'ಪಾದರಸ'ದಂತೆ ಬದಲಾದ ಸಂಚಾರಿ ವಿಜಯ್
'ಪಾದರಸ' ಸಂಚಾರಿ ವಿಜಯ್ ಅಭಿನಯದ ಹೊಸ ಸಿನಿಮಾ. ಚಿತ್ರದ ಟ್ರೇಲರ್ ಅನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಿಡುಗಡೆ ಮಾಡಿ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹಾಡಿದ್ದಾರೆ. ಟ್ರೇಲರ್ ನೋಡಿದರೆ ಸಂಚಾರಿ ವಿಜಯ್ ಇಂಥದೊಂದು ಪಾತ್ರವನ್ನು ಮಾಡುತ್ತಾರಾ? ಅಂತ ಶಾಕ್ ಆಗ್ತಿರಾ.
ಈಗಾಗಲೇ ಸಾಕಷ್ಟು ಪಾತ್ರವನ್ನು ನಿರ್ವಹಿಸಿರುವ ಸಂಚಾರಿ ವಿಜಯ್ 'ಪಾದರಸ' ಚಿತ್ರದ ಮೂಲಕ ವಿಭಿನ್ನವಾಗಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸಂಚಾರಿ ವಿಜಯ್ ಗೆ ಪಾದರಸ ಸಿನಿಮಾದಲ್ಲಿ ಇಬ್ಬರು ನಾಯಕಿಯರು. ವೈಷ್ಣವಿ ಹಾಗೂ ಮನಸ್ವಿ. ಇನ್ನು ಸಂಚಾರಿ ವಿಜಯ್ ಅವರ ಸ್ನೇಹಿತನ ಪಾತ್ರದಲ್ಲಿ ನಿರಂಜನ್ ದೇಶಪಾಂಡೆ ಕಾಣಿಸಿಕೊಂಡಿದ್ದಾರೆ.

ಆರ್ಟ್ ಅಂಡ್ ಸೋಲ್ ಮಿಡಿಯಾ ಸರ್ವಿಸ್ ಲಾಂಛನದಲ್ಲಿ 'ಪಾದರಸ' ಚಿತ್ರ ನಿರ್ಮಾಣವಾಗಿದ್ದು, ಹೃಷೀಕೇಶ್ ಜಂಬರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಗೆ ಎಟಿ ರವೀಶ್ ಸಂಗೀತ ನಿರ್ದೇಶನ ಮಾಡಿದ್ದು, ವಿಶೇಷ ಎಂದರೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಚಿತ್ರದ ಆಡಿಯೋ ಬಿಡುಗಡೆ ಮಾಡಿಕೊಟ್ಟಿದ್ದಾರೆ.

ವಿಜಯ್ ಜೊತೆಗೆ ಹಿರಿಯ ನಟ ಜೈಜಗದೀಶ್, ವಿಜಯ್ ಚೆಂಡೂರ್ ಸೇರಿದಂತೆ ಸಾಕಷ್ಟು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ಹಾಡುಗಳನ್ನು ಮತ್ತು ಟ್ರೇಲರ್ ರಿಲೀಸ್ ಮಾಡಿರುವ ಚಿತ್ರತಂಡ ಆದಷ್ಟು ಬೇಗ ಸಿನಿಮಾವನ್ನು ತೆರೆ ಮೇಲೆ ತರಲು ಸಜ್ಜಾಗಿದ್ದಾರೆ.


Click it and Unblock the Notifications











