ವಿಡಿಯೋ: 'ದುನಿಯಾ-2' ಟೀಸರ್ ಬಿಡುಗಡೆ!

By Bharath Kumar

ಲೂಸ್ ಮಾದ ಯೋಗೀಶ್ ಅಭಿನಯದ 'ದುನಿಯಾ-2' ಚಿತ್ರ ಶೀರ್ಷಿಕೆಯಿಂದಲೇ ಕುತೂಹಲ ಹುಟ್ಟಿಹಾಕಿತ್ತು. ಇದೀಗ ಚಿತ್ರದ ಮೊದಲ ಟೀಸರ್ ಬಿಡುಗಡೆ ಮಾಡಿ ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.

ಹೊಸ ವರ್ಷದ ವಿಶೇಷವಾಗಿ 'ದುನಿಯಾ-2' ಚಿತ್ರತಂಡ, ಮೊದಲ ಟೀಸರ್ ರಿಲೀಸ್ ಮಾಡಿದೆ. ಈ ಟೀಸರ್ ನಲ್ಲಿ ಚಿತ್ರದ ಬಗ್ಗೆ ಹೆಚ್ಚೇನೂ ಬಿಟ್ಟುಕೊಡದ ನಿರ್ದೇಶಕರು, ಯೋಗಿ ಅವರ ಗೆಟಪ್ ಹೇಗಿರಲಿದೆ ಎಂಬುದರ ಒಂದು ಝಲಕ್ ಬಿಟ್ಟಿದ್ದಾರೆ ಅಷ್ಟೇ.[ಚಿತ್ರಗಳು : ಬಿ.ಎಂ.ಟಿ.ಸಿ ಬಸ್ ನಲ್ಲಿ ಲೂಸ್ ಮಾದನ ಹೊಸ 'ದುನಿಯಾ']

'ದುನಿಯಾ' ಚಿತ್ರದಲ್ಲಿ ವಿಲನ್ ಆಗಿ ಅಭಿನಯಿಸಿದ್ದ ಲೂಸ್ ಮಾದ ಯೋಗಿ, 'ದುನಿಯಾ-2' ಚಿತ್ರದಲ್ಲಿ ಹೀರೋ ಆಗಿರುವುದು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಇನ್ನೂ ನಟಿ ಹಿತಾ ಚಂದ್ರಶೇಖರ್ 'ದುನಿಯಾ-2' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Duniya 2 First Look Teaser Released

ಅಂದ್ಹಾಗೆ, 2007ರಲ್ಲಿ ತೆರೆಕಂಡಿದ್ದ 'ದುನಿಯಾ' ಚಿತ್ರಕ್ಕೂ 'ದುನಿಯಾ-2' ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದೇ ಬೇರೆ ಕಥೆ. ಹರಿ ಎಂಬ ಯುವ ನಿರ್ದೇಶಕ ಈ ಚಿತ್ರಕ್ಕೆ ಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ನಿರ್ದೇಶಕ ಸಿಂಪಲ್ ಸುನಿ ಅವರ ಬಳಿ ಸಹಾಯಕ ನಿರ್ದೇಶಕರಾಗಿದ್ದ ಹರಿ ಇದೀಗ 'ದುನಿಯಾ-2' ಚಿತ್ರದ ಮೂಲಕ ಚೊಚ್ಚಲ ಬಾರಿಗೆ ಡೈರೆಕ್ಟರ್ ಆಗಿದ್ದಾರೆ.

ಇನ್ನೂ 'ದುನಿಯಾ-2' ಚಿತ್ರದಲ್ಲಿ ಯೋಗಿ ತಾಯಿ ಅಂಬುಜಾ ತೆರೆಮೇಲೂ ಯೋಗಿ ತಾಯಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ದುನಿಯಾ ಚಿತ್ರವನ್ನ ನಿರ್ಮಾಣ ಮಾಡಿದ್ದ ಯೋಗಿ ತಂದೆ ಟಿ.ಪಿ.ಸಿದ್ಧರಾಜು ಅವರೇ 'ದುನಿಯಾ-2' ಚಿತ್ರಕ್ಕೂ ಬಂಡವಾಳ ಹಾಕಿದ್ದಾರೆ.

More from Filmibeat

English summary
Kannada Actor Lose Mada Yogesh starrer Kannada Movie 'Duniya-2' First Look Teaser Released on New Year Special (January 1st). Hitha Chandrashekar is playing female lead. Hari is directing the film. Here is the First Look Teaser of Duniya 2
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X