»   » ನಾಗಾಲೋಟದಲ್ಲಿ ‘ಕೋದಂಡರಾಮ’ನ ಮುನ್ನಡೆ

ನಾಗಾಲೋಟದಲ್ಲಿ ‘ಕೋದಂಡರಾಮ’ನ ಮುನ್ನಡೆ

Posted By: Super
Subscribe to Filmibeat Kannada

ಕ್ರೇಜಿಸ್ಟಾರ್‌ ರವಿಚಂದ್ರನ್‌ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅಪೂರ್ವ ಸಂಗಮದ 'ಕೋದಂಡರಾಮ" ಚಿತ್ರಕ್ಕೆ ಭರದಿಂದ ಚಿತ್ರೀಕರಣ ಸಾಗಿದೆ. ಶ್ರೀಲಕ್ಷ್ಮೀ ಪ್ರೊಡಕ್ಷನ್ಸ್‌ ಲಾಂಛನದ ಈ ಚಿತ್ರಕ್ಕೆ ಜೆಡ್‌ ಗಾರ್ಡನ್‌ನಲ್ಲಿ ವೈಭವಪೂರ್ಣ ಮುಹೂರ್ತ ನಡೆದಿತ್ತು.

ಈಗ ಕನಕಪುರ ಬಳಿಯ ವೆಂಕಟ್‌ ತೋಟದ ಮನೆಯಲ್ಲಿ ಸೆಪ್ಟೆಂಬರ್‌ 26ರಿಂದ ಎರಡನೇ ಹಂತದ ಚಿತ್ರೀಕರಣ ಭರದಿಂದ ಸಾಗಿದೆ. ರವಿಚಂದ್ರನ್‌, ಸಾಕ್ಷಿ ಶಿವಾನಂದ್‌, ಶಿವರಾಜ್‌ಕುಮಾರ್‌, ಲಕ್ಷ್ಮಣ್‌, ಶೈಲಜಾ ಜೋಷಿ ಅವರು ಈ ಹಂತದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ತೆಂಕಾಸಿ ಪಟ್ನಂ ಎಂಬ ಮಲೆಯಾಳಿ ಚಿತ್ರದ ಕಥೆ ಆಧರಿಸಿದ ಈ ಚಿತ್ರವನ್ನು ವಿ. ರವಿಚಂದ್ರನ್‌ ಚಿತ್ರಕತೆ, ಸಂಭಾಷಣೆ, ಹಾಡುಬರೆದು, ಸಂಗೀತ ಸಂಯೋಜಿಸಿ ನಿರ್ದೇಶಿಸುತ್ತಿದ್ದಾರೆ. ಈಶ್ವರಿ ಪ್ರೊಡಕ್ಷನ್ಸ್‌ ಅವರ ಚಪ್ಪಾಳೆ ಚಿತ್ರದಲ್ಲೇ ಜೊತೆಯಾಗಿ ನಟಿಸಬೇಕಾಗಿದ್ದ ರವಿ-ಶಿವು ಈ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ.

ಭೀಷ್ಮ: ಪ್ರಮೋದ್‌ ಹಾಗೂ ಶೇಷು ಚಕ್ರವರ್ತಿ ಸೋದರರ 'ಭೀಷ್ಮ "ಕ್ಕೆ ಅಕ್ಟೋಬರ್‌ 8ರಿಂದ ಡಬ್ಬಿಂಗ್‌ ನಡೆಯಲಿದೆ. ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಿರುವ ಭೀಷ್ಮ ಮಾತಿನ ಮನೆಗೆ ಅವಸರದಿಂದ ಹೊರಟಿದ್ದಾನೆ.

ಈ ಚಿತ್ರದ ತಾರಾಗಣದಲ್ಲಿ ದೇವರಾಜ್‌, ತಾರಾ, ಪ್ರಮೋದ್‌ ಚಕ್ರವರ್ತಿ, ಅರವಿಂದ್‌, ಮೈಕಲ್‌, ತನುಜಾ, ಗಿರಿಶೆಟ್ಟಿ, ರೇಣುಕಾಪ್ರಸಾದ್‌, ಮಹಿಮಾ ಇದ್ದಾರೆ. ನಿರ್ದೇಶಕ ಸಾಯಿಪ್ರಕಾಶ್‌ ಸಹ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಪ್ರೀತಿಮಾಡೋ ಹುಡುಗುಗರಿಗೆಲ್ಲಾ...: ಬಿ.ಎನ್‌. ಗಂಗಾಧರ್‌ ಎ.ಎನ್‌.ಎಸ್‌. ಪ್ರೊಡಕ್ಷನ್ಸ್‌ ಲಾಂಛನದಲ್ಲಿ ನಿರ್ಮಿಸುತ್ತಿರುವ ಪ್ರೀತಿ ಮಾಡೋ ಹುಡುಗರಿಗೆಲ್ಲಾ... ಚಿತ್ರದ ಚಿತ್ರೀಕರಣ ಮುಗಿದಿದ್ದು, ಮಾತುಗಳ ಮರುಜೋಡಣೆ ಕಾರ್ಯ ವಸಂತ್‌ ಸಂಕೇತ್‌ ಸಂಗಮದ ಧ್ವನಿಗ್ರಹಣ ಕೇಂದ್ರದಲ್ಲಿ ಮುಗಿದಿದೆ.

ಈ ಚಿತ್ರಕ್ಕೆ ಊಟಿಯಲ್ಲಿ ಎರಡು ಹಾಡುಗಳ ಚಿತ್ರೀಕರಣ ನಡೆಸಲಾಗಿದೆ. ಹಂಸಲೇಖರ ಗೀತಸಂಗೀತ, ಪ್ರಸಾದ್‌ ನೃತ್ಯ, ಶಿವು ಸಾಹಸ ಇರುವ ಈ ಚಿತ್ರದ ನಿರ್ದೇಶಕರು ಮಿಸ್ಟರ್‌ ಹರಿಶ್ಚಂದ್ರ ಖ್ಯಾತಿಯ ಆರ್‌.ಸಿ. ರಂಗಾ. ತಾರಾಬಳಗದಲ್ಲಿ ರಮೇಶ್‌ಪಂಡಿತ್‌, ನವೀನ್‌, ಮಯೂರ್‌, ಅರುಣ, ಪದ್ಮಾವಾಸಂತಿ, ಅರವಿಂದ್‌, ಭರತ್‌, ಅಶೋಕ್‌ ಬಾದರದಿನ್ನಿ ಮೊದಲಾದವರಿದ್ದಾರೆ.

English summary
Kodandarama shooting in full swing, Bhishma and priti mado hudugarigella in dubbing room

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada