For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: 'ಕೆಂಪೇಗೌಡ-2' ಸಿನಿಮಾ ನಿರ್ಮಾಪಕನ ಮನೆ ಮೇಲೆ ದಾಳಿ

  |

  ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದ ತನಿಖೆ ಇನ್ನೂ ಜಾರಿಯಲ್ಲಿದ್ದು, ಕೋಮಲ್ ನಟನೆಯ 'ಕೆಂಪೇಗೌಡ 2' ಸಿನಿಮಾ ನಿರ್ಮಾಣ ಮಾಡಿದ್ದ ನಿರ್ಮಾಪಕನ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

  ಕೋಮಲ್ ನಟಿಸಿದ್ದ 'ಕೆಂಪೇಗೌಡ 2' ಸಿನಿಮಾವನ್ನು ನಿರ್ಮಾಣ ಮಾಡಿದ್ದ ಶಂಕರೇಗೌಡ ಅವರ ಬೆಂಗಳೂರಿನ ಮನೆ ಹಾಗೂ ಕಚೇರಿಯ ಮೇಲೆ ಗೋವಿಂದ ಪುರ ಪೊಲೀಸ್ ಠಾಣೆಯ ಪೊಲೀಸರು ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.

  ಇದೇ ಡ್ರಗ್ಸ್ ಪ್ರಕರಣಕ್ಕೆ ಸಂಬಂದಿಸಿದಂತೆ ಕೆಲವು ದಿನಗಳ ಹಿಂದಷ್ಟೆ ಬಿಗ್‌ಬಾಸ್ ಮಾಜಿ ಸ್ಪರ್ಧಿ ಮುಸ್ತಾನ್ ಮನೆಯ ಮೇಲೆ ಗೋವಿಂದಪುರ ಪೊಲೀಸ್ ಠಾಣೆ ಸಿಬ್ಬಂದಿ ದಾಳಿ ನಡೆಸಿ ಆತನನ್ನು ಬಂಧಿಸಿದ್ದರು. ಈಗ ಮಸ್ತಾನ್ ನೀಡಿರುವ ಹೇಳಿಕೆಯಂತೆಯೇ ಶಂಕರೇಗೌಡ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ ಎನ್ನಲಾಗುತ್ತಿದೆ.

  ಶಂಕರೇಗೌಡ ಅವರ ಕಚೇರಿ ಸಂಜಯ್ ನಗರದಲ್ಲಿದ್ದು, ದಾಳಿ ವೇಳೆ ಶಂಕರೇಗೌಡ ಅವರು ಕಚೇರಿಯಲ್ಲಿಯೇ ಇದ್ದರು ಎನ್ನಲಾಗಿದೆ.

  ರಸ್ತೆ ವಿಚಾರಕ್ಕೆ ಗ್ರಾಮಸ್ಥರೊಡನೆ ಕಚ್ಚಾಡಿಕೊಂಡ ಯಶ್ ತಂದೆ-ತಾಯಿ | Filmibeat Kannada

  ಡ್ರಗ್ಸ್ ಪ್ರಕರಣವು ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಸದ್ದು ಮಾಡಿದೆ. ನಟಿ ರಾಗಿಣಿ, ಸಂಜನಾ ಗಲ್ರಾನಿ ಇಬ್ಬರೂ ಇದೇ ಪ್ರಕರಣದಲ್ಲಿ ಹಲವು ದಿನಗಳ ಕಾಲ ಜೈಲು ವಾಸ ಅನುಭವಿಸಿದ್ದಾರೆ. ಹಲವು ದೊಡ್ಡ-ದೊಡ್ಡ ಹೆಸರುಗಳು ಡ್ರಗ್ಸ್ ಪಟ್ಟಿಯಲ್ಲಿ ಕೇಳಿಬಂದಿದೆ. ದಿಗಂತ್, ಯೋಗಿ , ಐಂದ್ರಿತಾ ರೇ ಅವರುಗಳು ಸಹ ವಿಚಾರಣೆ ಎದುರಿಸಿದ್ದಾರೆ.

  English summary
  Bengaluru police raid on producer Shankre Gowda's house and office releated to drugs case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X