಲಾಗುತ್ತಿದೆ. ಮುಂದೆ ಓದಿ...

ರಾಗಿಣಿ ಆಪ್ತ ರವಿಶಂಕರ್
ಡ್ರಗ್ಸ್ ಜಾಲವನ್ನು ಬೆನ್ನತ್ತಿರುವ ಸಿಸಿಬಿ ಪೊಲೀಸರು ಕಳೆದ ರಾತ್ರಿ ರವಿಶಂಕರ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿ ರವಿಶಂಕರ್ ನಟಿ ರಾಗಿಣಿ ಅವರ ಆಪ್ತ ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ರಾಗಿಣಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಸೆಪ್ಟೆಂಬರ್ 4 ರಂದು ಸಿಸಿಬಿ ವಿಚಾರಣೆಗೆ ಆಗಮಿಸುವಂತೆ ಸೂಚಿಸಲಾಗಿದೆ.
ಸಂಜನಾ ಆಪ್ತ ರಾಹುಲ್
ಬಟಿ ಸಂಜನಾ ಗಲ್ರಾನಿ ಅವರ ಸ್ನೇಹಿತ ಹಾಗೂ ಪರಿಚಿತ ವ್ಯಕ್ತಿಯಾಗಿರುವ ರಾಹುಲ್ ಎಂಬ ವ್ಯಕ್ತಿಯನ್ನ ಸಹ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಾಹುಲ್ ಸಂಪರ್ಕ ಆಧಾರಿತವಾಗಿ ಸಂಜನಾ ಅವರಿಗೂ ನೋಟಿಸ್ ನೀಡುವ ಸಾಧ್ಯತೆ ಹೆಚ್ಚಿದೆ.


Click it and Unblock the Notifications











