For Quick Alerts
  ALLOW NOTIFICATIONS  
  For Daily Alerts

  ಕೆಲವರು ಡ್ರಗ್ ತಗೋತಾರೆ, ನೋಡಿದ್ದೀನಿ, ನನಗೂ ಅಪ್ರೋಚ್ ಮಾಡಿದ್ರು: ಕಿರುತೆರೆ ನಟ ರಕ್ಷ್

  |

  ಇಡೀ ಚಿತ್ರರಂಗ ಡ್ರಗ್ ಮಾಫಿಯಾದಲ್ಲಿದೆ ಎನ್ನುವುದು ತಪ್ಪು, ಯಾರೋ ಕೆಲವರು ಮಾಡಿದ ತಪ್ಪಿಗೆ ಚಿತ್ರರಂಗ ಅಂತ ಹೇಳುವುದು ಸರಿಯಲ್ಲ, ನನಗೂ ಅಪ್ರೋಚ್ ಮಾಡಿದ್ರು, ಆದರೆ ನಾನು ಮುಟ್ಟಲಿಲ್ಲ ಎಂದು ಕಿರುತೆರೆ ನಟ ರಕ್ಷ್ ಹೇಳಿದ್ದಾರೆ.

  Drug Mafia 15 ಜನ ಹೀರೋ, ಹೀರೋಯಿನ್ ದಾಖಲೆಯನ್ನು ಸಾಕ್ಷಿ ಸಮೇತ ಪೋಲೀಸರ ಕೈಗೆ ಕೊಟ್ಟ ಇ,ಲಂಕೇಶ್ |

  ಸ್ಯಾಂಡಲ್ ವುಡ್ ಗೆ ಡ್ರಗ್ ಮಾಫಿಯಾದ ನಂಟಿದೆ ಎನ್ನುವ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ. ಡ್ರಗ್ ಡೀಲರ್ ಅನಿಕಾ ಬಂಧನದ ಬಳಿಕ ಸ್ಯಾಂಡಲ್ ವುಡ್ ನ ಕೆಲವು ನಟ-ನಟಿಯರು ಡ್ರಗ್ ವ್ಯಸನಿಗಳಾಗಿದ್ದಾರೆ ಎನ್ನುವ ಸ್ಫೋಟಕ ಸತ್ಯ ಬಹಿರಂಗವಾದ ಬೆನ್ನಲ್ಲೇ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತಷ್ಟು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಈಗ ನಟ ರಕ್ಷ್ ಸಹ ಈ ಕುರಿತು ಖಾಸಗಿ ವಾಹಿನಿ ಜೊತೆ ಮಾತನಾಡಿದ್ದಾರೆ.

  ಸಂಭಾವನೆಗೆ ಭಿಕ್ಷುಕರಂತೆ ಕಾದು, ಸೀಮೆಎಣ್ಣೆ-ಅಕ್ಕಿಗೆ ಕ್ಯೂ ನಿಂತವರು ನಾವು, ಇಂದು 2 ಸಿನಿಮಾಗೆ ಕುಬೇರರು: ಜಗ್ಗೇಶ್

   ಇಡೀ ಚಿತ್ರರಂಗವನ್ನು ದೂರ ಬೇಡಿ

  ಇಡೀ ಚಿತ್ರರಂಗವನ್ನು ದೂರ ಬೇಡಿ

  'ಚಿತ್ರರಂಗದಲ್ಲಿ ಅನೇಕ ಹಿರಿಯ ಕಲಾವಿದರು ಸಂಸ್ಕೃತಿಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿದ್ದಾರೆ. ಯಾರೋ ಒಬ್ಬರು ಮಾಡಿದ ತಪ್ಪಿದೆ ಇಡೀ ಇಂಡಸ್ಟ್ರಿ ಎಂದು ಹೇಳುವುದು ಸರಿಯಲ್ಲ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿ' ಎಂದು ನಟ ರಕ್ಷ್ ಹೇಳಿದ್ದಾರೆ.

   ನನಗೂ ಅಪ್ರೋಚ್ ಮಾಡಿದ್ರು- ರಕ್ಷ್

  ನನಗೂ ಅಪ್ರೋಚ್ ಮಾಡಿದ್ರು- ರಕ್ಷ್

  'ಕೆಲವರು ಇದ್ದಾರೆ. ಆದರೆ ಅವರನ್ನು ಇಂಡಸ್ಟ್ರಿಯವರು ಅಂತ ಕರೆಯಲ್ಲ. ಯಾಕಂದ್ರೆ ಅವರನ್ನು ಪರದೆ ಮೇಲೆ ನೋಡಿದ ನೆನಪಿಲ್ಲ. ಇಂಡಸ್ಟ್ರಿಗೆ ಸಂಬಂಧ ಪಟ್ಟವರು ಅವರು. ನಾನು ನೋಡಿದ್ದೀನಿ, ನನಗೂ ಅಪ್ರೋಚ್ ಮಾಡಿದ್ದಾರೆ, ನೀವು ಮಾಡ್ತೀರಾ ಅಂತ ಕೇಳಿದ್ದಾರೆ. ಆದರೆ ನಾನು, ನೀವೆಲ್ಲ ತುಂಬಾ ಆಳಕ್ಕೆ ಹೊರಟು ಹೋಗಿದ್ದೀರಾ ಮೇಲಕ್ಕೆ ಯಾವಾಗ ಎದ್ದು ಬರ್ತೀರಾ ಅಂತ ಹೇಳಿದ್ದೀನಿ. ಹೀಗೆ ಸಾವಿರದಲ್ಲಿ ಒಬ್ಬರು ಇಬ್ಬರು ಇರ್ತಾರೆ, ಆದರೆ ಅವರು ಸ್ಯಾಂಡಲ್ ವುಡ್ ನವರು ಅಂತ ಹೇಳುವುದು ಸರಿಯಲ್ಲ." ಎಂದು ಹೇಳಿದ್ದಾರೆ.

  ಡ್ರಗ್ ದಂಧೆ ಆರೋಪಿ ಅನಿಕಾ ನನಗೆ ಗೊತ್ತು- ಬಿಗ್ ಬಾಸ್ ಖ್ಯಾತಿಯ ಆ್ಯಡಂ ಪಾಷಾ

   ಚಿರಂಜೀವಿ ಸರ್ಜಾ ಬಗ್ಗೆ ರಕ್ಷ್ ಪ್ರತಿಕ್ರಿಯೆ

  ಚಿರಂಜೀವಿ ಸರ್ಜಾ ಬಗ್ಗೆ ರಕ್ಷ್ ಪ್ರತಿಕ್ರಿಯೆ

  'ಚಿರು ಒಳ್ಳೆಯ ಮನುಷ್ಯ. ಪ್ರೀತಿಯ ವ್ಯಕ್ತಿ. ಚಿರು ಜೊತೆ ಕೆಲಸ ಮಾಡಿದ್ದೀನಿ, ಒಟ್ಟಿಗೆ ಊಟ ಮಾಡಿದ್ದೀವಿ. ಅವರನ್ನು ಹುಡುಕಿಕೊಂಡು ಹೋಗಿ ಊಟ ಮಾಡಿದ್ದೀನಿ. ಅವರು ಯಾವತ್ತು ಡ್ರಗ್ ಬಗ್ಗೆ ಮಾತನಾಡಿಲ್ಲ. ಅವರ ಪತ್ನಿ ಗರ್ಭಿಣಿ, ಇನ್ನು ಚಿರು ಸಾವಿನ ನೋವಿನಲ್ಲಿದ್ದಾರೆ. ಪ್ರತೀ ದಿನ ನೆನಪುಗಳು ಜಾಸ್ತಿ ಆಗುತ್ತಾ ಇರುತ್ತೆ. ಈ ಸಮಯದಲ್ಲಿ ಆಕೆಗೆ ಯಾರು ನೋವು ಕೊಡಬೇಡಿ, ಆ ಕುಟುಂಬವನ್ನು ಚೇತರಿಸಿಕೊಳ್ಳಲು ಬಿಡಿ' ಎಂದು ರಕ್ಷ್ ಮನವಿ ಮಾಡಿಕೊಂಡಿದ್ದಾರೆ.

   ಡ್ರಗ್ ಎಲ್ಲಾ ಕಡೆ ಇದೆ, ಇದರ ವಿರುದ್ಧ ಒಟ್ಟಿಗೆ ಹೋರಾಡಬೇಕು

  ಡ್ರಗ್ ಎಲ್ಲಾ ಕಡೆ ಇದೆ, ಇದರ ವಿರುದ್ಧ ಒಟ್ಟಿಗೆ ಹೋರಾಡಬೇಕು

  ಡ್ರಗ್ಸ್ ಎನ್ನುವುದು ಎಲ್ಲಾ ಕಡೆ ಇದೆ. ಸ್ಯಾಂಡಲ್ ವುಡ್ ಮಾತ್ರವಲ್ಲ ರಾಜಕೀಯ ಮಕ್ಕಳು ಸಹ ಡ್ರಗ್ ವ್ಯಸನಿಗಳಾಗಿರಬಹುದು. ಚಿತ್ರರಂಗದ ಜಾಲ ಎನ್ನುವುದು ತಪ್ಪು. ಮಾದಕ ವಸ್ತುವಿನ ವಿರುದ್ಧ ಇಡೀ ಚಿತ್ರರಂಗ ಒಟ್ಟಿಗೆ ನಿಂತು ಹೋರಾಡಬೇಕಿದೆ. ಅದನ್ನು ಬಿಟ್ಟು ಅವರ ಮೇಲೆ ಇವರ ಮೇಲೆ ಆರೋಪ ಮಾಡುತ್ತಾ ಕೂರುವುದು ಸರಿಯಲ್ಲ ಎಂದಿದ್ದಾರೆ.

  English summary
  Famous TV Artist Raksh speak about drug mafia link to Sandalwood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X