'ದುನಿಯಾ' ರಶ್ಮಿ ಹೊಸ ಸಿನಿಮಾ ಪ್ರಾರಂಭ
'ದುನಿಯಾ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದ ನಟಿ ರಶ್ಮಿ ಬಳಿಕ ಅನೇಕ ಸಿನಿಮಾ ಮಾಡಿದರು. ಆದರೆ, ಯಾವ ಸಿನಿಮಾವೂ ಹಿಟ್ ಆಗಲಿಲ್ಲ. ಇಂದಿಗೂ ರಶ್ಮಿ ಒಂದೇ ಒಂದು ಗೆಲುವಿಗಾಗಿ ಕಾಯುತ್ತಿದ್ದಾರೆ.
ಈಗ ಬಹಳ ದಿನಗಳ ನಂತರ ರಶ್ಮಿ ಒಂದು ಹೊಸ ಸಿನಿಮಾ ಪ್ರಾರಂಭ ಮಾಡಿದ್ದಾರೆ. ಈ ಸಿನಿಮಾದ ಟೈಟಲ್ 'ಜಗ್ಗಿ ಜಗನ್ನಾಥ್'. ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಓಂ ಸಾಯಿ ಪ್ರಕಾಶ್ ಎಂದ ತಕ್ಷಣ ಸೆಂಟಿಮೆಂಟ್ ಹಾಗೂ ಭಕ್ತಿ ಸಿನಿಮಾಗಳು ನೆನಪಿಗೆ ಬರುತ್ತವೆ. ಆದರೆ, ಇದೊಂದು ಪಕ್ಕಾ ಆಕ್ಷನ್ ಸಿನಿಮಾವಾಗಿದೆ.
ಕಳೆದ ವರ್ಷ 'ಕಾರ್ನಿ' ಎಂಬ ಸಿನಿಮಾ ಮಾಡಿದ್ದ ರಶ್ಮಿ ಅದರ ನಂತರ ಈ ಸಿನಿಮಾ ಶುರು ಮಾಡಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿ ಹಳ್ಳಿಯ ಒಬ್ಬ ಮುಗ್ದ ಹುಡುಗಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ತಮ್ಮ ಪಾತ್ರದ ಬಗ್ಗೆ ಬಹಳ ಉತ್ಸುಕರಾಗಿದ್ದಾರಂತೆ.

ಪೇಪರ್ ಆಯುವ ಒಬ್ಬ ಹುಡುಗ ಆಘೋರಿಯಾಗುವ ಕಥೆ ಈ ಸಿನಿಮಾದಲ್ಲಿ ಇದೆಯಂತೆ. ಇದರ ಜೊತೆಗೆ ಆಕ್ಷನ್ ಹಾಗೂ ಲವ್ ಸ್ಟೋರಿ ಹೊಂದಿದೆ. ರಶ್ಮಿಗೆ ಜೋಡಿಯಾಗಿ ಲಿಖಿತ್ ರಾಜ್ ಕಾಣಿಸಿಕೊಂಡಿದ್ದಾರೆ.


Click it and Unblock the Notifications











