ನಾಳೆ ದೊಡ್ಡ ಮಟ್ಟದಲ್ಲಿ ತೆರೆಕಾಣುತ್ತಿದೆ ಡಬ್ಬಿಂಗ್ ಸಿನಿಮಾ 'ಕಮಾಂಡೊ'

By Bharath Kumar

ತಮಿಳಿನ 'ವಿವೇಗಂ' ಚಿತ್ರದ ಕನ್ನಡ ಡಬ್ಬಿಂಗ್ ಸಿನಿಮಾ 'ಕಮಾಂಡೊ' ನಾಳೆ (ಆಗಸ್ಟ್ 31) ರಾಜ್ಯಾದಂತ್ಯ ಅದ್ಧೂರಿಯಾಗಿ, ತುಂಬಾ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ.

ಬಹುಶಃ ಡಬ್ಬಿಂಗ್ ಚಿತ್ರಕ್ಕೆ ಇಷ್ಟು ದೊಡ್ಡ ಮಟ್ಟದ ಒಪನಿಂಗ್ ಸಿಗುತ್ತಿರುವುದು ಇದೇ ಮೊದಲ ಸಲ. ರಾಜ್ಯದ ಸುಮಾರು 80 ರಿಂದ 90 ಚಿತ್ರಮಂದಿರಗಳಲ್ಲಿ 'ಕಮಾಂಡೊ' ತೆರೆಕಾಣುತ್ತಿದೆ.

ಬೆಂಗಳೂರಿನ ಕೆಜಿ ಮುಖ್ಯರಸ್ತೆಯಲ್ಲಿರುವ ಭೂಮಿಕೆ ಚಿತ್ರಮಂದಿರದಲ್ಲಿ ಬೆಳಿಗ್ಗೆ ಮತ್ತು ಮಧ್ಯಾಹ್ನದ ಶೋ ಪ್ರದರ್ಶನವಾಗುತ್ತಿದೆ. ಬಸವೇಶ್ವರನಗರದಲ್ಲಿರುವ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಬೆಳಿಗ್ಗಿನ ಪ್ರದರ್ಶನ 'ಕಮಾಂಡೊ' ಇದೆ. ಇವುಗಳ ಜೊತೆಗೆ ವಿನಾಯಕ, ವೆಂಕಟೇಶ್ವರ ಥಿಯೇಟರ್ ಸೇರಿದಂತೆ ಹಲವು ಚಿತ್ರಮಂದಿರದಲ್ಲಿ 'ಕಮಾಂಡೊ' ಎಂಟ್ರಿ ಕೊಡ್ತಿದ್ದಾನೆ.

Dubbing Movie Commando set to hit screens tomorrow

ಇದಕ್ಕು ಮುಂಚೆ 'ಕಮಾಂಡೊ' ಚಿತ್ರದ ಟ್ರೈಲರ್ ಹಾಗೂ ಟೀಸರ್ ಗೆ ಯೂಟ್ಯೂಬ್ ನಲ್ಲಿ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಚಿತ್ರದ ಬಜೆಟ್ ಬರೋಬ್ಬರಿ 80 ಕೋಟಿ ಎನ್ನಲಾಗಿದೆ. ಚಿತ್ರದ ಸಂಪೂರ್ಣ ಚಿತ್ರೀಕರಣ ಯುರೋಪಿನಲ್ಲಿ ಮಾಡಲಾಗಿದೆ. ಯುರೇಶಿಯಾ, ಸರ್ಬಿಯಾದಲ್ಲಿ ಮೇಕಿಂಗ್ ಆಗಿದೆ. Tom cruise, ಹಾಗೂ ಬಾಂಡ್ ‌ಸಿನಿಮಾಗಳ ಶೈಲಿಯಲ್ಲಿರುವ ಸ್ಪೈ ಆಕ್ಷನ್ ಥ್ರಿಲ್ಲರ್ ಚಿತ್ರ ಇದಾಗಿದ್ದು, ಮೈನವಿರೇಳಿಸುವ ನಾಲ್ಕು ಫೈಟ್ ಗಳ ಜೊತೆಗೆ ಚೇಸಿಂಗ್ ಸೀನ್, ಇಂಟರ್ ನೆಟ್ ಹ್ಯಾಕಿಂಗ್, virtual hologram ತಂತ್ರಜ್ಞಾನ ‌ಬಳಕೆ ಮಾಡಿರುವುದು ಚಿತ್ರದ ಬಗ್ಗೆ ಥ್ರಿಲ್ ಹೆಚ್ಚಿಸಿದೆ.

Dubbing Movie Commando set to hit screens tomorrow

ಅಜಿತ್ ಕುಮಾರ್, ವಿವೇಕ್ ಒಬೆರಾಯ್, ಕಾಜಲ್ ಅಗರ್ವಾಲ್, ಅಕ್ಷರಾ ಹಾಸನ್ ಸೇರಿದಂತೆ ದೊಡ್ಡ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಶಿವ ನಿರ್ದೇಶನ ಮಾಡಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದೆ. ಇನ್ನುಳಿದಂತೆ 'ಕಮಾಂಡೊ' ಚಿತ್ರಕ್ಕೆ 'ಕೊಲಾವರಿ ಡಿ' ಖ್ಯಾತಿ ಅನಿರುಧ್ ಸಂಗೀತ ಸಂಯೋಜನೆ ನೀಡಿದ್ದು, ಹರಿವು ಕ್ರಿಯೇಷನ್ಸ್ ಸಂಸ್ಥೆ ಕಮಾಂಡೊ ಚಿತ್ರವನ್ನ ಕನ್ನಡಕ್ಕೆ ತಂದಿದ್ದು, ವಿಶಾಲ ಕರ್ನಾಟಕದಲ್ಲಿ ಬಿಡುಗಡೆಯಾಗಲಿದೆ.

More from Filmibeat

English summary
Commando releasing in 80 to 90 theatres across all districts. Bengaluru KG road Bhumika will be main theatre. Also releasing at Veerabhadreshwara, Vinayaka and Venkateshwar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X