ಭಾನುವಾರ ಬೆಂಗಳೂರಿನಲ್ಲಿ ಡಬ್ಬಿಂಗ್ ಗಾಗಿ ಹಕ್ಕೋತ್ತಾಯ

ಕರ್ನಾಟಕದಲ್ಲಿ ಕನ್ನಡದಲ್ಲಿ ಮನರಂಜನೆಯನ್ನು ಪಡೆದುಕೊಳ್ಳುವುದು ಎಲ್ಲಾ ಕನ್ನಡಿಗರ ಮೂಲಭೂತ ಹಕ್ಕು ಎಂದು ಬಲವಾಗಿ ಪ್ರತಿಪಾದಿಸುತ್ತಿರುವ ಬನವಾಸಿ ಬಳಗ ಭಾನುವಾರ ಡಬ್ಬಿಂಗ್ ಗಾಗಿ ದೊಡ್ಡ ಮಟ್ಟದ ಪ್ರತಿಭಟನೆ ಹಮ್ಮಿಕೊಂಡಿದೆ.

ನವೆಂಬರ್ 25 ರಂದು ಭಾನುವಾರ ಬೆಳಿಗ್ಗೆ 11.30ಕ್ಕೆ ಬೆಂಗಳೂರಿನ ಸ್ವಾಂತತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ಮಾಡಲಾಗುತ್ತಿದ್ದು, ಡಬ್ಬಿಂಗ್ ಬೇಕು ಎಂಬ ಒತ್ತಾಯವನ್ನ ಮಾಡಲಿದೆ.

ನಾಡಿನ ಜನರು ಮನರಂಜನೆ ಮತ್ತು ಜ್ಞಾನವಿಜ್ಞಾನಗಳ ಕಲಿಕೆಯೂ ಸೇರಿದಂತೆ ಹಲವಾರು ಸನ್ನಿವೇಶಗಳಲ್ಲಿ ಕನ್ನಡದಿಂದಲೇ ದೂರಸರಿಯುತ್ತಿರುವ ಅಪಾಯವನ್ನೂ ಮನಗಂಡಿದ್ದೇವೆ. ಈ ನಿಟ್ಟಿನಲ್ಲಿ ಕನ್ನಡಕ್ಕೆ ಪರಭಾಷೆಯಿಂದ ಬರುವ ಪ್ರತಿಯೊಂದೂ ಕನ್ನಡೀಕರಣವಾಗಿಯೇ ಬರಬೇಕೆನ್ನುವ ಕನ್ನಡಪರ ನಿಲುವನ್ನು ನಾವು ಹೊಂದಿದ್ದೇವೆ ಮತ್ತು ಈ ನಿಟ್ಟಿನಲ್ಲಿ ಡಬ್ಬಿಂಗ್ ಪರವಾಗಿ ಸಾಕಷ್ಟು ಜಾಗೃತಿ ಮತ್ತು ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದೇವೆ ಎಂದು ಬನವಾಸಿ ಬಳಗ ಅಭಿಯಾನ ಮಾಡುತ್ತಿದೆ.

Dubbing protest held on november 25th

ಕನ್ನಡ ಚಿತ್ರೋದ್ಯಮ ಹಾಗೂ ಕನ್ನಡ ಟಿವಿ ಉದ್ಯಮದ ಕೆಲವು ಹತೋಟಿ ಕೂಟಗಳ ಕೈವಾಡದಿಂದ ಕರ್ನಾಟಕದಲ್ಲಿ ಡಬ್ಬಿಂಗ್ ನಿಷೇಧವು ಇಂದಿಗೂ ಒಳಒಪ್ಪಂದಗಳ ಮೂಲಕ ಮುಂದುವರೆದಿದ್ದು, ಕನ್ನಡಿಗರ ಮೇಲೆ ಪರಭಾಷಾ ಮನರಂಜನೆಯನ್ನು ಹೇರುವ ಕೆಲಸ ನಿರಂತರವಾಗಿ ಸಾಗುತ್ತಿದೆ ಎಂದು ಬನವಾಸಿ ಬಳಗ ಆರೋಪ ಮಾಡಿದೆ.

ಬನವಾಸಿ ಬಳಗವು ಕನ್ನಡಪರ ಸಂಸ್ಥೆಯಾಗಿದ್ದು, ನಾಡು ನುಡಿಗಳ ಏಳಿಗೆಗಾಗಿ ಕಳೆದ ಹದಿಮೂರು ವರ್ಷಗಳಿಂದ ಶ್ರಮಿಸುತ್ತಾ ಬಂದಿದೆ. ಕರ್ನಾಟಕದಲ್ಲಿ ಕನ್ನಡದಲ್ಲಿ ಮನರಂಜನೆಯನ್ನು ಪಡೆದುಕೊಳ್ಳುವುದು ಎಲ್ಲಾ ಕನ್ನಡಿಗರ ಮೂಲಭೂತ ಹಕ್ಕು ಎನ್ನುವುದನ್ನು ಬಲವಾಗಿ ಪ್ರತಿಪಾದಿಸುತ್ತಿದೆ. ಈ ನಿಟ್ಟಿನಲ್ಲಿ ಕನ್ನಡಕ್ಕೆ ಪರಭಾಷೆಯಿಂದ ಬರುವ ಪ್ರತಿಯೊಂದೂ ಕನ್ನಡೀಕರಣವಾಗಿಯೇ ಬರಬೇಕೆನ್ನುವ ಕನ್ನಡಪರ ನಿಲುವನ್ನು ನಾವು ಹೊಂದಿದ್ದೇವೆ ಮತ್ತು ಈ ನಿಟ್ಟಿನಲ್ಲಿ ಡಬ್ಬಿಂಗ್ ಪರವಾಗಿ ಸಾಕಷ್ಟು ಜಾಗೃತಿ ಮತ್ತು ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದೇವೆ ಎಂದು ಹೇಳುತ್ತಿದೆ.

ಭಾರತೀಯ ಸ್ಪರ್ಧಾ ಆಯೋಗ ಮತ್ತು ದೇಶದ ಸರ್ವೋಚ್ಚ ನ್ಯಾಯಾಲಯಗಳ ಸ್ಪಷ್ಟ ಆದೇಶದ ನಂತರ ಡಬ್ಬಿಂಗ್ ಮೇಲೆ ಕಾನೂನುಬಾಹಿರವಾಗಿ ಇದ್ದ ತಡೆ ತೆರವಾಗಿದ್ದು ಕೆಲವು ಚಲನಚಿತ್ರಗಳು ಕನ್ನಡೀಕರಣಗೊಂಡು ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನವನ್ನೂ ಕಂಡಿವೆ. ಆದರೂ ಪರಭಾಷಾ ಚಿತ್ರಗಳು ಮೂಲಚಿತ್ರಗಳ ಜೊತೆಯಲ್ಲಿಯೇ ಕನ್ನಡೀಕರಣಗೊಂಡು ತೆರೆಕಾಣುವುದನ್ನು ತಡೆಯುವ ಮೂಲಕ ಡಬ್ಬಿಂಗ್ ಹತೋಟಿಕೂಟದ ಕೆಲವು ವಿತರಕರು ಕನ್ನಡದ್ರೋಹಿ ನಡೆಯನ್ನು ತೋರುತ್ತಿದ್ದಾರೆ ಎಂದು ಬನವಾಸಿ ಬಳಗ ಡಬ್ಬಿಂಗ್ ಪರವಾಗಿ ಹೋರಾಟಕ್ಕೀಳಿದಿದೆ.

More from Filmibeat

English summary
Banavasi Balaga is a pro-Kannada thinktank working on issues concerning Kannada and Karnataka for the last 13 years. Banavasi Balaga has hosted a public protest in Freedom Park, Bengaluru demanding dubbing to be allowed in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X