twitter
    For Quick Alerts
    ALLOW NOTIFICATIONS  
    For Daily Alerts

    ನಾಲ್ಕೈದು ಭಾಷೆಯಲ್ಲಿ ಚಿತ್ರ ಮಾಡಿದ್ರೆ ಪ್ಯಾನ್ ಇಂಡಿಯಾ ಆಗ್ಬಿಡಲ್ಲ; ದೊಡ್ಡ ಚಿತ್ರಕ್ಕೆ ಟಾಂಗ್ ಕೊಟ್ಟ ರಿಷಬ್ ಶೆಟ್ಟಿ!

    |

    ಸದ್ಯ ಭಾರತದಾದ್ಯಂತ ಪ್ಯಾನ್ ಇಂಡಿಯಾ ಎಂಬ ವಿಷಯದ ಟ್ರೆಂಡ್ ನಡೆಯುತ್ತಿದೆ. ಮೂಲ ಭಾಷೆಯ ಸಿನಿಮಾವನ್ನು ಇತರೆ ನಾಲ್ಕೈದು ಭಾಷೆಗಳಿಗೆ ಡಬ್ಬಿಂಗ್ ಮಾಡಿ ಅದನ್ನು ಆಯಾ ರಾಜ್ಯಗಳಲ್ಲಿ ಬಿಡುಗಡೆಗೊಳಿಸುವುದನ್ನು ಪ್ಯಾನ್ ಇಂಡಿಯಾ ಎನ್ನುತ್ತಾರೆ. ಅಂದಹಾಗೆ ಈ ಪ್ಯಾನ್ ಇಂಡಿಯಾ ಎಂಬ ಕಾನ್ಸೆಪ್ಟ್ ಮೊದಲು ಹುಟ್ಟುಹಾಕಿದ್ದು ನಾವೇ ಎಂದು ಹೇಳಿಕೊಳ್ಳುವ ಹಲವು ನಿರ್ದೇಶಕರು ಮತ್ತು ನಟರಿದ್ದಾರೆ. ಆದರೆ ಪ್ಯಾನ್ ಇಂಡಿಯಾ ಎಂಬ ಕಾನ್ಸೆಪ್ಟ್ ಅಣ್ಣಾವ್ರ ಕಾಲದಲ್ಲೂ ಇತ್ತು ಹಾಗೂ ಉಪೇಂದ್ರ ಅವರ ಕಾಲದಲ್ಲಿಯೂ ಸಹ ಇತ್ತು. ಹೀಗಾಗಿ ಈ ಪ್ಯಾನ್ ಇಂಡಿಯಾ ಎಂಬುದು ಹೊಸ ವಿಷಯವೇನಲ್ಲ.

    ಆದರೆ ಇತ್ತೀಚೆಗೆ ಈ ಪ್ಯಾನ್ ಇಂಡಿಯಾ ಎಂಬ ವಿಷಯದ ಕಾವು ಮಾತ್ರ ಜೋರಾಗಿದೆ. ಯಾರಾದರೂ ಸ್ಟಾರ್ ನಟರ ಚಿತ್ರ ಸೆಟ್ಟೇರಿದರೆ ಸಾಕು, 'ಏನು ಸಿನಿಮಾ ಬರೀ ಕನ್ನಡನಾ ಅಥವಾ ಪ್ಯಾನ್ ಇಂಡಿಯಾನಾ?' ಎಂಬ ಪ್ರಶ್ನೆ ಎಸೆಯುವವರ ಸಂಖ್ಯೆ ದೊಡ್ಡ ಮಟ್ಟದಲ್ಲಿಯೇ ಇದೆ. ಆದರೆ ಈ ಪ್ಯಾನ್ ಇಂಡಿಯಾ ಎಂಬ ಸಬ್ಜೆಕ್ಟ್ ಸರಿಯಾಗಿ ಕೆಲಸ ನಿರ್ವಹಿಸಿದ್ದು ಕೆಲ ಚಿತ್ರಗಳಲ್ಲಿ ಮಾತ್ರ. ನೇರವಾಗಿ ಹೇಳಬೇಕೆಂದರೆ ಕೆಜಿಎಫ್ ಚಾಪ್ಟರ್ 2 ಹೊರತುಪಡಿಸಿ ಉಳಿದ ಚಿತ್ರಗಳನ್ನ ಸಂಪೂರ್ಣ ಪ್ಯಾನ್ ಇಂಡಿಯಾ ಎಂದು ಹೇಳುವುದು ಕಷ್ಟ.

    ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ದರ್ಶನ್ ನಟನೆ: ಸಂಭಾವನೆಯಾಗಿ ಸಿಕ್ತು ದುಬಾರಿ ವಾಚ್!ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ದರ್ಶನ್ ನಟನೆ: ಸಂಭಾವನೆಯಾಗಿ ಸಿಕ್ತು ದುಬಾರಿ ವಾಚ್!

    ಏಕೆಂದರೆ ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲಿಯೂ ಒಳ್ಳೆ ವೀಕ್ಷಣೆಯನ್ನು ಪಡೆದುಕೊಂಡಿತು. ಅದೇ ಪುಷ್ಪ ಪ್ಯಾನ್ ಇಂಡಿಯಾ ಎಂದು ಬಂದರೂ ಕನ್ನಡದಲ್ಲಿ ವೀಕ್ಷಿಸಲೇ ಇಲ್ಲ, ಬಾಹುಬಲಿ ಸರಣಿ ಕತೆ ಕೂಡ ಇದೆ, ವಿಕ್ರಂ ಚಿತ್ರ ಕನ್ನಡ ಪ್ರದರ್ಶನ ಕಂಡದ್ದು ಬೆರಳೆಣಿಕೆಯಷ್ಟು ಪರದೆಗಳಲ್ಲಿ ಹಾಗೂ ಸದ್ಯ ಚಿತ್ರಮಂದಿರದಲ್ಲಿರುವ ಪೊನ್ನಿಯನ್ ಸೆಲ್ವನ್ ಕಥೆಯೂ ಇದೆ. ಹೀಗಿರುವಾಗ ಈ ಚಿತ್ರಗಳನ್ನು ಪ್ಯಾನ್ ಇಂಡಿಯಾ ಅಂತ ಕರೆಯೋಕಾದ್ರೂ ಹೇಗೆ ಆಗುತ್ತೆ ಹೇಳಿ. ಇದೇ ವಿಷಯವಾಗಿ ಇದೀಗ ಕಾಂತಾರ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಮಾತನಾಡಿದ್ದು, ಪ್ಯಾನ್ ಇಂಡಿಯಾ ಎಂಬ ಹೆಸರು ಹೊತ್ತು ಬರುವವರಿಗೆ ನಯವಾಗಿ ಟಾಂಗ್ ನೀಡಿದ್ದಾರೆ.

    ಡಬ್ ಮಾಡಿ 4 ಪರದೆಗಳಲ್ಲಿ ಹಾಕ್ಬಿಟ್ರೆ ಪ್ಯಾನ್ ಇಂಡಿಯಾ ಆಗಲ್ಲ!

    ಡಬ್ ಮಾಡಿ 4 ಪರದೆಗಳಲ್ಲಿ ಹಾಕ್ಬಿಟ್ರೆ ಪ್ಯಾನ್ ಇಂಡಿಯಾ ಆಗಲ್ಲ!

    ಕಾಂತಾರ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ಬೋಲ್ಡ್ ಆಗಿ ಹೇಳಿಕೆ ನೀಡಿರುವ ರಿಷಬ್ ಶೆಟ್ಟಿ ಬೇರೆ ಭಾಷೆಯ ಚಿತ್ರಗಳನ್ನು ನೋಡಿ ಕನ್ನಡಕ್ಕೆ ಡಬ್ ಮಾಡಿ ನಾಲ್ಕೈದು ಪರದೆಗಳಲ್ಲಿ ಅದನ್ನು ಬಿಡುಗಡೆ ಮಾಡಿ ಪ್ಯಾನ್ ಇಂಡಿಯಾ ಎಂದು ಹೇಳಿಕೊಳ್ತಾರೆ, ಹೀಗೆ ಚಿಕ್ಕ ಮಟ್ಟದಲ್ಲಿ ಬಿಡುಗಡೆ ಮಾಡಿ ಅದನ್ನು ಪ್ಯಾನ್ ಇಂಡಿಯಾ ಎಂದರೆ ಆಗುವುದಿಲ್ಲ ಎಂದಿದ್ದಾರೆ.

    ಪರೋಕ್ಷವಾಗಿ ಪೊನ್ನಿಯನ್ ಸೆಲ್ವನ್ ಚಿತ್ರಕ್ಕೆ ಟಾಂಗ್ ಕೊಟ್ಟ ರಿಷಬ್ ಶೆಟ್ಟಿ

    ಪರೋಕ್ಷವಾಗಿ ಪೊನ್ನಿಯನ್ ಸೆಲ್ವನ್ ಚಿತ್ರಕ್ಕೆ ಟಾಂಗ್ ಕೊಟ್ಟ ರಿಷಬ್ ಶೆಟ್ಟಿ

    ಸದ್ಯ ಪೊನ್ನಿಯನ್ ಸೆಲ್ವನ್ ಚಿತ್ರದ ಕನ್ನಡ ಡಬ್ ಬೆಂಗಳೂರಿನಲ್ಲಿ ಕೇವಲ 2 ಪ್ರದರ್ಶನಗಳನ್ನು ಕಾಣ್ತಿದೆ. ರಿಷಬ್ ಶೆಟ್ಟಿ ಅವರ ಈ ಹೇಳಿಕೆ ಈ ಚಿತ್ರಕ್ಕೆ ಟಾಂಗ್ ಕೊಟ್ಟಂತೆ ಕಾಣುತ್ತಿದ್ದು, 'ಅವರು ಕೇವಲ 4 ಪರದೆಗಳಲ್ಲಿ ಕನ್ನಡಕ್ಕೆ ಡಬ್ ಮಾಡಿ ರಿಲೀಸ್ ಮಾಡಿದ್ದಾರೆ ಆದರೆ ನಾವು ನಮ್ಮ ಕನ್ನಡ ಭಾಷೆಯ ಚಿತ್ರವನ್ನೇ ಅದಕ್ಕಿಂತ ಹೆಚ್ಚು ಪರದೆಗಳಲ್ಲಿ ಚೆನ್ನೈನಲ್ಲಿ ಬಿಡುಗಡೆ ಮಾಡಿದ್ದೇವೆ ಮತ್ತು ಆ ಪ್ರದರ್ಶನಗಳೆಲ್ಲ ತುಂಬಿವೆ, ಈ ಮೂಲಕ ನಮ್ಮ ಭಾಷೆ ಅಲ್ಲಿ ರೀಚ್ ಆಗಿದೆ' ಎಂದು ಹೇಳಿಕೆ ನೀಡಿದ್ದಾರೆ.

    ನಮ್ಮ ಚಿತ್ರಗಳು ನಮ್ಮ ಭಾಷೆಯಲ್ಲಿ ತಲುಪುವುದು ಮುಖ್ಯ

    ನಮ್ಮ ಚಿತ್ರಗಳು ನಮ್ಮ ಭಾಷೆಯಲ್ಲಿ ತಲುಪುವುದು ಮುಖ್ಯ

    ಮಾತು ಮುಂದುವರಿಸಿದ ರಿಷಬ್ ಶೆಟ್ಟಿ 'ನನ್ನ ಪ್ರಕಾರ ನಮ್ಮ ನಾಡಿನ ಚಿತ್ರಗಳು ನಮ್ಮ ಭಾಷೆಯಲ್ಲಿಯೇ ಪ್ರಪಂಚದಾದ್ಯಂತ ತಲುಪುವುದು ಮುಖ್ಯ' ಎಂದಿದ್ದಾರೆ. ಹೌದು, ರಿಷಬ್ ಶೆಟ್ಟಿ ಅವರ ಕಾಂತಾರ ಚಿತ್ರ ಸದ್ಯ ಒಳ್ಳೆಯ ಪ್ರಶಂಸೆ ಪಡೆದುಕೊಳ್ಳುತ್ತಿದ್ದು ತೆಲುಗು, ಮಲಯಾಳಂ ಅಥವಾ ತಮಿಳು ಸಿನಿ ಪ್ರೇಕ್ಷಕರು ಕಾಂತಾರ ಚಿತ್ರವನ್ನು ಚಿತ್ರಮಂದಿರಕ್ಕೆ ಬಂದು ವೀಕ್ಷಿಸಬೇಕೆಂದರೆ ಕನ್ನಡದಲ್ಲಿಯೇ ವೀಕ್ಷಿಸಬೇಕು ಹೊರತು ಡಬ್ಬಿಂಗ್ ಆಯ್ಕೆಯೇ ಇಲ್ಲ. ಹೀಗಿರುವಾಗ ಒಂದೊಳ್ಳೆ ಚಿತ್ರವನ್ನು ಚಿತ್ರಮಂದಿರದಲ್ಲಿ ಮಿಸ್ ಮಾಡಿಕೊಳ್ಳಬಾರದು ಎಂದು ಕಾಂತಾರ ಚಿತ್ರವನ್ನು ವೀಕ್ಷಿಸುವ ಇತರೆ ಭಾಷೆಯ ಸಿನಿಪ್ರೇಮಿಗಳು ಕನ್ನಡದಲ್ಲಿಯೇ ಚಿತ್ರವನ್ನು ವೀಕ್ಷಿಸಲಿದ್ದು ಇಲ್ಲಿ ಕನ್ನಡ ಭಾಷೆಯ ವ್ಯಾಪ್ತಿ ಹೆಚ್ಚಾಗಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ ಕೆಲ ನೆಟ್ಟಿಗರು.

    English summary
    Dubbing a movie into other languages is not pan India says Rishab Shetty at Kantara success meet. Read on
    Monday, October 3, 2022, 10:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X