ಡ್ರಗ್ಸ್ ವಿವಾದದಲ್ಲಿ ಚಿರು ಸರ್ಜಾ ಹೆಸರು ತಂದಿದ್ದಕ್ಕೆ ಚೇತನ್ ಖಂಡನೆ

ಕಳೆದ ಒಂದು ವಾರದಿಂದ ಸ್ಯಾಂಡಲ್‌ವುಡ್‌ ಇಂಡಸ್ಟ್ರಿಯಲ್ಲಿ ಡ್ರಗ್ಸ್ ಮಾಫಿಯಾ ಭಾರಿ ಚರ್ಚೆಗೆ ಕಾರಣವಾಗುತ್ತಿದೆ. ಎನ್‌ಸಿಬಿ ಬಲೆಗೆ ಬಿದ್ದ ಡ್ರಗ್ಸ್ ಡೀಲರ್ ಬಹಿರಂಗಪಡಿಸಿರುವ ಹೇಳಿಕೆಯಿಂದ ಸಿನಿಮಾರಂಗ ಕೆಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನುವುದು ತಿಳಿದು ಬಂದಿದೆ.

Recommended Video

Drug Mafia 15 ಜನ ಹೀರೋ, ಹೀರೋಯಿನ್ ದಾಖಲೆಯನ್ನು ಸಾಕ್ಷಿ ಸಮೇತ ಪೋಲೀಸರ ಕೈಗೆ ಕೊಟ್ಟ ಇ,ಲಂಕೇಶ್ |

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಸ್ಯಾಂಡಲ್‌ವುಡ್‌ ಡ್ರಗ್ಸ್ ವಾಸನೆ ಇದೆ, ಹಲವರು ಡ್ರಗ್ಸ್ ಸೇವಿಸುತ್ತಾರೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ನಟ ಚಿರಂಜೀವಿ ಸರ್ಜಾ ಅವರ ಸಾವಿನ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ.

ಡ್ರಗ್ಸ್ ವಿವಾದಲ್ಲಿ ಚಿರು ಸರ್ಜಾರ ಹೆಸರು ತಂದಿದ್ದಕ್ಕೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಆ ದಿನಗಳು ಖ್ಯಾತಿಯ ಚೇತನ್ ಸಹ ಈ ಇದಕ್ಕೆ ವಿರೋಧ ತೋರಿದ್ದಾರೆ. ಅಷ್ಟಕ್ಕೂ, ಚೇತನ್ ಏನಂದ್ರು?

ಡ್ರಗ್ಸ್ ಕುರಿತು ಚೇತನ್ ಹೇಳಿದ್ದೇನು?

ಡ್ರಗ್ಸ್ ಕುರಿತು ಚೇತನ್ ಹೇಳಿದ್ದೇನು?

ಸಿನಿಮಾ ಇಂಡಸ್ಟ್ರಿಯಲ್ಲಿ ಡ್ರಗ್ಸ್ ಸೇವನೆ ಹಾಗೂ ಬಳಕೆ ಇದೆಯಾ ಅಥವಾ ಇಲ್ಲವಾ ಎನ್ನುವುದರ ಬಗ್ಗೆ ನೇರವಾಗಿ ಮಾತನಾಡದ ಚೇತನ್, ನನಗೆ ಡ್ರಗ್ಸ್, ಪಾರ್ಟಿ ಅಭ್ಯಾಸ ಇಲ್ಲ ಎಂದಿದ್ದಾರೆ. ''ಕನ್ನಡ ಚಿತ್ರರಂಗದ ಯಾವುದೇ ಸಾಮಾಜಿಕ ಅಭ್ಯಾಸಗಳ ಬಗ್ಗೆ ಗೊತ್ತಿಲ್ಲದ ನನಗೆ, ಸಿಗರೇಟು/ಮದ್ಯ/ಮಾದಕ ಮತ್ತು ಪಾರ್ಟಿಗೆ ಹೋಗುವ ಅಭ್ಯಾಸಗಳು ಇಲ್ಲ'' ಎಂದು ಹೇಳಿದ್ದಾರೆ.

ಡ್ರಗ್ಸ್ ಬಗ್ಗೆ ಮಾಡಬೇಕಿರುವುದೇನು?

ಡ್ರಗ್ಸ್ ಬಗ್ಗೆ ಮಾಡಬೇಕಿರುವುದೇನು?

ಬೇಕಾಗಿರುವುದು: ಮಾದಕ ವಸ್ತುವಿನ ಜಾಗೃತಿ ಅಭಿಯಾನ., ಪುನರ್ವಸತಿ ಕಾರ್ಯಕ್ರಮಗಳು, ಸರ್ಕಾರದ ಉತ್ತಮ ನೀತಿಗಳು, ಮತ್ತು ಸರಿಯಾದ ತನಿಖೆಗಳು.

ಬೇಡವಾದದ್ದು: ಮಸಿ ಬಳಿಯುವುದು/ಉದ್ರೇಕಕಾರಿ ಹೇಳಿಕೆಗಳು ಎಂದು ಟ್ವಿಟ್ಟರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಮ್ಮ ನಡುವೆ ಇಲ್ಲದ ವ್ಯಕ್ತಿ ಬಗ್ಗೆ ಮಾತನಾಡಬಾರದು

ನಮ್ಮ ನಡುವೆ ಇಲ್ಲದ ವ್ಯಕ್ತಿ ಬಗ್ಗೆ ಮಾತನಾಡಬಾರದು

ಇಂದ್ರಜಿತ್ ಲಂಕೇಶ್ ಅವರು ಚಿರಂಜೀವಿ ಸರ್ಜಾರ ಅವರ ಸಾವಿನ ಬಗ್ಗೆ ಚರ್ಚಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೇತನ್, ''ನಮ್ಮ ನಡುವೆ ಇಲ್ಲದ ವ್ಯಕ್ತಿಯ ಮೇಲೆ ಕೆಸರೆರಾಚಾಟ ಮಾಡುತ್ತಿರುವುದರ ಬಗ್ಗೆ ದುಃಖವಿದೆ. ನಾವು ಯಾವುದೇ ಆರೋಪಗಳನ್ನು ಹೊರಿಸಿದರೂ ಅದನ್ನು ಸಮರ್ಥಿಸಲು ಅಥವಾ ಉತ್ತರಿಸಲು ಆ ಧ್ವನಿಯೇ ಇಲ್ಲದಿರುವ ಸಮಯದಲ್ಲಿ ಅವರ ಮೇಲೆ ಕೆಸರು ಎರಚುವುದನ್ನು ನಾನು ಖಂಡಿಸುತ್ತೇನೆ'' ಎಂದಿದ್ದಾರೆ.

ಇಂದ್ರಜಿತ್ ಚಿರು ಸಾವಿನ ಬಗ್ಗೆ ಏನು ಹೇಳಿದ್ದರು

ಇಂದ್ರಜಿತ್ ಚಿರು ಸಾವಿನ ಬಗ್ಗೆ ಏನು ಹೇಳಿದ್ದರು

ಕನ್ನಡ ಚಿತ್ರರಂಗದ ಕೆಲವು ತಾರೆಯರು ಡ್ರಗ್ಸ್ ಚಟಕ್ಕೆ ಬಲಿಯಾಗಿದ್ದಾರೆ ಎಂದು ಆರೋಪಿಸಿರುವ ಇಂದ್ರಜಿತ್ ಲಂಕೇಶ್ ''ಇತ್ತೀಚಿಗಷ್ಟೆ ಯುವ ನಟನ ಸಾವು ಸಂಭವಿಸಿತ್ತು. ಆದರೆ, ಆ ನಟ ಪೋಸ್ಟ್ ಮಾರ್ಟಮ್ ಏಕೆ ಮಾಡಿಲ್ಲ? ರಾಜಕೀಯ ಒತ್ತಡವಾ ಅಥವಾ ಕುಟುಂಬದ ಒತ್ತಡವಾ'' ಎಂದು ಪ್ರಶ್ನಿಸಿದ್ದರು.

More from Filmibeat

English summary
Drug Mafia in Sandalwood: A Dinagalu fame Chetan Condemns Indrajith Lankesh statement on chiranjeevi sarja death.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X