'ಕಮಾಂಡೊ' ಹಾಡುಗಳು ಬರ್ತಿವೆ, ಕೇಳಲು ಸಿದ್ಧರಾಗಿ
ಹರಿವು ಕ್ರಿಯೇಷನ್ಸ್ ಸಂಸ್ಥೆಯಿಂದ ಕನ್ನಡಕ್ಕೆ ಡಬ್ ಆಗಿರುವ 'ಕಮಾಂಡೊ' ಚಿತ್ರದ ಧ್ವನಿ ಸುರಳಿ ಬಿಡುಗಡೆ ಕಾರ್ಯಕ್ರಮ ನಾಳೆ (ಆಗಸ್ಟ್ 22) ನಡೆಯಲಿದೆ. ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ 'ಕಮಾಂಡೋ' ಚಿತ್ರದ ಆಡಿಯೋ ರಿಲೀಸ್ ಆಗಲಿದೆ.
ಭಾರತದ ಪ್ರತಿಷ್ಟಿತ ಆಡಿಯೋ ಕಂಪನಿಯಾದ ಸೋನಿ ಮ್ಯೂಸಿಕ್ ಮೂಲಕ 'ಕಮಾಂಡೊ' ಚಿತ್ರದ ಹಾಡುಗಳು ನಿಮ್ಮ ಮುಂದೆ ಬರಲಿವೆ. ಮೂಲ ಚಿತ್ರದಲ್ಲಿ ಅನಿರುದ್ಧ್ ಸಂಗೀತ ನೀಡಿದ್ದ ಹಾಡುಗಳಿಗೆ ಇಲ್ಲಿ ಕನ್ನಡದ ಪ್ರತಿಭಾವಂತ ಗಾಯಕರೇ ದನಿಯಾಗಿದ್ದಾರೆ.
2017 ರಲ್ಲಿ ಬಿಡುಗಡೆ ಆಗಿದ್ದ ಶಿವ ನಿರ್ದೇಶನದ ತಮಿಳಿನ ಆಕ್ಷನ್ ಥ್ರಿಲ್ಲರ್ ಸಿನಿಮಾ 'ವಿವೇಗಂ'. ಅಜಿತ್, ವಿವೇಕ್ ಒಬೆರಾಯ್, ಕಾಜಲ್ ಅಗರ್ವಾಲ್, ಅಕ್ಷರಾ ಹಾಸನ್ ಸೇರಿದಂತೆ ದೊಡ್ಡ ತಾರಾಬಳಗವಿದ್ದ 'ವಿವೇಗಂ' ಸಿನಿಮಾ ಕನ್ನಡದಲ್ಲಿ 'ಕಮಾಂಡೋ' ಆಗಿ ಬಿಡುಗಡೆ ಆಗಲಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಡಬ್ಬಿಂಗ್ ಪರ ಅಭಿಯಾನ ಶುರು ಆದ್ಮೇಲೆ, ಹರಿವು ಕ್ರಿಯೇಷನ್ಸ್ 'ವಿವೇಗಂ' ಚಿತ್ರವನ್ನ ಕನ್ನಡಕ್ಕೆ ಡಬ್ ಮಾಡಿದೆ. ಆಗಸ್ಟ್ 31 ರಂದು 'ಕಮಾಂಡೊ' ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದೆ.


Click it and Unblock the Notifications











