For Quick Alerts
  ALLOW NOTIFICATIONS  
  For Daily Alerts

  ರಾಜ್ಯ ಸರ್ಕಾರವನ್ನ ಎಚ್ಚರಿಸಲು ಟ್ವಿಟ್ಟರ್ ನಲ್ಲಿ 'ಡಬ್ಬಿಂಗ್ ಅಭಿಯಾನ'

  By Bharath Kumar
  |

  ಡಬ್ಬಿಂಗ್ ಬೇಕಾ, ಬೇಡವಾ ಎಂಬ ಚರ್ಚೆ ಮುಗಿಯದ ಸಮಸ್ಯೆಯಾಗಿದೆ. ಡಬ್ಬಿಂಗ್ ವಿರೋಧ ಮಾಡೋರು ಮಾಡ್ತಾನೆ ಇದ್ದಾರೆ. ಡಬ್ಬಿಂಗ್ ಸಿನಿಮಾ ಬೇಕು ಎನ್ನೋರು ಸಿನಿಮಾನ ಡಬ್ ಮಾಡಿ ಥಿಯೇಟರ್ ಗೆ ತರುತ್ತಿದ್ದಾರೆ. ವಿರೋಧನೂ ಇದೆ, ಡಬ್ಬಿಂಗ್ ಪರ ಒಲವು ಇದೆ. ಅಲ್ಲಿಗೆ ಇದು ಮುಗಿಯದ ಕಥೆಯಾಗಿದೆ.

  ಇದೀಗ, ರಾಜ್ಯ ಸರ್ಕಾರ ಡಬ್ಬಿಂಗ್ ಪರನಾ ಅಥವಾ ವಿರೋಧನಾ.? ಎಂಬ ಚರ್ಚೆ ನಡೆಯುತ್ತಿದೆ. ಇದಕ್ಕೆ ಕಾರಣ ರಾಜ್ಯ ಸರ್ಕಾರ ಡಬ್ಬಿಂಗ್ ಪರ ಇದೆ ಎಂದು ನಟಿ ಜಯಮಾಲ ಹೇಳಿದ್ದಾರೆ ಎನ್ನಲಾದ ಸುದ್ದಿಯೊಂದು ಪತ್ರಿಕೆಯಲ್ಲಿ ವರದಿಯಾಗಿದೆ. ಇದನ್ನ ಖಂಡಿಸಿ ಡಬ್ಬಿಂಗ್ ಪರ ಬೆಂಬಲಿಗರು ಟ್ವಿಟ್ಟರ್ ನಲ್ಲಿ ಅಭಿಯಾನ ಮಾಡಲು ನಿರ್ಧರಿಸಿದ್ದಾರೆ.

  ಡಬ್ಬಿಂಗ್ ವಿರೋಧಿಸಿದ ಜಗ್ಗೇಶ್‌ ಗೆ ಲಕ್ಷಾಂತರ ರೂಪಾಯಿ ದಂಡ ಡಬ್ಬಿಂಗ್ ವಿರೋಧಿಸಿದ ಜಗ್ಗೇಶ್‌ ಗೆ ಲಕ್ಷಾಂತರ ರೂಪಾಯಿ ದಂಡ

  ಸುಪ್ರೀಂ ಕೋರ್ಟಿನ ವಿರುದ್ದ ಡಬ್ಬಿಂಗ್ ತಡೆಯಲು ಪ್ರಯತ್ನ ಪಡುತ್ತಿರುವವರ ಜೊತೆಗೆ ಕೈಜೋಡಿಸದಂತೆ ಸರಕಾರವನ್ನು ಎಚ್ಚರಿಸಲು, ಕನ್ನಡಿಗರ ಆಯ್ಕೆ ಸ್ವಾತಂತ್ರ ಮತ್ತು ಕನ್ನಡಿಗರ ಹಕ್ಕನ್ನು ಎತ್ತಿಹಿಡಿಯಲು ಇಂದು ಸಂಜೆ 6:30ಕ್ಕೆ ಟ್ವಿಟರ್ ನಲ್ಲಿ #dubbingBeku #NammaHakku ಹ್ಯಾಶ್ ಟ್ಯಾಗ್ ಅಭಿಯಾನವನ್ನು ಆಯೋಜಿಸಿರುವುದಾಗಿ ಡಬ್ಬಿಂಗ್ ಬೆಂಬಲಿಗರು ತಿಳಿಸಿದ್ದಾರೆ.

  ಸಿನಿಮಾ ಬಂತು, ಈಗ ಮಕ್ಕಳಿಗಾಗಿ 'ಡಬ್ಬಿಂಗ್ ಕಾರ್ಯಕ್ರಮ' ಬರಲಿ ಸಿನಿಮಾ ಬಂತು, ಈಗ ಮಕ್ಕಳಿಗಾಗಿ 'ಡಬ್ಬಿಂಗ್ ಕಾರ್ಯಕ್ರಮ' ಬರಲಿ

  ಡಬ್ಬಿಂಗ್ ವಿರೋಧಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ವಾಟಳ್ ನಾಗರಾಜ್, ನಟ ಜಗ್ಗೇಶ್ ಅಂತಹವರಿಗೆ ಸಿಸಿಐ ಕೋರ್ಟ್ ದಂಡ ವಿಧಿಸಿದೆ. ಸುಪ್ರೀಂ ಕೋರ್ಟ್ ಕೂಡ ಡಬ್ಬಿಂಗ್ ವಿರೋಧ ಮಾಡುವಂತಿಲ್ಲ ಎಂದು ಹೇಳಿದೆ. ಹೀಗಿರುವಾಗ, ಕೋರ್ಟ್ ಆದೇಶವನ್ನ ಸರ್ಕಾರ ಪಾಲಿಸಬೇಕಿದೆ ಎಂಬುದು ಅವರ ವಾದ.

  ''ಮಾಲ್ಗುಡಿ ಡೇಸ್' ಕನ್ನಡಕ್ಕೆ ಡಬ್ ಆಗಿ ಬರಲಿ' ಅಭಿಯಾನಕ್ಕೆ ನಿಮ್ಮ ಬೆಂಬಲ ಇದ್ಯಾ.?''ಮಾಲ್ಗುಡಿ ಡೇಸ್' ಕನ್ನಡಕ್ಕೆ ಡಬ್ ಆಗಿ ಬರಲಿ' ಅಭಿಯಾನಕ್ಕೆ ನಿಮ್ಮ ಬೆಂಬಲ ಇದ್ಯಾ.?

  ಇತ್ತೀಚಿಗಷ್ಟೆ ಕನ್ನಡ ಹೋರಾಟಗಾರ ವಾಟಳ್ ನಾಗರಾಜ್ ಅವರು ಸಚಿವೆ ಜಯಮಾಲ ಅವರನ್ನ ಭೇಟಿ ಮಾಡಿ, ಡಬ್ಬಿಂಗ್ ಗೆ ಅವಕಾಶ ಕೊಡಬಾರದು ಎಂದು ಮನವಿ ಸಲ್ಲಿಸಿದ್ದರು. ಈ ವೇಳೆ ಜಯಮಾಲ ಅವರು, ಈ ಬಗ್ಗೆ ಸಂಬಂಧಪಟ್ಟವರನ್ನ ಕರೆದು ಚರ್ಚೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರಂತೆ. ಅಷ್ಟೇ ಅಲ್ಲದೇ, ಡಬ್ಬಿಂಗ್ ವಿರೋಧಕ್ಕೆ ರಾಜ್ಯ ಸರ್ಕಾರ ಬೆಂಬಲವಿದೆ ಎಂದು ಹೇಳಿದ್ದರಂತೆ. ಇದನ್ನ ಪ್ರಶ್ನಿಸಿ ಇಂದು ಟ್ವಿಟ್ಟರ್ ನಲ್ಲಿ ಅಭಿಯಾನ ಮಾಡಲಿದ್ದಾರೆ.

  English summary
  Dubbing supporters will conducted campaign against government and minister jayamala statement on today 6.30pm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X