For Quick Alerts
  ALLOW NOTIFICATIONS  
  For Daily Alerts

  'ದರ್ಶನ್ ಸಿನಿಮಾ ಅಂದ್ರೆ ಕಥೆ ಕೇಳದೆ ಒಪ್ಪಿಕೊಳ್ಳುತ್ತೇನೆ': ಸ್ಟಾರ್ ನಟಿ

  |
  Bigg Boss Kannada 7 | Exclusive interview with Duniya Rashmi

  ಬಿಗ್ ಬಾಸ್ ಕನ್ನಡ 7ನೇ ಆವೃತ್ತಿಯ ಮೂರನೇ ವಾರ ದುನಿಯಾ ರಶ್ಮಿ ಎಲಿಮಿನೇಟ್ ಆಗಿದ್ದಾರೆ. ಬಿಗ್ ಮನೆಯಿಂದ ಹೊರಬಂದ ಬಳಿಕ ಫಿಲ್ಮಿಬೀಟ್ ಕನ್ನಡ ಜೊತೆ ಸಂದರ್ಶನದಲ್ಲಿ ಭಾಗವಹಿಸಿದ್ದರು. ಬಿಗ್ ಬಾಸ್ ಜರ್ನಿಯ ಕುರಿತು ತಮ್ಮ ಅನುಭವಗಳನ್ನ ಹಂಚಿಕೊಂಡ ರಶ್ಮಿ, ಆ ಒಬ್ಬ ಸೂಪರ್ ಸ್ಟಾರ್ ಜೊತೆ ನಟಿಸಬೇಕು ಎಂಬ ಆಸೆಯನ್ನ ಹೊರಹಾಕಿದ್ದಾರೆ.

  ರವಿ ಬೆಳಗೆರೆಗೆ ಆ ಸಮಯದಲ್ಲಿ ಶಾಪ ಹಾಕಿದ್ದರಂತೆ ದುನಿಯಾ ರಶ್ಮಿರವಿ ಬೆಳಗೆರೆಗೆ ಆ ಸಮಯದಲ್ಲಿ ಶಾಪ ಹಾಕಿದ್ದರಂತೆ ದುನಿಯಾ ರಶ್ಮಿ

  ದುನಿಯಾ ರಶ್ಮಿ ಬಳಿ ನಿಮಗೆ ಕನ್ನಡದಲ್ಲಿ ಯಾವ ನಟ ಫೇವರೆಟ್ ಎಂದು ಸಂದರ್ಶನದಲ್ಲಿ ಕೇಳಲಾಯಿತು. ಇದಕ್ಕೆ ಇಬ್ಬರು ಹೆಸರು ತೆಗೆದುಕೊಂಡ ನಟಿ, ಅಂತಿಮವಾಗಿ ಒಬ್ಬರನ್ನ ಆಯ್ಕೆ ಮಾಡಿಕೊಳ್ಳಬೇಕಾಯಿತು.

  ಅಷ್ಟಕ್ಕೂ, ದುನಿಯಾ ರಶ್ಮಿ ಅವರ ನೆಚ್ಚಿನ ಕನ್ನಡ ನಟ ಯಾರು? ಯಾರ ಜೊತೆ ನಟಿಸಬೇಕು ಎಂಬ ಆಸೆಯನ್ನ ಹೊಂದಿದ್ದಾರೆ. ಮುಂದೆ ಓದಿ....

  ಸುದೀಪ್ ಮತ್ತು ದರ್ಶನ್ ಅಂದ್ರೆ ಇಷ್ಟ

  ಸುದೀಪ್ ಮತ್ತು ದರ್ಶನ್ ಅಂದ್ರೆ ಇಷ್ಟ

  ಕನ್ನಡದಲ್ಲಿ ಯಾವ ನಟ ನಿಮಗೆ ಇಷ್ಟ ಎಂದು ಕೇಳಿದ ಪ್ರಶ್ನೆಗೆ ದುನಿಯಾ ರಶ್ಮಿ ಇಬ್ಬರನ್ನ ಹೆಸರನ್ನ ತೆಗೆದುಕೊಂಡರು. ಕಿಚ್ಚ ಸುದೀಪ್ ಮತ್ತು ದರ್ಶನ್ ಅವರನ್ನ ಆಯ್ಕೆ ಮಾಡಿಕೊಂಡರು. ಬಳಿಕ ಒಬ್ಬರು ಹೇಳಬೇಕು ಎಂದು ಕೇಳಿದ್ದಕ್ಕೆ ಒಂದು ಹೆಸರು ಆಯ್ಕೆ ಮಾಡಿದರು.

  ರಶ್ಮಿ ಫೇವರೆಟ್ ಯಾರು?

  ರಶ್ಮಿ ಫೇವರೆಟ್ ಯಾರು?

  ದರ್ಶನ್ ಮತ್ತು ಸುದೀಪ್ ಇಬ್ಬರು ಹೆಸರನ್ನ ಆಯ್ಕೆ ಮಾಡಿಕೊಂಡಿದ್ದ ರಶ್ಮಿ ಒಬ್ಬರನ್ನ ಅಂತಿಮ ಮಾಡಬೇಕಿತ್ತು. ಸೋ, ಅಂತಿಮವಾಗಿ ದರ್ಶನ್ ಅವರಂದ್ರೆ ಬಹಳ ಇಷ್ಟ ಎಂದರು. ಕನ್ನಡದ ಎಲ್ಲ ನಟರ ಚಿತ್ರಗಳನ್ನು ನಾನು ನೋಡುತ್ತೇನೆ. ಎಲ್ಲರೂ ಇಷ್ಟ, ದರ್ಶನ್ ಬಹಳ ಇಷ್ಟ ಎಂದರು ರಶ್ಮಿ.

  ದುನಿಯಾ ರಶ್ಮಿ ಪ್ರಕಾರ 'ಇವರು' ಬಿಗ್ ಬಾಸ್ ಗೆಲ್ಲಬಹುದಂತೆದುನಿಯಾ ರಶ್ಮಿ ಪ್ರಕಾರ 'ಇವರು' ಬಿಗ್ ಬಾಸ್ ಗೆಲ್ಲಬಹುದಂತೆ

  ಯಾರು ಜೊತೆ ಆಕ್ಟ್ ಮಾಡ್ಬೇಕು?

  ಯಾರು ಜೊತೆ ಆಕ್ಟ್ ಮಾಡ್ಬೇಕು?

  ಇನ್ನು ಯಾವ ನಟನ ಜೊತೆ ಸ್ಕ್ರೀನ್ ಶೇರ್ ಮಾಡಬೇಕು ಎಂಬ ಆಸೆ ಇದೆ ಎಂದು ಕೇಳಿದ್ದಕ್ಕೆ ದುನಿಯಾ ರಶ್ಮಿ ಹೇಳಿದ್ದು ರಾಕಿಂಗ್ ಸ್ಟಾರ್ ಯಶ್ ಹೆಸರು. ಇನ್ನು ಸ್ಕ್ರಿಪ್ಟ್ ಬಗ್ಗೆ ಹೇಳದೆ ಹೋದರು ಯಾವ ನಟನ ಜೊತೆ ಆಕ್ಟ್ ಮಾಡಲು ಇಷ್ಟಪಡುತ್ತೀರಾ ಎಂದಿದ್ದಕ್ಕೆ ''ದರ್ಶನ್ ಸರ್'' ಎಂದು ಮತ್ತೆ ಡಿ ಬಾಸ್ ಗೆ ವೋಟ್ ಹಾಕಿದರು ರಶ್ಮಿ.

  ಸುದೀಪ್ ಜೊತೆ ನಟಿಸುವ ಅವಕಾಶ ಮಿಸ್ ಆಯ್ತು

  ಸುದೀಪ್ ಜೊತೆ ನಟಿಸುವ ಅವಕಾಶ ಮಿಸ್ ಆಯ್ತು

  ದುನಿಯಾ ಸಿನಿಮಾದ ಬಳಿಕ ದುನಿಯಾ ವಿಜಯ್ ಜೊತೆ ಮತ್ತೆ ನಟಿಸಿಲ್ಲ. ಮತ್ತೆ ಯಾವಾಗ ಎಂದು ಕೇಳಿದ್ದಕ್ಕೆ ''ಪ್ರಯತ್ನಿಸುವೆ'' ಎಂದರು. ದುನಿಯಾ ಸಿನಿಮಾ ಬಳಿಕ ಸುದೀಪ್ ಚಿತ್ರದಲ್ಲಿ ನಟಿಸುವ ಅವಕಾಶ ಮಿಸ್ ಮಾಡಿಕೊಂಡಿದ್ದರಂತೆ. ''ಆಗ ಇಂಡಸ್ಟ್ರಿಯಲ್ಲಿ ಹೊಸಬರು, ಗೊತ್ತಾಗಲಿಲ್ಲ'' ಎಂದು ರಶ್ಮಿ ಹೇಳಿಕೊಂಡರು.

  English summary
  After Evicted of Bigg boss kannada 7 house Duniya Rashmi participated in filmibeat kannada interview. she want to act with this superstar in future.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X