ಟೈಟಲ್ ವಿವಾದ ಅಂತ್ಯ : ಬದಲಾಗಿದೆ 'ದುನಿಯಾ 2' ಸಿನಿಮಾದ ಹೆಸರು
ಲೂಸ್ ಮಾದ ಯೋಗೀಶ್ ಅವರ 'ದುನಿಯಾ 2' ಚಿತ್ರದ ಟೈಟಲ್ ಇದೀಗ ಬದಲಾಗಿದೆ. ಚಿತ್ರದ ಹೆಸರನ್ನು 'ದುನಿಯಾ 2' ಯಿಂದ 'ಯೋಗಿ ದುನಿಯಾ' ಎಂದು ಚಿತ್ರತಂಡ ಬದಲಾಯಿಸಿದೆ.
'ದುನಿಯಾ 2' ಚಿತ್ರಕ್ಕೆ ಟೈಟಲ್ ಸಮಸ್ಯೆ ಎದುರಾಗಿತ್ತು. ಫಿಲ್ಮ್ ಛೇಂಬರ್ ನಲ್ಲಿ 'ದುನಿಯಾ 2' ಟೈಟಲ್ ಅನ್ನು ಇಬ್ಬರಿಗೆ ನೀಡಿದ್ದರು. ಈ ಹಿಂದೆಯೇ ಒಬ್ಬರಿಗೆ ನೀಡಿದ್ದ ಆ ಶೀರ್ಷಿಕೆಯನ್ನು ಆ ಬಳಿಕ ಯೋಗಿ ಅವರ ತಂಡಕ್ಕೆ ಕೂಡ ನೀಡಿದ್ದು, ಇದರಿಂದ ಸಮಸ್ಯೆ ಕೋರ್ಟ್ ಮೆಟ್ಟಿಲು ಏರಿತ್ತು.

ಆದರೆ ಇದೀಗ ತಮ್ಮ ಸಿನಿಮಾದ ಹೆಸರನ್ನು ಬದಲಾಯಿಸಿ ಈ ಸಮಸ್ಯೆಯಿಂದ ಯೋಗಿ ಅಂಡ್ ಟೀಂ ದೂರವಾಗಿದೆ. ಚಿತ್ರಕ್ಕೆ 'ಯೋಗಿ ದುನಿಯಾ' ಎಂಬ ಟೈಟಲ್ ಫಿಕ್ಸ್ ಆಗಿದೆ. ಇನ್ನು ಅಂದುಕೊಂಡಂತೆ ಆಗಿದ್ದರೆ 'ದುನಿಯಾ 2' ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ ಟೈಟಲ್ ತೊಂದರೆಯಿಂದ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿತ್ತು.
English summary
Actor 'Loose Mada Yogesh's 'Duniya 2' movie titel changed as 'Yogi Duniya'.


Click it and Unblock the Notifications