For Quick Alerts
  ALLOW NOTIFICATIONS  
  For Daily Alerts

  ರಿಯಾಲಿಟಿ ಶೋ ಗಳ ಸ್ಟಾರ್‌ಗಳು ಸಿಕ್ಕಿಹಾಕಿಕೊಳ್ತಾರೆ: ಪ್ರಶಾಂತ್ ಸಂಬರಗಿ

  |

  ರಿಯಾಲಿಟಿ ಶೋ ನ ಸ್ಟಾರ್‌ಗಳು ಮಾದಕ ವಸ್ತು ಮಾಫಿಯಾದಲ್ಲಿ ಸಿಕ್ಕಿ ಹಾಕಿಕೊಳ್ಳಲಿದ್ದಾರೆ ಎಂದು ಚಿತ್ರರಂಗದ ಹಲವು ನಟರಿಗೆ ಆಪ್ತರಾಗಿರುವ ಪ್ರಶಾಂತ್ ಸಂಬರಗಿ ಹೇಳಿದ್ದಾರೆ.

  Drug Mafia 15 ಜನ ಹೀರೋ, ಹೀರೋಯಿನ್ ದಾಖಲೆಯನ್ನು ಸಾಕ್ಷಿ ಸಮೇತ ಪೋಲೀಸರ ಕೈಗೆ ಕೊಟ್ಟ ಇ,ಲಂಕೇಶ್ |

  ಸರ್ಜಾ ಕುಟುಂಬಕ್ಕೆ ಹಾಗೂ ಚಿತ್ರರಂಗದ ಹಲವರಿಗೆ ಆಪ್ತವಾಗಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ, 'ಚಿತ್ರರಂಗದ ಕೆಲವು ನವಪೀಳಿಗೆ ನಟ-ನಟಿಯರಲ್ಲಿ ಮಾದಕ ವಸ್ತು ವ್ಯಸನವಿದೆ' ಎಂದು ಹೇಳಿದ್ದಾರೆ.

  ದೊಡ್ಡ ಸ್ಟಾರ್‌ಗಳು, ಕಷ್ಟಪಟ್ಟು ಮೇಲೆ ಬಂದ ನಟ-ನಟಿಯರು ಮಾದಕ ವ್ಯಸನದಿಂದ ದೂರವೇ ಉಳಿದಿದ್ದಾರೆ. ಆದರೆ ಕೆಲವು ನಟ-ನಟಿಯರು, ಟಿವಿ ನಟ-ನಟಿಯರಲ್ಲಿ ಮಾದಕ ವ್ಯಸನಿಗಳು ಇದ್ದಾರೆ ಎಂದು ಹೇಳಿದ್ದಾರೆ.

  ಇಂದ್ರಜಿತ್ ಲಂಕೇಶ್ ಸಿಸಿಬಿ ಪೊಲೀಸರ ಮುಂದೆ ಹಾಜರಾಗಿರುವ ವಿಷಯದ ಬಗ್ಗೆ ಇಂದು ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಸಂಬರಗಿ, 'ಮಾದಕ ವಸ್ತು ಮಾಫಿಯಾಕ್ಕೆ ಚಂದನವನದ ನಟರ ನಂಟು ಶೀಘ್ರವೇ ಹೊರಬೀಳಲಿದೆ. ಸಾಕಷ್ಟು ಮಂದಿಯ ಹೆಸರು ಬಹಿರಂಗಗೊಳ್ಳಲಿದೆ' ಎಂದಿದ್ದಾರೆ.

  'ಹತ್ತು, ಹದಿನೈದು ಮಂದಿಯಲ್ಲ ಇನ್ನೂ ಸಾಕಷ್ಟು ಜನರು ಈ ಜಾಲದಲ್ಲಿ ಇದ್ದಾರೆ ಎಲ್ಲರೂ ಸಿಕ್ಕಿಹಾಕಿಕೊಳ್ಳುತ್ತಾರೆ. ಅದರಲ್ಲಿಯೂ ರಿಯಾಲಿಟಿ ಶೋಗಳ ಖ್ಯಾತ ನಾಮರ ಹೆಸರುಗಳು ಆಚೆ ಬರಲಿವೆ' ಎಂದಿದ್ದಾರೆ ಪ್ರಶಾಂತ್ ಸಂಬರಗಿ.

  English summary
  Prashant Sambargi said, many reality show stars name will out in Drug mafia in Sandalwood case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X