For Quick Alerts
  ALLOW NOTIFICATIONS  
  For Daily Alerts

  ಸಂಭಾವನೆಗೆ ಭಿಕ್ಷುಕರಂತೆ ಕಾದು, ಅಕ್ಕಿಗೆ ಕ್ಯೂ ನಿಂತವರು ನಾವು, ಇಂದು 2 ಸಿನಿಮಾಗೆ ಕುಬೇರರು: ಜಗ್ಗೇಶ್

  |

  ಸ್ಯಾಂಡಲ್ ವುಡ್ ಗೆ ಡ್ರಗ್ ಮಾಫಿಯಾದ ನಂಟಿದೆ ಎನ್ನುವ ವಿಚಾರ ಇಡೀ ಚಿತ್ರರಂಗವನ್ನು ಬೆಚ್ಚಿ ಬೀಳಿಸಿದೆ. ಈ ಬಗ್ಗೆ ಈಗ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ. ಡ್ರಗ್ ಮಾಫಿಯಾದ ಬಗ್ಗೆ ಕೆಲವು ನಟ-ನಟಿಯರು ಪ್ರತಿಕ್ರಿಯೆ ನೀಡಿದ್ದು ಬಹುತೇಕರು ಇದನ್ನು ತಳ್ಳಿ ಹಾಕಿದ್ದಾರೆ. ಇನ್ನು ಕೆಲವರು ಯಾರೆಲ್ಲ ಭಾಗಿಯಾಗಿದ್ದಾರೆ ಅವರಿಗೆ ಶಿಕ್ಷೆಯಾಗಲಿ ಎಂದಿದ್ದಾರೆ.

  Drug Mafia 15 ಜನ ಹೀರೋ, ಹೀರೋಯಿನ್ ದಾಖಲೆಯನ್ನು ಸಾಕ್ಷಿ ಸಮೇತ ಪೋಲೀಸರ ಕೈಗೆ ಕೊಟ್ಟ ಇ,ಲಂಕೇಶ್ |

  ಈ ಬಗ್ಗೆ ನಟ ಜಗ್ಗೇಶ್ ಸರಣಿ ಟ್ವೀಟ್ ಮಾಡಿದ್ದಾರೆ. ಸಮಾಜದ ಆಗುಹೋಗುಗಳ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಸ್ಪಂದಿಸುವ ಜಗ್ಗೇಶ್ ಡ್ರಗ್ ಮಾಫಿಯಾದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. 30 ಸಿನಿಮಾಗಳಲ್ಲಿ ನಟಿಸಿದರೂ ನಿರ್ಮಾಪಕರ ಮನೆ ಮುಂದೆ ಭಿಕ್ಷುಕರಂತೆ ಸಂಭಾವನೆಗೆ ಕಾದು, ರೇಷನ್ ಅಂಗಡಿ ಮುಂದೆ ಅಕ್ಕಿ ಸೀಮೆ ಎಣ್ಣೆಗೆ ಕ್ಯೂ ನಿಂತವರು ನಾವು. ಆದರೆ ಇಂದು 2 ಸಿನಿಮಾಗೆ ಕುಬೇರನ ಮಕ್ಕಳಾಗುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

  ಮಾದಕ ವ್ಯಸನಿಗಳಲ್ಲದ ಸ್ಯಾಂಡಲ್‌ವುಡ್ ನಟರನ್ನು ಹೆಸರಿಸಿದ ರವಿ ಬೆಳಗೆರೆಮಾದಕ ವ್ಯಸನಿಗಳಲ್ಲದ ಸ್ಯಾಂಡಲ್‌ವುಡ್ ನಟರನ್ನು ಹೆಸರಿಸಿದ ರವಿ ಬೆಳಗೆರೆ

   '30 ಸಿನಿಮಾ ಮಾಡಿದರೂ ಭಿಕ್ಷುಕರಂತೆ ಸಂಭಾವನೆಗೆ ಕಾಯುತ್ತಿದ್ದೆವು'

  '30 ಸಿನಿಮಾ ಮಾಡಿದರೂ ಭಿಕ್ಷುಕರಂತೆ ಸಂಭಾವನೆಗೆ ಕಾಯುತ್ತಿದ್ದೆವು'

  ಇಂದಿನ ಯುವ ಪೀಳಿಗೆ ಸಾಗುತ್ತಿರುವ ದಾರಿಯ ಬಗ್ಗೆ ನಟ ಜಗ್ಗೇಶ್ ತಮ್ಮದೆ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ. "30 ಸಿನಿಮಾ ನಟಿಸಿದರು ನಿರ್ಮಾಪಕರ ಮನೆ ಮುಂದೆ ಭಿಕ್ಷುಕರಂತೆ ಸಂಭಾವನೆಗೆ ಕಾದು, ಕೊಟ್ಟ ಕ್ಷಣ ರೇಷನ್ ಅಂಗಡಿ ಮುಂದೆ ಅಕ್ಕಿ ಸೀಮೆ ಎಣ್ಣೆಗೆ ಕ್ಯೂ ನಿಂತವರು ನಾವು. ಇಂದು 2 ಸಿನಿಮಾಗೆ ಕುಬೇರನ ಮಕ್ಕಳು ಹೇಗೆ ಅಂತ ನನಗೆ 57 ವರ್ಷಕ್ಕು ಅರ್ಥವಾಗಿಲ್ಲಾ. ಇದೇ 2015 ರಿಂದ ಮೋಜು ಮಸ್ತಿ ಕುಸ್ತಿ ಸಿನಿಮಾ ಜೀವನ. ಅಂದು ಒಂದು ಮಾತಿಗೆ ಅಳುತ್ತಿದ್ದೆವು." ಎಂದಿದ್ದಾರೆ.

   'ಬದುಕು ಹಗುರವಾಗಿ ಕಂಡವರು ಸ್ಮಶಾನ ಸೇರುತ್ತಾರೆ..'

  'ಬದುಕು ಹಗುರವಾಗಿ ಕಂಡವರು ಸ್ಮಶಾನ ಸೇರುತ್ತಾರೆ..'

  "ಇಂದು ಏನೆ ಮಾತಾಡಿದರು ಅದಕ್ಕೆ ನೂರು ತರಹ ಪರ ವಿರೋಧ ಚರ್ಚೆಯಾಗುತ್ತದೆ. ಯಾಕೆ ಬೇಕು ಉಪ್ಪು ತಿಂದವರು ನೀರು ಕುಡಿಯಲಿ. ಬದುಕುವ ಹಠವಿದ್ದವರು ಹಿಮಾಲಯ ಏರುತ್ತಾರೆ. ಬದುಕು ಹಗುರವಾಗಿ ಕಂಡವರು ಸ್ಮಶಾನ ಸೇರುತ್ತಾರೆ. ಅವರವರ ಹಣೆಬರಹ." ಎಂದಿದ್ದಾರೆ.

  ವಾಮ ಮಾರ್ಗದಲ್ಲಿ ಗೆದ್ದವರೇ ನಶೆಯ ದಾಸರಾಗಿದ್ದಾರೆ, ಅವರನ್ನು ಬೆತ್ತಲೆ ಮಾಡಿ: ನಟ ಜಗ್ಗೇಶ್ವಾಮ ಮಾರ್ಗದಲ್ಲಿ ಗೆದ್ದವರೇ ನಶೆಯ ದಾಸರಾಗಿದ್ದಾರೆ, ಅವರನ್ನು ಬೆತ್ತಲೆ ಮಾಡಿ: ನಟ ಜಗ್ಗೇಶ್

   'ತಂದೆ ಸ್ಥಾನದಲ್ಲಿ ನಿಂತು ಹೇಳುತ್ತಿದ್ದೀನಿ..'

  'ತಂದೆ ಸ್ಥಾನದಲ್ಲಿ ನಿಂತು ಹೇಳುತ್ತಿದ್ದೀನಿ..'

  "ನಾನು ನಟನಾಗಿ ಅಲ್ಲ ಒಬ್ಬ ತಂದೆ ಸ್ಥಾನದಲ್ಲಿ ನಿಂತು ನನ್ನ ಕಲಾಬಂಧುಗಳಿಗೆ ಹೇಳುವುದೊಂದೆ ನೀವು ಚೆನ್ನಾಗಿದ್ದರೆ ಮಾತ್ರ ದುನಿಯಾ. be careful. ಯಾರೊ ಕೆಲ ತಲೆ ಮಾಸಿದವರ ತಪ್ಪಿಗೆ ಇಡೀ ಚಿತ್ರರಂಗ ಎನ್ನಬೇಡಿ. ಮಾಧ್ಯಮ ಮಿತ್ರರೆ, ಹಾದಿ ತಪ್ಪಿದವರನ್ನು ಬಹಿರಂಗಪಡಿಸಿ, ಬುದ್ಧಿ ಕಲಿಸಿ. ಕೆಲವರ ತಪ್ಪಿಗೆ ಚಿತ್ರರಂಗದ ಪ್ರಾಮಾಣಿಕ ಕಲಾವಿದರು ನೊಂದಿದ್ದಾರೆ." ಎಂದಿದ್ದಾರೆ.

   'ಈಗೇನಿದ್ದರೂ ನಾನು ನನ್ನಿಷ್ಟದ ಜೀವನ..'

  'ಈಗೇನಿದ್ದರೂ ನಾನು ನನ್ನಿಷ್ಟದ ಜೀವನ..'

  "ಅಪ್ಪನಿಗೆ 1981 ರಲ್ಲಿ 5,000 ಸಾಲ ಕೇಳಿದಕ್ಕೆ ಸಾರ್ವಜನಿಕವಾಗಿ ಚಪ್ಪಲಿಯಲ್ಲಿ ಹೊಡೆದು ತಾಕತ್ತಿದ್ದರೆ ಹೋಗಿ ದುಡಿ ಎಂದು ಹೊರ ದೂಡಿದ. ಹಠಕ್ಕೆ ಬಿದ್ದು ದುಡಿಮೆಗೆ ಮದ್ರಾಸಿಗೆ ಹೋದೆ. ಅಪಮಾನ ಮಾಡಿ ಅಂದು ಅಪ್ಪ ನನಗೆ ಜೀವನ ಕಲಿಸಿದ. ಇಂದು ಮಕ್ಕಳ ಹಾಗೆ ಬೆಳೆಸುವ ತಂದೆಯು ಇಲ್ಲಾ ತಲೆಮಾರು ಇಲ್ಲ. ಈಗ ಎಲ್ಲಾ ಕ್ಷೇತ್ರ ಏನಿದ್ದರು ನಾನು ನನ್ನಿಷ್ಟದ ಜೀವನ." ಎಂದು ಟ್ವೀಟ್ ಮಾಡಿದ್ದಾರೆ.

  English summary
  Actor Jaggesh tweets about drug mafia link with Sandalwood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X