ಶೃತಿ ಹರಿಹರನ್ ಜೊತೆ ಅಭಿನಯಿಸಿದ ಡಬ್ ಸ್ಟಾರ್ ಪ್ರಶ್ವಿತಾ
ಪ್ರಶ್ವಿತಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಸ್ಮಾರ್ಟ್ ಫೋನ್ ಬಳಸೋ ಪ್ರತಿಯೊಬ್ಬರಿಗೂ ಈಕೆ ಪರಿಚಯ ಇದ್ದೇ ಇರುತ್ತೆ. ಫೇಸ್ ಬುಕ್, ಇನ್‌ಸ್ಟಾಗ್ರಾಂ ಎಲ್ಲಿ ನೋಡಿದ್ರು ಪ್ರಶ್ವಿತಾ ತನ್ನದೇ ಸ್ಟೈಲ್ ಡಬ್ಸ್ಮ್ಯಾಷ್ ಮಾಡಿ ಅಪ್ಲೋಡ್ ಮಾಡಿರುತ್ತಾಳೆ.
ಕೇವಲ ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗಿದ್ದ ಈಕೆ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಹವಾ ಕ್ರಿಯೇಟ್ ಮಾಡುತ್ತಿದ್ದಾಳೆ. ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಪಡೆದುಕೊಂಡಿದ್ದ ಪ್ರಶ್ವಿತಾ ಮೊಟ್ಟ ಮೊದಲ ಬಾರಿಗೆ ಶೃತಿ ಹರಿಹರನ್ ಜೊತೆಯಲ್ಲಿ ಸಿನಿಮಾಗಾಗಿ ಬಣ್ಣ ಹಚ್ಚಿದ್ದಾಳೆ.

ನಿರ್ದೇಶಕ ಮಂಜು ಸ್ವರಾಜ್ ಆಕ್ಷನ್ ಕಟ್ ಹೇಳುತ್ತಿರುವ ಹೊಸ ಚಿತ್ರದಲ್ಲಿ ಪ್ರಶ್ವಿತಾ ಅಭಿನಯ ಮಾಡುತ್ತಿದ್ದಾಳೆ. ಇನ್ನು ಹೆಸರಿಡದ ಈ ಸಿನಿಮಾಗೆ 'ಪಟಾಕಿ' ಚಿತ್ರ ಖ್ಯಾತಿಯ ಎಸ್ ವಿ ಬಾಬು ಬಂಡವಾಳ ಹಾಕಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿರುವ ದಿಗ್ಗಜ ಹಾಸ್ಯ ಕಲಾವಿದರೆಲ್ಲರೂ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದು ಈಗಾಗಲೇ ಮೊದಲ ಹಂತದ ಚಿತ್ರೀಕರಣ ಶುರುವಾಗಿದೆ. ಒಟ್ಟಾರೆ ಡಬ್ ಸ್ಮ್ಯಾಷ್ ಕ್ವೀನ್ ಅನ್ನು ಇನ್ನು ಮುಂದೆ ಬಿಗ್ ಸ್ಕ್ರೀನ್ ನಲ್ಲಿಯೂ ನೋಡಬಹುದಾಗಿದೆ.


Click it and Unblock the Notifications











