For Quick Alerts
  ALLOW NOTIFICATIONS  
  For Daily Alerts

  ಕೊಲೆಗಾರ ಪ್ರೇಮಿಯನ್ನು ತಿರಸ್ಕರಿಸಿದ ದುನಿಯಾ ರಶ್ಮಿ

  By Rajendra
  |

  ತನ್ನ ಪ್ರೇಮಿ ಒಬ್ಬ ಕೊಲೆಗಾರನಾಗಲು ಯಾವ ಹೆಣ್ಣು ಇಷ್ಟ ಪಡುವುದಿಲ್ಲ. ತನ್ನೆದುರೇ ಖಳನಾಯಕನನ್ನು ಹತ್ಯೆಗೈದ ನಾಯಕ ಲಿಖಿತ್ ರಾಜ್ ನನ್ನು ನಾಯಕಿ ದುನಿಯಾ ರಶ್ಮಿ ನೀನಿಂಥವನೆಂದು ತಿಳಿದಿರಲಿಲ್ಲ. ನೀನೊಬ್ಬ ಕೊಲೆಗಾರ, ಮೋಸಗಾರ ರೌಡಿ ಎಂದು ತನ್ನ ಪ್ರೇಮಿಯನ್ನು ದೂರ ತಳ್ಳಿ ಹೊರಟುಹೋಗುತ್ತಾಳೆ. ಓಂ ಸಾಯಿಪ್ರಕಾಶ್ ನಿರ್ದೇಶಿಸುತ್ತಿರುವ 'ಆಕ್ಷನ್' ಚಿತ್ರಕ್ಕಾಗಿ ಕಳೆದ ವಾರ ಮಾಗಡಿ ರಸ್ತೆಯ ಸೀಗೆಹಳ್ಳಿ ಗೇಟ್ ನಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಯಿತು.

  ನಿಮಿಷಾಂಭ ಸಿನಿ ಕಂಪೆನಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎ.ಎಮ್.ನೀಲ್ ಸಂಗೀತ, ಜಿ.ರೇಣುಕುಮಾರ್ ಛಾಯಾಗ್ರಹಣ, ವಿಜಯಕುಮಾರ್.ಎಂ.ಸಿ. ಕಥೆ, ಚಿತ್ರಕಥೆ, ಸಂಭಾಷಣೆ, ಕೌರವ ವೆಂಕಟೇಶ್, ಢಿಫರೆಂಟ್ ಡ್ಯಾನಿ ಸಾಹಸ, ಮುರಳಿ ನೃತ್ಯ ನಿರ್ದೇಶನ, ಮರಿಸ್ವಾಮಿ ಸಂಕಲನ, ಗೌಸ್ ಪೀರ್, ಶಿವು ಬೇರ್ಗಿ ಸಾಹಿತ್ಯ, ಜಿ.ಮೂರ್ತಿ ಕಲೆ, ಲಿಂಗರಾಜ್ ಕಗ್ಗಲ್, ಶಶಿ ಸಹ ನಿರ್ದೇಶನವಿದೆ.

  ಇದೇ ಮೊದಲ ಬಾರಿಗೆ ದುನಿಯಾ ರಶ್ಮಿ ಅವರು ಈ ಚಿತ್ರದಲ್ಲಿ ಗ್ಲಾಮರ್ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ. ಚಿತ್ರದಲ್ಲಿ ಶಾರ್ಟ್ಸ್, ಸ್ಕರ್ಟ್ಸ್ ತೊಟ್ಟು ಅವರು ಈ ಬಾರಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಚಿತ್ರದಲ್ಲಿ ಸಖತ್ ಹಾಟ್ ಆಗಿ ದುನಿಯಾ ರಶ್ಮಿ ಎಂಟ್ರಿ ಕೊಡುತ್ತಿರುವುದು ವಿಶೇಷ.

  ಸಾಯಿಕುಮಾರ್, ಲಿಖಿತರಾಜ್ ಅರಸ್, ದುನಿಯಾ ರಶ್ಮಿ, ಸಾಧುಕೋಕಿಲ, ಪದ್ಮಜಾ ರಾವ್, ಶಂಕರ್ ಅಶ್ವತ್, ವಿಜಯ್ ಹಾಸನ್, ಸತ್ಯಜಿತ್, ರಾಜು ತಾಳಿಕೋಟೆ, ಮೈಕೋ ನಾಗರಾಜ್, ಪೆಟ್ರೋಲ್ ಪ್ರಸ್ನನ್ನ ತಾರಾಗಣವಿದೆ. (ಒನ್ಇಂಡಿಯಾ ಕನ್ನಡ)

  English summary
  Kannada actress Duniya Rashmi back to action. This time she is seen in a glamorous role for her new film 'Action'. The film stars Likith Raj Urs and Sai Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X