ಬಂದೇ ಬಿಡ್ತು ಡಬ್ಬಿಂಗ್ ಸಿನಿಮಾ 'ಕಮಾಂಡೊ' ಟ್ರೈಲರ್

By Bharath Kumar

ಟೀಸರ್ ಮೂಲಕವೇ ಸಖತ್ ಸದ್ದು ಮಾಡಿದ್ದ 'ಕಮಾಂಡೊ' ಈಗ ಟ್ರೈಲರ್ ಬಿಡುಗಡೆ ಮಾಡಿ ಮತ್ತಷ್ಟು ಅಬ್ಬರಿಸಿದೆ. ಬಹುನಿರೀಕ್ಷೆಯ 'ಕಮಾಂಡೊ' ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 58 ಸಾವಿರಕ್ಕೂ ಅಧಿಕ ವೀಕ್ಷಕರು ನೋಡಿ ಕಣ್ತುಂಬಿಕೊಂಡಿದ್ದಾರೆ.

'ಕಮಾಂಡೊ' ಟ್ರೈಲರ್ ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಕನ್ನಡದಲ್ಲಿ ಈ ಸಿನಿಮಾ ನೋಡಲು ಕಾತುರರಾಗಿದ್ದಾರೆ. 1.53 ನಿಮಿಷ ಟ್ರೈಲರ್ ನಲ್ಲಿ ಥ್ರಿಲ್ ಹುಟ್ಟಿಸುವಂತಹ ದೃಶ್ಯಗಳು, ಮೇಕಿಂಗ್ ನಿಂದ ಗಮನ ಸೆಳೆದಿದ್ದು, ಇದು ಸಹಜವಾಗಿ ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಸೆಳೆಯುತ್ತಿದೆ.

ಅಂದ್ಹಾಗೆ, 2017 ರಲ್ಲಿ ಬಿಡುಗಡೆಯಾಗಿದ್ದ ತಮಿಳಿನ ಹಿಟ್ ಚಿತ್ರ 'ವಿವೇಗಂ'ನ ಕನ್ನಡ ಅವತರಣಿಕೆ. ಅಜಿತ್ ಕುಮಾರ್, ವಿವೇಕ್ ಒಬೆರಾಯ್, ಕಾಜಲ್ ಅಗರ್ವಾಲ್, ಅಕ್ಷರಾ ಹಾಸನ್ ಸೇರಿದಂತೆ ದೊಡ್ಡ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಶಿವ ನಿರ್ದೇಶನ ಮಾಡಿದ್ದ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದೆ.

Dubbing Movie Commando trailer release

ಈ ಚಿತ್ರದ ಬಜೆಟ್ ಬರೋಬ್ಬರಿ 80 ಕೋಟಿ ಎನ್ನಲಾಗಿದೆ. ಹೀಗಾಗಿ, ದೊಡ್ಡ ಮೊತ್ತಕ್ಕೆ ಕನ್ನಡದ ಡಬ್ಬಿಂಗ್ ಹಕ್ಕು ಖರೀದಿಯಾಗಿದೆಯಂತೆ. ಆದ್ರೆ, ಎಷ್ಟು ಹಣ ಎಂಬ ಮಾಹಿತಿ ಬಿಟ್ಟುಕೊಟ್ಟಿಲ್ಲ. ಡಬ್ಬಿಂಗ್ ಸಿನಿಮಾ ನೋಡುವವರ ಸಂಖ್ಯೆಯೂ ಹೆಚ್ಚಾಗಿದ್ದು, ಕಲೆಕ್ಷನ್ ಆಗುವ ಭರವಸೆಯಲ್ಲಿದೆ ಚಿತ್ರತಂಡ.

ಚಿತ್ರದ ಸಂಪೂರ್ಣ ಚಿತ್ರೀಕರಣ ಯುರೋಪಿನಲ್ಲಿ ಮಾಡಲಾಗಿದೆ. ಯುರೇಶಿಯಾ, ಸರ್ಬಿಯಾದಲ್ಲಿ ಮೇಕಿಂಗ್ ಆಗಿದೆ. Tom cruise, ಹಾಗೂ ಬಾಂಡ್ ‌ಸಿನಿಮಾಗಳ ಶೈಲಿಯಲ್ಲಿರುವ ಸ್ಪೈ ಆಕ್ಷನ್ ಥ್ರಿಲ್ಲರ್ ಚಿತ್ರ ಇದಾಗಿದ್ದು, ಮೈನವಿರೇಳಿಸುವ ನಾಲ್ಕು ಫೈಟ್ ಗಳ ಜೊತೆಗೆ ಚೇಸಿಂಗ್ ಸೀನ್, ಇಂಟರ್ ನೆಟ್ ಹ್ಯಾಕಿಂಗ್, virtual hologram ತಂತ್ರಜ್ಞಾನ ‌ಬಳಕೆ ಮಾಡಿರುವುದು ಚಿತ್ರದ ಬಗ್ಗೆ ಥ್ರಿಲ್ ಹೆಚ್ಚಿಸಿದೆ.

Dubbing Movie Commando trailer release

ಇನ್ನುಳಿದಂತೆ ಇದು ಅಜಿತ್ ಕುಮಾರ್ ನಟನೆಯ ಮೂರನೇ ಸಿನಿಮಾ ‌ಕನ್ನಡಕ್ಕೆ ಡಬ್ ಆಗ್ತಿದೆ. ಇದಕ್ಕೂ ಮುಂಚೆ 'ಎನ್ನೈ ಅರಿಂದಾಲ್' ಹಾಗೂ 'ಆರಂಭಂ' ಚಿತ್ರಗಳು ಸ್ಯಾಂಡಲ್ ವುಡ್ ನಲ್ಲಿ ತೆರೆಕಂಡಿದ್ದವು. ಇನ್ನುಳಿದಂತೆ 'ಕಮಾಂಡೊ' ಚಿತ್ರಕ್ಕೆ 'ಕೊಲಾವರಿ ಡಿ' ಖ್ಯಾತಿ ಅನಿರುಧ್ ಸಂಗೀತ ಸಂಯೋಜನೆ ನೀಡಿದ್ದು, ಹರಿವು ಕ್ರಿಯೇಷನ್ಸ್ ಸಂಸ್ಥೆ ಕಮಾಂಡೊ ಚಿತ್ರವನ್ನ ಕನ್ನಡಕ್ಕೆ ತಂದಿದ್ದು, ವಿಶಾಲ ಕರ್ನಾಟಕದಲ್ಲಿ ಬಿಡುಗಡೆಯಾಗಲಿದೆ.

More from Filmibeat

English summary
Watch the Official Trailer from Kannada movie 'Commando' starring Ajith Kumar, Vivek Oberoi, Kajal Agarwal and Akshara Hassan. 'Commando' movie is directed by Siva
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X