For Quick Alerts
  ALLOW NOTIFICATIONS  
  For Daily Alerts

  'ಬೇರೆಯವರ ಬಗ್ಗೆ ಮಾತಾಡಲ್ಲ, ಚಿರು ಹೆಸರು ತಂದಿದ್ದು ಬೇಸರ ಆಯ್ತು': ಡ್ರಗ್ಸ್ ಬಗ್ಗೆ ಡಿ ಬಾಸ್ ಪ್ರತಿಕ್ರಿಯೆ

  |

  'ಸ್ಯಾಂಡಲ್ ವುಡ್ ಗೆ ಮಾತ್ರವಲ್ಲ, ಇಡೀ ಕರ್ನಾಟಕಕ್ಕೆ ಇದು ಕಳಂಕ. ಡ್ರಗ್ಸ್ ಮಾಫಿಯಾ ಎಲ್ಲಾ ಕಡೆ ಇದೆ. ಇದರಲ್ಲಿ ಚಿರು ಹೆಸರು ತರುತ್ತಿರುವುದು ಬೇಸರದ ಸಂಗತಿ' ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ.

  Darshan first reaction about sandalwood drug mafia | Filmibeat Kannada

  ನಿನ್ನೆ (ಆಗಸ್ಟ್ 30) ಶಾಸಕ ಶಾಮನೂರು ಶಿವಶಂಕರಪ್ಪ ಮನೆಗೆ ಭೇಟಿ ನೀಡಿದ್ದ ದರ್ಶನ್ ಬಳಿಕ ದಾವಣಗೆರೆಯ ಬಾಪೂಜಿ ಗೆಸ್ಟ್ ಹೌಸ್ ನಲ್ಲಿ ತಂಗಿದ್ದರು. ಸಿನಿ ಇಂಡಸ್ಟ್ರಿ ಮೇಲೆ ಬಂದಿರುವ ಡ್ರಗ್ಸ್ ವಿಚಾರವಾಗಿ ಮಾಧ್ಯಮದವರ ಜೊತೆ ಮಾತನಾಡಿದ ದರ್ಶನ್, 'ಇಂಡಸ್ಟ್ರಿಗೆ ಬಂದು 26 ವರ್ಷ ಆಯ್ತು. ಲೈಟ್ ಮ್ಯಾನ್ ನಿಂದ ಇಲ್ಲಿಯವರೆಗೂ ಬಂದಿದ್ದೀನಿ. ನಾನು ಇದೂವರೆಗೂ ನೋಡಿಲ್ಲ ಮತ್ತು ಕೇಳಲಿಲ್ಲ' ಎಂದಿದ್ದಾರೆ. ಮುಂದೆ ಓದಿ..

  ಕೆಲವರು ಡ್ರಗ್ ತಗೋತಾರೆ, ನೋಡಿದ್ದೀನಿ, ನನಗೂ ಅಪ್ರೋಚ್ ಮಾಡಿದ್ರು: ಕಿರುತೆರೆ ನಟ ರಕ್ಷ್ಕೆಲವರು ಡ್ರಗ್ ತಗೋತಾರೆ, ನೋಡಿದ್ದೀನಿ, ನನಗೂ ಅಪ್ರೋಚ್ ಮಾಡಿದ್ರು: ಕಿರುತೆರೆ ನಟ ರಕ್ಷ್

   ಡ್ರಗ್ ಮಾಫಿಯಾದ ಬಗ್ಗೆ ನಟ ದರ್ಶನ್ ಪ್ರತಿಕ್ರಿಯೆ

  ಡ್ರಗ್ ಮಾಫಿಯಾದ ಬಗ್ಗೆ ನಟ ದರ್ಶನ್ ಪ್ರತಿಕ್ರಿಯೆ

  'ಆ ನಟ, ಈ ನಟ ಅಂತ ಊಹಾಪೋಹ ಬೇಡ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ತನಿಖೆ ಬಳಿಕ ಹೆಸರು ಬಹಿರಂಗವಾಗಲಿದೆ' ಎಂದಿದ್ದಾರೆ. 'ಕ್ಲಾಸ್ ರೂಮ್ ನಲ್ಲಿ ಫಸ್ಟ್ ರ್ಯಾಂಕ್ ಸ್ಟೂಡೆಂಟ್ ಇರ್ತಾನೆ, ಝಿರೋ ತೆಗೆಯೋನು ಇರ್ತಾನೆ. ಆ ಮಾತ್ರಕ್ಕೆ ಇಡೀ ಕ್ಲಾಸ್ ಝಿರೋ ಅಂತ ಹೇಳೋಕ್ಕಾಗಲ್ಲ' ಎಂದು ಹೇಳುವ ಮೂಲಕ ಇಡೀ ಚಿತ್ರರಂಗವನ್ನು ದೂಷಿಸಬೇಡಿ ಎಂದಿದ್ದಾರೆ.

   26 ವರ್ಷದಲ್ಲಿ ಇದೂವರೆಗೂ ನಾನು ನೋಡಿಲ್ಲ

  26 ವರ್ಷದಲ್ಲಿ ಇದೂವರೆಗೂ ನಾನು ನೋಡಿಲ್ಲ

  ಇಂದ್ರಜಿತ್ ಲಂಕೇಶ್ ಆರೋಪದ ಬಗ್ಗೆ ಏನು ಹೇಳುತ್ತೀರಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ದರ್ಶನ್, 'ಇನ್ನೊಬ್ಬರ ಬಗ್ಗೆ ಕಾಮೆಂಟ್ ಮಾಡಲ್ಲ' ಎಂದಿದ್ದಾರೆ. 'ಇಂಡಸ್ಟ್ರಿಗೆ ಬಂದು 26 ವರ್ಷ ಆಯ್ತು. ಲೈಟ್ ಮ್ಯಾನ್ ನಿಂದ ಇಲ್ಲಿಯವರೆಗೂ ಬಂದಿದ್ದೀನಿ. ನಾನು ಇದೂವರೆಗೂ ನೋಡಿಲ್ಲ ಮತ್ತು ಕೇಳಲಿಲ್ಲ' ಎಂದು ದರ್ಶನ್ ಹೇಳಿದ್ದಾರೆ.

  ಡ್ರಗ್ಸ್ ವಿವಾದದಲ್ಲಿ ಚಿರು ಸರ್ಜಾ ಹೆಸರು ತಂದಿದ್ದಕ್ಕೆ ಚೇತನ್ ಖಂಡನೆಡ್ರಗ್ಸ್ ವಿವಾದದಲ್ಲಿ ಚಿರು ಸರ್ಜಾ ಹೆಸರು ತಂದಿದ್ದಕ್ಕೆ ಚೇತನ್ ಖಂಡನೆ

   ಚಿರು ಬಗ್ಗೆ ದರ್ಶನ್ ಹೇಳಿದ್ದೇನು?

  ಚಿರು ಬಗ್ಗೆ ದರ್ಶನ್ ಹೇಳಿದ್ದೇನು?

  'ಸ್ಯಾಂಡಲ್ ವುಡ್ ಮಾತ್ರವಲ್ಲ, ಇಡೀ ಕರ್ನಾಟಕಕ್ಕೆ ಕಳಂಕವಿದು. ಡ್ರಗ್ ಮಾಫಿಯಾ ಎಲ್ಲಾ ಕಡೆ ಇದೆ ಎಂದು ದರ್ಶನ್ ಹೇಳಿದ್ದಾರೆ. ಚಿರು ಹೆಸರು ತುಂಬಾ ಕೇಳಿ ಬರುತ್ತಿದೆ. ಅವನು ಸತ್ತು 3 ತಿಂಗಳಾಗಿದೆ. ಎಲ್ಲಿದ್ದಾನೋ, ಹೇಗಿದ್ದಾನೋ. ಅಪ್ಪಿತಪ್ಪಿ ಆರೋಪ ಸಾಬೀತಾದರೆ, ಅವನನ್ನು ಕರೆದುಕೊಂಡು ಬಂದು ಶಿಕ್ಷೆ ಕೊಡಲಿಕ್ಕೆ ಆಗುತ್ತಾ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ಸಂಭಾವನೆಗೆ ಭಿಕ್ಷುಕರಂತೆ ಕಾದು, ಸೀಮೆಎಣ್ಣೆ-ಅಕ್ಕಿಗೆ ಕ್ಯೂ ನಿಂತವರು ನಾವು, ಇಂದು 2 ಸಿನಿಮಾಗೆ ಕುಬೇರರು: ಜಗ್ಗೇಶ್ಸಂಭಾವನೆಗೆ ಭಿಕ್ಷುಕರಂತೆ ಕಾದು, ಸೀಮೆಎಣ್ಣೆ-ಅಕ್ಕಿಗೆ ಕ್ಯೂ ನಿಂತವರು ನಾವು, ಇಂದು 2 ಸಿನಿಮಾಗೆ ಕುಬೇರರು: ಜಗ್ಗೇಶ್

   ಸತ್ತವರ ಬಗ್ಗೆ ಒಳ್ಳೆಯ ಮಾತನಾಡೋಣ

  ಸತ್ತವರ ಬಗ್ಗೆ ಒಳ್ಳೆಯ ಮಾತನಾಡೋಣ

  'ನನ್ನ ತಂದೆ-ತಾಯಿ ಹೇಳಿಕೊಟ್ಟ ಮಾತನ್ನು ಹೇಳುತ್ತೇನೆ, ಸತ್ತವನು ಕೊಲೆಗಾರನೇ ಆಗಿರಲಿ, ವರ್ಷದ ತಿಥಿ ಮಾಡುತ್ತೇವೆ. ಒಳ್ಳೆಯವನೋ ಕೆಟ್ಟವನೋ, ಸತ್ತವರ ಬಗ್ಗೆ ಒಳ್ಳೆಯ ಮಾತನಾಡೋಣ. ಕೆಟ್ಟದ್ದಂತು ಮಾತನಾಡಬೇಡಿ' ಎಂದು ದರ್ಶನ್ ಮನವಿ ಮಾಡಿಕೊಂಡಿದ್ದಾರೆ.

  English summary
  Actor Darshan speak about drug mafia link to Sandalwood and Chiranjeevi Sarja death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X