ರಾಗಿಣಿ ಅರೆಸ್ಟ್: ಬೆಳಗ್ಗೆಯಿಂದ ಇಲ್ಲಿಯವರೆಗೂ ನಡೆದಿದ್ದೇನು? ಸಂಪೂರ್ಣ ವಿವರ
ಡ್ರಗ್ಸ್ ಜಾಲದಲ್ಲಿ ನಟಿ ರಾಗಿಣಿ ಸಂಪರ್ಕ ಹೊಂದಿದ್ದಾರೆ ಎಂಬ ಅನುಮಾನದಲ್ಲಿ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಬುಧವಾರ ಸಂಜೆ ನೋಟಿಸ್ ನೀಡಿದ್ದರು. ಆದರೆ, ಸೋಮವಾರ ಸಿಸಿಬಿ ವಿಚಾರಣೆಗೆ ಹಾಜರಾಗುವೆ ಎಂದು ಹೇಳಿದ್ದ ನಟಿ ರಾಗಿಣಿಗೆ ಶುಕ್ರವಾರ ಬೆಳಗ್ಗೆ ಅಘಾತ ಕಾದಿತ್ತು.
Recommended Video
ಸಿಸಿಬಿ ಪೊಲೀಸರು ಹೇಳಿದ ಸಮಯಕ್ಕೆ ವಿಚಾರಣೆಗೆ ಬಾರದ ಹಿನ್ನೆಲೆ ರಾಗಿಣಿ ಮನೆಗೆ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿ, ಮೊಬೈಲ್ ಫೋನ್, ಲ್ಯಾಪ್‌ಟ್ಯಾಪ್ ವಶಪಡಿಸಿಕೊಂಡರು. ಅಲ್ಲಿಂದ ಏನೆಲ್ಲಾ ಆಯ್ತು? ಮುಂದೆ ಓದಿ...

7 ಗಂಟೆಗೆ ಸಿಸಿಬಿ ದಾಳಿ
ಡ್ರಗ್ಸ್ ಜಾಲದಲ್ಲಿ ನಂಟು ಹೊಂದಿರುವ ಆರೋಪಕ್ಕೆ ಸ್ಪಷ್ಟನೆ ನೀಡಲು ಸ್ವತಃ ರಾಗಿಣಿ ಸಿಸಿಬಿ ಕಚೇರಿಗೆ ಬರುವವರೆಗೂ ಪೊಲೀಸರು ಕಾಯಲಿಲ್ಲ. ಶುಕ್ರವಾರ ಬೆಳಗ್ಗೆ ಸುಮಾರು 7 ಗಂಟೆಗೆ ದಿಢೀರ್ ಅಂತ ಯಲಹಂಕದ ಅನನ್ಯ ಅಪಾರ್ಟ್ಮೆಂಟ್‌ನಲ್ಲಿರುವ ರಾಗಿಣಿ ಮನೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ನಟಿಯನ್ನು ವಶಕ್ಕೆ ಪಡೆದುಕೊಂಡರು.

ಮೊಬೈಲ್ ವಶಕ್ಕೆ!
ರಾಗಿಣಿ ಮನೆಗೆ ಭೇಟಿ ನೀಡಿದ ಸಿಸಿಬಿ ಅಧಿಕಾರಿಗಳು ರಾಗಿಣಿ ಸಂಬಂಧಿಸಿದ ಎರಡು ಮೊಬೈಲ್ ಹಾಗೂ ಲ್ಯಾಪ್‌ಟ್ಯಾಪ್ ವಶಕ್ಕೆ ಪಡೆದರು. ರಾಗಿಣಿ ಅವರ ಕಾರು ಹಾಗೂ ಮನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿದರು. ಈ ವೇಳೆ ಮೊಬೈಲ್‌ನಲ್ಲಿ ವಾಟ್ಸಾಪ್ ಡಿಲೀಟ್ ಮಾಡಿರುವುದು ಕಂಡು ಬಂದಿದೆ ಎಂದು ಹೇಳಲಾಗಿದೆ.

ಸಿಸಿಬಿ ಕಚೇರಿಗೆ ರಾಗಿಣಿ ಆಗಮನ
ಪೊಲೀಸರ ಜೊತೆಯಲ್ಲಿಯೇ ನಟಿ ರಾಗಿಣಿ ಅವರನ್ನು ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಮಧ್ಯಾಹ್ನ ಸುಮಾರು 11.30 ರಿಂದ 12 ಗಂಟೆ ಸಮಯಕ್ಕೆ ಕರೆತರಲಾಯಿತು.

ಏಳು ಗಂಟೆಗಳ ವಿಚಾರಣೆ
ಮಧ್ಯಾಹ್ನದಿಂದ ಶುರುವಾದ ರಾಗಿಣಿ ಅವರ ವಿಚಾರಣೆ ಸಂಜೆ ಏಳು ಗಂಟೆಯವರೆಗೂ ನಡೆದಿದೆ. ಈ ವೇಳೆ ರಾಗಿಣಿ ಅವರಿಂದ ಹಲವು ಮಾಹಿತಿ ಕಲೆ ಹಾಕಿದ್ದಾರೆ. ರವಿಶಂಕರ್ ಜೊತೆಗಿನ ನಂಟಿನ ಬಗ್ಗೆಯೂ ಪ್ರಶ್ನಿಸಿದ್ದಾರೆ.

ರಾಗಿಣಿ ಅರೆಸ್ಟ್
ಸುದೀರ್ಘವಾಗಿ ವಿಚಾರಣೆ ಮಾಡಿದ ಸಿಸಿಬಿ ಅಧಿಕಾರಿಗಳು ಏಳು ಗಂಟೆಯ ಬಳಿಕ ರಾಗಿಣಿ ಅವರನ್ನು ಬಂಧಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ, ಮತ್ತೆ ಸಿಸಿಬಿ ವಶಕ್ಕೆ ಕೇಳುವ ಸಾಧ್ಯತೆ ಇದೆ.


Click it and Unblock the Notifications











