twitter
    For Quick Alerts
    ALLOW NOTIFICATIONS  
    For Daily Alerts

    ಎಲ್ಲಾ ಸಿನಿಮಾ ಡಬ್ ಮಾಡುವುದು ಸಾಧುವೇ?

    By * ರವೀಂದ್ರ ಕೊಟಕಿ, ನಿರ್ದೇಶಕರು
    |
    <ul id="pagination-digg"><li class="previous"><a href="/news/dubbing-threat-to-culture-movie-nativity-kfcc-kfi-065529.html">« Previous</a>

    Ravindra Kotaki
    ಡಬ್ಬಿಂಗ್ ಸಿನಿಮಾಗಳು ಅಲ್ಲಿ ಉದ್ಯಮದ ಮೇಲೆ ಎಷ್ಟರ ಮಟ್ಟಿಗೆ ಕೆಟ್ಟ ಪರಿಣಾಮ ಬೀರಿದೆ ಎಂದರೆ ಅನ್ಯಭಾಷೆಯ ಅತ್ಯಂತ ಕೆಟ್ಟ-ಕಳೆಪೆ ದರ್ಜೆಯ ಚಿತ್ರಗಳು (ಸೆಕ್ಸ್ ಸಿನಿಮಾಗಳ) ಸಮೇತ ಎಲ್ಲಾ ತರದ ಬೇರೆ ಭಾಷೆಯ ಫ್ಲಾಪ್ ಚಿತ್ರಗಳನ್ನು (ಅಂದರೆ ಮತ್ತೊಂದು ಭಾಷೆಯಲ್ಲಿ ಜನರು ತಿರಸ್ಕರಿಸಿದ ಸಿನಿಮಾಗಳು ಕೂಡ) ಡಬ್ಬಿಂಗ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.

    ಅನೇಕ ಸಲ ತಮಿಳಿನ ನಟರಾದ ರಜನೀಕಾಂತ್, ಸೂರ್ಯ, ವಿಕ್ರಮ್‌ರಂತವರನ್ನು ಸಿನಿಮಾಗಳಿಗೆ ಸ್ಥಳೀಯ ಸೂಪರ್‌ಸ್ಟಾರ್‌ಗಳಿಗೆ ಮೀರಿದ ಆದ್ಯತೆಯನ್ನು ನೀಡಿದ ಉದಾಹರಣೆಗಳಿವೆ. ಡಬ್ಬಿಂಗ್ ಪ್ರಿಯರು ಬೇಕಾದರೆ ಇದನ್ನು ಪ್ರತಿಭೆಗೆ ಮನ್ನಣೆ ಎಂದು ಸುಲಭವಾಗಿ ಹೇಳಿಬಿಡಬಹುದು. ಆದರೆ ಪರಸ್ಥಿತಿ ಈಗೇ ಮುಂದುವರಿದರೆ ಮತ್ತೊಂದು ದಿನ ಅಲ್ಲಿಯ ಪ್ರತಿಭೆಗಳು ಕೆಲಸ ಕಳೆದುಕೊಳ್ಳುವುದ್ದಕ್ಕಿಂತ ಹೆಚ್ಚಾಗಿ ಕಲಾರಂಗದಲ್ಲಿರುವ ದೇಸಿ ಸಾಂಸ್ಕೃತಿಕತ್ವದ ಅಧಿಃಪತನವೂ ಆಗುತ್ತದೆ.

    ಈಗಂತೂ ಅಲ್ಲಿ ಸಣ್ಣ ಚಿತ್ರಗಳು ನೆಲೆ-ಬೆಲೆ ಎರಡು ಕಳೆದುಕೊಳ್ಳುವ ಸ್ಥಿತಿಗೆ ತಲುಪಿದೆ. ಡಬ್ಬಿಂಗ್ ಸಿನಿಮಾಗಳ ಮೇಲೆ ಅಲ್ಲಿ ಉದ್ಯಮ ಕೂಡ ನಿಯಂತ್ರಣ ಹೇರುವ ಬಗ್ಗೆ ಬಹಳ ಗಂಭೀರವಾಗಿ ಚಿಂತನೆ ನಡೆಸುತ್ತಿದೆ. ಡಬ್ಬಿಂಗ್ ಪ್ರಿಯರಿಗೆ ಗೊತ್ತಿದಿಯೋ ಇಲ್ಲವೋ ಗೊತ್ತಿಲ್ಲ ತಮಿಳುನಾಡಿನಲ್ಲಿ ತಮಿಳಿಗೆ ಡಬ್ ಮಾಡುವ ಚಿತ್ರಗಳನ್ನು ಮಲ್ಟಿಪೆಕ್ಸ್‌ಗಳಲ್ಲಿ ಪ್ರದರ್ಶಸುವಂತಿಲ್ಲ.

    ಇದೆಲ್ಲಾಕ್ಕಿಂತ ಹೆಚ್ಚಿಗೆ ಡಬ್ಬಿಂಗ್ ಮಾಡಿಯೇ ಯಾಕೇ ನಾವು ಸಿನಿಮಾ ನೋಡಬೇಕು? ನಮ್ಮಲ್ಲಿ ಅನೇಕರು ಅನೇಕ ಸಂದರ್ಭಗಳಲ್ಲಿ, ವೇದಿಕೆಗಳ ಮೂಲಕ ಅನ್ಯಭಾಷಾ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿ ಕನ್ನಡದಲ್ಲಿ ನೋಡುವ ಅವಕಾಶ ಮಾಡಿಕೊಡಿ ಎಂಬ ಬೇಡಿಕೆಯಿಟ್ಟಿದ್ದಾರೆ.

    ಸರಿ, ಕನ್ನಡದಲ್ಲಿ ನೀವು ಟೈಟಾನಿಕ್‌ನ ಡಬ್ ಮಾಡಿ ನೋಡಿದರೆ ನಿಮ್ಮ ಮನಸಿಗೆ ಅದರಲ್ಲಿನ ಕಥಾಹಂದರ ಸರಿಯಾಗಿ ನಾಟುವುದೇ? ಡಬ್ಬಿಂಗ್ ಪ್ರಿಯರು ಬೇಕಿದ್ರೆ ತೆಲುಗಿನ ಜೆಮಿನಿ, ತಮಿಳಿನ ಸನ್ ಟಿವಿಗಳಲ್ಲಿ ಪ್ರತಿ ಭಾನುವಾರ ಪ್ರಸಾರವಾಗುವ ಇಂಗ್ಲೀಷ್‌ನಿಂದ ಡಬ್ ಆಗಿರುವ ಸಿನಿಮಾಗಳನ ನೋಡಿಬಿಡಿ, ಮುಂದೆ ಮತ್ತೆಂದು ಆ ಭಾಷೆಗಳಲ್ಲಿ ಅದೇ ಸಿನಿಮಾಗಳನ್ನು ನೋಡುವುದ್ದಕ್ಕೆ ಹೋಗುವುದಿಲ್ಲ.

    ಕನ್ನಡ ಸಿನಿಮಾನ ಕನ್ನಡದಲ್ಲೇ ನೋಡಬೇಕು, ತೆಲುಗು ಸಿನಿಮಾ ತೆಲುಗಿನಲ್ಲೇ ನೋಡಬೇಕು. ಈಗ ಉದಾಹರಣೆಗೆ: ಮಗಧೀರ ಎಂಬ ತೆಲುಗು ಚಿತ್ರನ ಕನ್ನಡಕ್ಕೆ ಡಬ್ ಮಾಡಿ, ಅದೇ ದಿನ ತೆಲುಗಿನ ಮಗಧೀರನನ್ನು ಅಕ್ಕ-ಪಕ್ಕದ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ. ಜನ ಮೂಲ ಮಗಧೀರನನ್ನು ನೋಡಲು ಇಚ್ಛಿಸುತ್ತಾರೆ ಹೊರತು ಡಬ್ಬಿಂಗ್ ಮಗಧೀರನನ್ನು ನೋಡಲು ಇಚ್ಛಿಸುವುದಿಲ್ಲ.

    ಏಕೆಂದರೆ ಮೂಲದಲ್ಲಿ ಆ ಸಿನಿಮಾ ಪೂರ್ಣಪ್ರಮಾಣದಲ್ಲಿ ಮನಸಿಗೆ ನಾಟುತ್ತದೆ. ಇಂಗ್ಲೀಷ್ ಸಿನಿಮಾಗಳನ ಇಂಗ್ಲೀಷ್‌ನಲ್ಲಿ ನೋಡುವುದೇ ಉತ್ತಮ! ಒಂದು ಸಿನಿಮಾ ನೋಡಿದ ಅನುಭವದ ಜೊತೆಗೆ ಇಂಗ್ಲೀಷ್ ಭಾಷೆಯನ್ನು ಕೂಡ ಕಲಿಯಲು ಆ ಸಿನಿಮಾ ಸಹಾಯ ಮಾಡುತ್ತದೆ. ಅರೇಬೆಂದ ಕನ್ನಡಿಕರಣಕ್ಕಿಂತ ಹಾಲಿವುಡ್‌ನ ಇಂಗ್ಲೀಷ್‌ನಲ್ಲಿ ಸಿನಿಮಾ ನೋಡೋಣ ಇದರಿಂದ ನಮ್ಮ ಇಂಗ್ಲೀಷ್‌ನ ಜ್ಞಾನ ಕೂಡ ಹೆಚ್ಚುತ್ತದೆ.

    ಚಿರಂಜೀವಿ ತೆಲುಗಿನಲ್ಲೇ ಮಾತಾಡಬೇಕು, ರಜನಿಕಾಂತ್ ತಮಿಳಿನಲ್ಲಿ ಡೈಲಾಗ್ ಹೇಳಬೇಕು, ಹೃತಿಕ್ ಹಿಂದಿ ಹಾಡಿಗೆ ಕುಣಿಬೇಕು, ಜೇಮ್ಸ್‌ಬಾಂಡ್ ಇಂಗ್ಲೀಷ್‌ನಲ್ಲೇ ಸಾಹಸಮಾಡಬೇಕು. ಇದೆಲ್ಲಾವನ್ನು ಕನ್ನಡಿಗರು ಆಯಾಯ ಭಾಷೆಗಳಲ್ಲಿ ನೋಡಿ ಏಂಜಾಯ್ ಮಾಡಬೇಕು.

    ಇಲ್ಲದೇ ಹೋದರೆ ಉಡುಪಿ ಹೊಟೇಲ್‌ಗಳಲ್ಲಿ ಆಂಧ್ರ ಊಟವನ್ನು, ಶರವಣಭವನದಲ್ಲಿ ರೂಮಾಲಿ ರೋಟಿನ ಮಾಡಿ ಗ್ರಾಹಕನಿಗೋಸ್ಕರ ಎದುರು ನೋಡಿದಂತಾಗುತ್ತೆ. ಆಂಧ್ರ ಊಟ ಬೇಕಾದ್ರೆ ನಾನು ನಂದಿನಿಗೋ, ನಾಗರ್ಜುನಗೋ ಹೋಗ್‌ತ್ತೇನೆ ಹೊರತು ಉಡುಪಿ ಹೊಟೇಲ್‌ಗೆ ಯಾಕ್ ಹೋಗ್ತೀನಿ? ನಾನು ಉಡುಪಿ ಹೊಟೇಲ್‌ಗೇ ಹೋಗುವುದು ಅಲ್ಲಿ ಶುದ್ದವಾದ ಕರ್ನಾಟಕದ ತಿಂಡಿ-ತಿನ್ನಿಸು ಸಿಗುತ್ತದೆಂದಲ್ಲವೆ!

    ಮನೆ ಪಕ್ಕದಲ್ಲಿರುವ ಉಡುಪಿ ಹೋಟೆಲ್‌ನಲ್ಲಿ ಆಂಧ್ರ ಊಟವನ್ನು ಶುರುಮಾಡಿದರೆಂತೇಳಿ ಯಾರು ಮುಗಿದ್ದು ಬಿದ್ದು ಅಲ್ಲಿ ಊಟ ಮಾಡೋದಿಲ್ಲ. ಜನ ಅಲ್ಲಿಗೆ ಬರೋದೆ ಅಲ್ಲಿ ಕರ್ನಾಟಕದ ತಿಂಡಿ-ತಿನ್ನಿಸುಗಳನ್ನು ತಿನ್ನೋದಾಕ್ಕಾಗಿಯೇ.

    ಆಂಧ್ರ ಹೋಟೆಲ್‌ಗಳಲ್ಲಿ ಉತ್ತರ ಕರ್ನಾಟಕದ ಜೋಳದರೊಟ್ಟಿ ಮಾಡಿದರೆ ಹೇಗಿರುತ್ತೆ ಹಾಗೇ ಡಬ್ಬಿಂಗ್ ಸಿನಿಮಾ ಕೂಡ ಇರುತ್ತೆ. ಆಂಧ್ರ ಊಟಕ್ಕಾಗಿ ಯಾಕೇ ನಾವು ನಂದಿನಿ, ನಾಗರ್ಜುನ ಹೊಟೇಲ್‌ಗಳನ ಹುಡುಕಿಕೊಂಡು ಹೋಗುತ್ತೇವೆ. ಬೆಣ್ಣೆದೋಸೆಗಾಗಿ ಯಾಕೇ ನಾವು ದಾವಣೆಗೆರೆ ಬೆಣ್ಣೆದೋಸೆ ದರ್ಶಿನಿಗಳಿಗೆ ಹೋಗುತ್ತೇವೆ.

    ಎಣ್ಣೆಗಾಯಿ-ಖಡಕ್‌ರೊಟ್ಟಿಗೋಸ್ಕರ ಯಾಕೇ ಉತ್ತರ ಕರ್ನಾಟಕದ ದರ್ಶಿನಿಗಳಿಗೆ ಭೇಟಿ ಕೊಡುತ್ತೇವೇಳಿ? ಆ ಹೋಟೇಲ್‌ಗಳಲ್ಲಿ ಆ ಪ್ರದೇಶದ ಸೊಗಡು, ಸಂಸ್ಕೃತಿ, ಆಹಾರಪದ್ದತಿ ಇದೆಲ್ಲವೂ ಅಡಕವಾಗಿರುತ್ತದೆ. ಇದನ್ನು ನಾವು ಡಬ್ ಮಾಡಿ (ಅಂದರೆ ಬೇರೆ ಹೋಟೇಲ್‌ಗಳಲ್ಲಿ) ತಿಂದ್ರು ಅದರ ಸ್ವಾದ ಸಿಗೋದೆ ಮತ್ತೆ ಅದೇ ಹೋಟೇಲ್‌ಗಳಿಗೆ ವಾಪಾಸ್ ಹೋಗುತ್ತೇವೆ. ಡಬ್ಬಿಂಗ್‌ಗಳ ಹಣೆಬರಹವೂ ಇಷ್ಟೆ ಸ್ವಾಮಿ!

    ಡಬ್ಬಿಂಗ್‌ಗೆ ನಾವು ವಿರೋಧ ವ್ಯಕ್ತಪಡಿಸಬೇಕಿರುವುದು ಸಿನಿಮಾರಂಗ ಮೇಲಿನ ಕಾಳಜಿಯಿಂದಲ್ಲ. ಬದಲಾಗಿ ನಮ್ಮ ಸಂಸ್ಕೃತಿ(ಭಾಷೆ) ಮೇಲೆ ಅನ್ಯ ಸಂಸ್ಕೃತಿಯ (ಭಾಷೆ) ಪ್ರತ್ಯಕ್ಷವಾದ ದಾಳಿಯನ್ನು ತಡೆಯಲು ಇದನ್ನು ವಿರೋಧಿಸಬೇಕಿದೆ. ಡಬ್ಬಿಂಗ್‌ನಿಂದ ಸಂಸ್ಕೃತಿಗೆ ಯಾವುದೇ ರೀತಿಯಲ್ಲಿ ತೊಂದರೆಯಿಲ್ಲ ಎಂಬವುದು ಮೂರ್ಖತನದ ಮಾತಾಗುತ್ತೆ.

    ಡಬ್ಬಿಂಗ್‌ಯನ್ನು ಲಾಭ-ನಷ್ಟಕ್ಕಿಂತ ಹೆಚ್ಚಾಗಿ ನಮ್ಮ ಸಾಂಸ್ಕೃತಿಕತ್ವದ ಅಳಿವು-ಉಳಿವಿನ ವಿಚಾರವಾಗಿ ಇದನ್ನು ನಾವು ನೋಡಬೇಕಿದೆ. ಕನ್ನಡಿಗರು ಕನ್ನಡತನದಿಂದ ದೂರವಾಗುತ್ತಿರುವ ಈ ದಿನಗಳಲ್ಲಿ ನಾವು ಡಬ್ಬಿಂಗ್ ಮಾಡಿ, ಪ್ರತಿ ಚಿತ್ರಮಂದಿರದಲ್ಲಿ ಡಬ್ಬಿಂಗ್ ಸಿನಿಮಾಗಳು, ಪ್ರತಿಚಾನೆಲ್‌ಗಳಲ್ಲಿ ಡಬ್ಬಿಂಗ್ ಧಾರವಾಹಿಗಳನ್ನು ಪ್ರಸಾರ ಮಾಡಿದರೆ ಕಲಾರಂಗದಲ್ಲಿ ಅಳಿದು-ಉಳಿದಿರುವ ದೇಸಿ ಸಂಸ್ಕೃತಿ ಕೂಡ ಅವನತಿಯ ಹಾದಿ ಹಿಡಿಯುತ್ತದೆ.

    ಡಬ್ಬಿಂಗ್‌ನ ನಾವು ಸಂಸ್ಕೃತಿ, ದೇಸಿತನದ ಹಿನ್ನಲೆಯಲ್ಲಿ ವಿರೋಧಿಸಬೇಕಿದೆ ಹೊರತು ಸಿನಿಮಾರಂಗದ ಅಳಿವು-ಉಳಿವಿನ ದೃಷ್ಟಿಯಿಂದ ಖಂಡಿತ ಅಲ್ಲ.

    <ul id="pagination-digg"><li class="previous"><a href="/news/dubbing-threat-to-culture-movie-nativity-kfcc-kfi-065529.html">« Previous</a>

    English summary
    Dubbing debate: KFCC and intellectuals opposition to Dubbing in the name of protecting Kannada culture can be justified and not all movies or TV shows are worth dubbing, a Censor or panel should be formed to screen movies ready for dubbing a report by Ravindra Kotaki.
    Friday, August 31, 2012, 15:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X