ದುಬೈ ಕನ್ನಡಿಗರಿಂದ ದರ್ಶನ್ ಹಾಗೂ ತರುಣ್ ಸುಧೀರ್‌ಗೆ ಸಿಕ್ತು ಹೊಸ ಬಿರುದು

ದರ್ಶನ್ ಹಾಗೂ ತರುಣ್ ಸುಧೀರ್ ಜೋಡಿಯ 'ಕಾಟೇರ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಎರಡನೇ ವಾರವೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕರ್ನಾಟಕ ಮಾತ್ರವಲ್ಲ ವಿದೇಶಗಳಲ್ಲಿ ಕೂಡ ಸಿನಿಮಾ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ದುಬೈನಲ್ಲಿ ನಡೆದ ಚಿತ್ರದ ಸ್ಪೆಷಲ್ ಪ್ರೀಮಿಯರ್‌ ಶೋನಲ್ಲಿ ಚಿತ್ರತಂಡ ಭಾಗಿ ಆಗಿತ್ತು.

ದುಬೈ ಕನ್ನಡಿಗರು ನಟ ದರ್ಶನ್ ಹಾಗೂ ನಿರ್ದೇಶಕ ತರುಣ್ ಸುಧೀರ್‌ಗೆ ಹೊಸ ಬಿರುದು ಕೊಟ್ಟಿದ್ದಾರೆ. ಈಗಾಗಲೇ 'ಕಾಟೇರ' ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಧೂಳೆಬ್ಬಿಸಿದೆ. ಎರಡನೇ ವಾರಾಂತ್ಯದಲ್ಲೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿದೆ ಆಗಿದೆ. ಯುಎಸ್‌, ನೆದರ್‌ಲ್ಯಾಂಡ್, ಒಮನ್ ಸೇರಿದಂತೆ ವಿದೇಶದ ಹಲವ ಭಾಗಗಳಲ್ಲಿ 'ಕಾಟೇರ'ನ ಕಾರುಬಾರು ನಡೀತಿದೆ. ಅಲ್ಲಿರುವ ಕನ್ನಡಿಗರು ಮುಗಿಬಿದ್ದು ಸಿನಿಮಾ ನೋಡಿ ಖುಷಿಪಡುತ್ತಿದ್ದಾರೆ.

Dubai Kannadigas gave new titels to Kaatera actor Darshan and Tharun sudhir

ಈಗಾಗಲೇ ಅಭಿಮಾನಿಗಳ ನಟ ದರ್ಶನ್‌ಗೆ ಹಲವು ಬಿದುರುಗಳನ್ನು ಕೊಟ್ಟಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಎನ್ನುವ ಬಿರುದು ಬಹಳ ಹಿಂದೆಯೇ ದರ್ಶನ್ ಹೆಸರಿನ ಜೊತೆ ಸೇರಿಕೊಂಡಿತ್ತು. ಇತ್ತೀಚೆಗೆ ಡಿಬಾಸ್ ಎಂದೇ ದರ್ಶನ್ ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಗಿಟ್ಟಿಸಿಕೊಂಡಿದ್ದಾರೆ. ಹೋದಲ್ಲಿ ಬಂದಲ್ಲಿ ಡಿಬಾಸ್.. ಡಿಬಾಸ್ ಕೂಡ ಕೇಳಿಬರುತ್ತಿದೆ. ಇದೀಗ 'ಕರುನಾಡ ಅಧಿಪತಿ' ಮತ್ತೊಂದು ಬಿರುದು ದರ್ಶನ್‌ಗೆ ಸಿಕ್ಕಿದೆ.

ದುಬೈ ಕನ್ನಡಿಗರು 'ಕರುನಾಡ ಅಧಿಪತಿ' ಎಂಬ ಬಿರುದನ್ನು ನೀಡಿ ನಟ ದರ್ಶನ್‌ನ ಸನ್ಮಾನಿಸಿ ಸಂಭ್ರಮಿಸಿದ್ದಾರೆ. ದರ್ಶನ್ ಮಾತ್ರವಲ್ಲ ತರುಣ್ ಸುಧೀರ್‌ಗೆ 'ಹ್ಯಾಟ್ರಿಕ್ ಡೈರೆಕ್ಟರ್' ಎನ್ನುವ ಬಿರುದು ಸಿಕ್ಕಿದೆ. ತರುಣ್ ನಿರ್ದೇಶನದ 'ಚೌಕ', 'ರಾಬರ್ಟ್' ಈಗ 'ಕಾಟೇರ' ಹೀಗೆ 3 ಸಿನಿಮಾಗಳು ಸೂಪರ್ ಹಿಟ್ ಆಗಿದೆ. ಹಾಗಾಗಿ ಈ ಬಿರುದು ಕೊಟ್ಟಿದ್ದಾರೆ.

ತರುಣ್‌ ಸುಧೀರ್ ದುಬೈ ಕನ್ನಡಿಗರು ಕೊಟ್ಟ ಈ ಬಿರುದನ್ನು ಸ್ವೀಕರಿಸಲು ಕೊಂಚ ಹಿಂಜರಿದರು. ಆದರೆ ನಟ ದರ್ಶನ್ ಮುಂದೆ ನಿಂತು ಪದಕ ನೀಡಿದರು. ಸದ್ಯ ಈ ವಿಡಿಯೋ ಹಾಗೂ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ತರುಣ್ ನಿರ್ದೇಶನದ ಮೂರು ಸಿನಿಮಾಗಳಲ್ಲಿ ದರ್ಶನ್ ನಟಿಸಿರುವುದು ವಿಶೇಷ.

2017ರಲ್ಲಿ ಬಂದ 'ಚೌಕ' ಚಿತ್ರದಲ್ಲಿ 'ರಾಬರ್ಟ್' ಎನ್ನುವ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ತರುಣ್- ದರ್ಶನ್ ಜೋಡಿಯ 'ರಾಬರ್ಟ್' ಸಿನಿಮಾ ಎರಡು ವರ್ಷಗಳ ಹಿಂದೆ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಇದೀಗ 'ಕಾಟೇರ' ಮಾಡುತ್ತಿರುವ ದಾಖಲೆಗಳು ಕಣ್ಣಮುಂದೆ ಇದೆ. ಇದೇ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಮಾಡುವ ಮಾತುಗಳು ಕೂಡ ಕೇಳಿಬರ್ತಿದೆ.

ಸದ್ಯ ದರ್ಶನ್ 'ಡೆವಿಲ್- ದಿ ಹೀರೊ' ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ಮಿಲನಾ ಪ್ರಕಾಶ್ ಆಕ್ಷನ್ ಕಟ್ ಹೇಳಿದ್ದಾರೆ. ಬಳಿಕ ತಮ್ಮ ಆಪ್ತ ಸಚ್ಚಿದಾನಂದ ಹಾಗೂ ನಿರ್ಮಾಪಕ ಎಂ.ಜಿ ರಾಮಮೂರ್ತಿಯವರಿಗೆ ಸಿನಿಮಾ ಮಾಡಿಕೊಡುವುದಾಗಿ ಹೇಳಿದ್ದಾರೆ. ಇವರೆಡರಲ್ಲಿ ಒಂದು ಸಿನಿಮಾವನ್ನು ತರುಣ್ ನಿರ್ದೇಶನ ಮಾಡುವ ಸಾಧ್ಯತೆಯಿದೆ.

Dubai Kannadigas gave new titels to Kaatera actor Darshan and Tharun sudhir

ಸಂಕ್ರಾಂತಿ ಸಂಭ್ರಮದಲ್ಲಿ ಕನ್ನಡದಲ್ಲಿ ಯಾವುದೇ ಹೊಸ ಸಿನಿಮಾ ಬಿಡುಗಡೆ ಆಗುತ್ತಿಲ್ಲ. 'ಕಾಟೇರ' 2ನೇ ವಾರಕ್ಕೆ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಿಸಿಕೊಂಡು ಪ್ರದರ್ಶನ ಕಾಣುತ್ತಿದೆ. ಎರಡನೇ ವಾರಾಂತ್ಯ ಅಂದ್ರೆ ಸಂಕ್ರಾಂತಿ ಸಂಭ್ರಮದಲ್ಲೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣುವ ನಿರೀಕ್ಷೆಯಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ನಿರೀಕ್ಷೆ ಮೀರಿ ಎಲ್ಲಾ ವಿಭಾಗಗಳಲ್ಲೂ ಸಿನಿಮಾ ಒಳ್ಳೆ ಅಂಕ ಪಡೆದುಕೊಂಡಿದೆ.

More from Filmibeat

English summary
Kaatera actor Darshan and Tharu sudhir got special titels from fans
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X