twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡತನಕ್ಕೆ ಡಬ್ಬಿಂಗ್ ಕೊಡಲಿ: ಮುಖ್ಯಮಂತ್ರಿ ಚಂದ್ರು

    |

    ಕೊರೊನಾ ಕಾಲದಲ್ಲಿ ಡಬ್ಬಿಂಗ್ ಧಾರಾವಾಹಿಗಳು ನಿಧಾನಕ್ಕೆ ಕನ್ನಡ ಟಿವಿಗಳನ್ನು ಪ್ರವೇಶಿಸಿ ಬಾಹುಗಳನ್ನು ವಿಸ್ತರಿಸುತ್ತಾ ಸಾಗಿವೆ.

    Recommended Video

    ತಾಯಿಯನ್ನು ಕಳೆದುಕೊಂಡ ಜೋಗಿ ಪ್ರೇಮ್! | Filmibeat Kannada

    ಹಿಂದಿಯ ಮಹಾಭಾರತ, ರಾಮಾಯಣದಿಂದ ಪ್ರಾರಂಭವಾಗಿ ಪ್ರಸ್ತುತ ಸಿಬಿಐ ಹಾಗೂ ಇನ್ನಿತರೆ ಧಾರಾವಾಹಿಗಳು ಸಹ ಕನ್ನಡ ಡಬ್ಬಿಂಗ್ ಮೂಲಕ ಟಿವಿಗಳನ್ನು ಪ್ರವೇಶಿಸುತ್ತಿವೆ.

    ಯಾವ ಚಿತ್ರವೂ ಮಾಡದ ವಿಶೇಷ ದಾಖಲೆ ಬರೆದ ಅಲ್ಲು ಅರ್ಜುನ್ ನಟನೆಯ 'ಸರೈನೋಡು'ಯಾವ ಚಿತ್ರವೂ ಮಾಡದ ವಿಶೇಷ ದಾಖಲೆ ಬರೆದ ಅಲ್ಲು ಅರ್ಜುನ್ ನಟನೆಯ 'ಸರೈನೋಡು'

    ಡಬ್ಬಿಂಗ್ ಧಾರಾವಾಹಿಗಳ ವಿರುದ್ಧ ಮುಖ್ಯಮಂತ್ರಿ ಚಂದ್ರು ಸೇರಿದಂತೆ ಕೆಲವು ಹಿರಿಯ ಕಲಾವಿದರು, ರಂಗಭೂಮಿ ಕಲಾವಿದರೂ ಸೇರಿ ಪ್ರತಿಭಟನಾರ್ತಕ ಪತ್ರವೊಂದನ್ನು ಇಂದು ಪತ್ರಿಕೆಯೊಂದಕ್ಕೆ ಬರೆದಿದ್ದು, ಪತ್ರವು ಸಾಕಷ್ಟು ವೈರಲ್ ಆಗಿದೆ. ಆ ಮೂಲಕ ಡಬ್ಬಿಂಗ್ ವಿರೋಧ ಚರ್ಚೆಯೊಂದು ಹುಟ್ಟಿಕೊಂಡಿದೆ.

    ಉತ್ತರದ ಸಂಸ್ಕೃತಿಯ ಹೇರಿಕೆ: ಮುಖ್ಯಮಂತ್ರಿ ಚಂದ್ರು

    ಉತ್ತರದ ಸಂಸ್ಕೃತಿಯ ಹೇರಿಕೆ: ಮುಖ್ಯಮಂತ್ರಿ ಚಂದ್ರು

    ಫಿಲ್ಮೀಬೀಟ್‌ ಕನ್ನಡ ಜೊತೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಡಬ್ಬಿಂಗ್ ಎನ್ನುವುದು ಪ್ರಾದೇಶಿಕತನಕ್ಕೆ ಕೊಡಲಿ ಪೆಟ್ಟು ಎಂದರು. ಡಬ್ಬಿಂಗ್ ಎನ್ನುವುದು ಪ್ರಾದೇಶಿಕತನದ ಮೇಲೆ ಉತ್ತರದ ಸಂಸ್ಕೃತಿಯ ಹೇರಿಕೆಯಾಗಿದೆ ಇದರ ಬಗ್ಗೆ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದರು.

    ಸಾವಿರಾರು ಮಂದಿಯ ಕೆಲಸ ಕಸಿದಿದೆ ಡಬ್ಬಿಂಗ್

    ಸಾವಿರಾರು ಮಂದಿಯ ಕೆಲಸ ಕಸಿದಿದೆ ಡಬ್ಬಿಂಗ್

    ಡಬ್ಬಿಂಗ್ ಧಾರಾವಾಹಿಗಳು ಸ್ಥಳೀಯರಾದ ನೂರಾರು, ಸಾವಿರಾರು ಮಂದಿಯ ಕೆಲಸಗಳನ್ನು ಕಸಿದುಕೊಳ್ಳುತ್ತಿದೆ. ಇದರ ಜೊತೆಗೆ ದೊಡ್ಡ ಮಟ್ಟದಲ್ಲಿ ಕನ್ನಡ ಸಂಸ್ಕೃತಿಕೆ, ಈ ನೆಲದ ಮೂಲ ಸಂಸ್ಕೃತಿಗೆ ಹಾನಿ ಮಾಡುತ್ತಿದೆ ಎಂದು ಹೇಳಿದರು.

    ಪ್ರಭಾಸ್ ಸಿನಿಮಾ ಬಹಿಷ್ಕರಿಸಲು ಆಗ್ರಹ: ಕನ್ನಡಿಗರ ಅಸಮಾಧಾನಕ್ಕೆ ಕಾರಣವೇನು?ಪ್ರಭಾಸ್ ಸಿನಿಮಾ ಬಹಿಷ್ಕರಿಸಲು ಆಗ್ರಹ: ಕನ್ನಡಿಗರ ಅಸಮಾಧಾನಕ್ಕೆ ಕಾರಣವೇನು?

    ವಿಜ್ಞಾನ, ಕ್ರೀಡೆ, ಶಿಕ್ಷಣ ಡಬ್ಬಿಂಗ್‌ಗೆ ವಿರೋಧವಿಲ್ಲ

    ವಿಜ್ಞಾನ, ಕ್ರೀಡೆ, ಶಿಕ್ಷಣ ಡಬ್ಬಿಂಗ್‌ಗೆ ವಿರೋಧವಿಲ್ಲ

    ವಿಜ್ಞಾನ, ಕ್ರೀಡೆ, ಶಿಕ್ಷಣ ಇಂಥಹಾ ವಿಷಯಕ್ಕೆ ಡಬ್ಬಿಂಗ್ ಮಾಡಿದರೆ ನಮ್ಮ ವಿರೋಧಿವಿಲ್ಲ. ಆದರೆ ಸಂಸ್ಕೃತಿಯನ್ನು ಪ್ರತಿನಿಧಿಸುವ ಸಾಹಿತ್ಯ, ಸಂಸ್ಕೃತಿ, ಸಿನಿಮಾ, ಧಾರಾವಾಹಿಗಳು ಡಬ್ಬಿಂಗ್ ಅನ್ನು ನೆಚ್ಚಿಕೊಂಡರೆ, ನಮ್ಮತನ ಉಳಿಯುವುದಿಲ್ಲ ಎಂದು ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು.

    'ಪ್ರತಿಭಟನೆಗಳೇ ಮಾಡಲಾಗದ ಕಾಲದಲ್ಲಿ ನಾವಿದ್ದೇವೆ'

    'ಪ್ರತಿಭಟನೆಗಳೇ ಮಾಡಲಾಗದ ಕಾಲದಲ್ಲಿ ನಾವಿದ್ದೇವೆ'

    ಸಿನಿಮಾಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳನ್ನು ಮಾಡಿದರು, ಆದರೆ ಟಿವಿ ವಿಭಾಗದಲ್ಲಿ ಈ ಒಗ್ಗಟ್ಟು ಕಾಣುತ್ತಿಲ್ಲ. ಅದೂ ಅಲ್ಲದೆ ಕೊರೊನಾ ಸಮಯದಲ್ಲಿ ಸಂಘಟನೆ, ಪ್ರತಿಭಟನೆಗಳು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಟಿವಿ ಸಂಬಂಧಿತ ಸಂಘಟನೆಗಳು ಈ ಸೀಮಿತ ಪರಿಸ್ಥಿತಿಯಲ್ಲಿ ಕೈಲಾದ ಪ್ರತಿಭಟನೆಯನ್ನು ಡಬ್ಬಿಂಗ್ ವಿರುದ್ಧ ತೋರಲೇ ಬೇಕು ಎಂದು ಅವರು ಹೇಳಿದರು.

    ಡಬ್ಬಿಂಗ್ ಧಾರಾವಾಹಿ ಒಪ್ಪಿಕೊಂಡ ವೀಕ್ಷಕರು: ಹೆಚ್ಚಿದ ಟೆಲಿವಿಷನ್ ರೇಟಿಂಗ್ಡಬ್ಬಿಂಗ್ ಧಾರಾವಾಹಿ ಒಪ್ಪಿಕೊಂಡ ವೀಕ್ಷಕರು: ಹೆಚ್ಚಿದ ಟೆಲಿವಿಷನ್ ರೇಟಿಂಗ್

    English summary
    Seniour actor Mukyamantri Chandru said dubbing serials killing Karnataka's culture. It taking away jobs of thousands employees.
    Saturday, July 18, 2020, 16:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X