For Quick Alerts
  ALLOW NOTIFICATIONS  
  For Daily Alerts

  ಮತ್ತೆ ಮ್ಯಾಜಿಕ್ ಮಾಡಲು ಸಜ್ಜಾದ ಶಿವಣ್ಣ-ದುನಿಯಾ ಸೂರಿ!

  |

  'ಟಗರು' ಚಿತ್ರದೊಂದಿಗೆ ಮ್ಯಾಜಿಕ್ ಮಾಡಿದ ನಿರ್ದೇಶಕ ದುನಿಯಾ ಸೂರಿ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೊಮ್ಮೆ ಮೋಡಿ ಮಾಡಲು ಸಜ್ಜಾಗುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಶಿವಣ್ಣ ಜೊತೆ ಹೊಸ ಪ್ರಾಜೆಕ್ಟ್ ಮಾಡಲು ದುನಿಯಾ ಸೂರಿ ಪ್ಲಾನ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  ಹೊಸ ಪ್ರಾಜೆಕ್ಟ್‌ಗಾಗಿ ಸೆಂಚುರಿ ಸ್ಟಾರ್ ಜೊತೆ ನಿರ್ದೇಶಕ ಸೂರಿ ಮಾತುಕತೆ ಆರಂಭಿಸಿದ್ದು, ಪಾಸಿಟಿವ್ ಆಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

  80-90ರ ದಶಕದಲ್ಲಿ ಕನ್ನಡ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ ನಾಯಕನಟರು80-90ರ ದಶಕದಲ್ಲಿ ಕನ್ನಡ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ ನಾಯಕನಟರು

  ಈ ಕುರಿತು ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದ್ದು, ''ಸದ್ಯಕ್ಕೆ ಸೂರಿ ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ಬ್ಯುಸಿಯಿದ್ದಾರೆ. ಶೀಘ್ರದಲ್ಲಿ ಭೇಟಿ ಮಾಡ್ತೇವೆ ಹಾಗೂ ಹೊಸ ಚಿತ್ರದ ಬಗ್ಗೆ ಚರ್ಚಿಸಲಿದ್ದೇವೆ. ಈ ಹಿಂದೆ ಸೂರಿ ಜೊತೆ ಮಾಡಿದ ಕಡ್ಡಿಪುಡಿ ಹಾಗೂ ಟಗರು ಎರಡು ಚಿತ್ರಗಳು ಬೆಳ್ಳಿತೆರೆಮೇಲೆ ಮ್ಯಾಜಿಕ್ ಮಾಡಿದೆ. ನನ್ನ ಜೊತೆಗಿನ ಪ್ರತಿಯೊಂದು ಚಿತ್ರದಲ್ಲೂ ಸೂರಿ ವಿಭಿನ್ನವಾಗಿ ಯೋಚಿಸುತ್ತಾರೆ ಎಂದು ನಾನು ನಂಬುತ್ತೇನೆ. ಅವರ ಮೇಕಿಂಗ್‌ನಲ್ಲಿ ರಾ ಸ್ಟೈಲ್ ಅನುಭವ ಕೊಡ್ತಾರೆ. ಮುಂದಿನ ನಮ್ಮ ಸಿನಿಮಾ ಈ ಹಿಂದಿನ ಚಿತ್ರಗಳಿಗಿಂತ ಉತ್ತಮವಾಗಿರಲಿದೆ ಎಂದು ಹೇಳಲು ಬಯಸುತ್ತೇನೆ. ಸದ್ಯಕ್ಕೆ ಇದು ಇನ್ನು ಪ್ರಾಥಮಿಕ ಹಂತದಲ್ಲಿದೆ'' ಎಂದಿದ್ದಾರೆ.

  ದುನಿಯಾ ಸೂರಿ ಪ್ರಸ್ತುತ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಜೊತೆ ಬ್ಯಾಡ್ ಮ್ಯಾನರ್ಸ್ ಚಿತ್ರ ಮಾಡ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ. ಈ ಸಿನಿಮಾ ಆದ್ಮೇಲೆ ಶಿವಣ್ಣನ ಜೊತೆಗಿನ ಪ್ರಾಜೆಕ್ಟ್‌ಗೆ ಚಾಲನೆ ಕೊಡಬಹುದು ಎಂದು ಹೇಳಲಾಗಿದೆ.

  ಭಜರಂಗಿ-2 ಬಿಡುಗಡೆ ದಿನವೇ ಮತ್ತೊಬ್ಬ ಸ್ಟಾರ್ ನಟನ ಚಿತ್ರ ರಿಲೀಸ್ಭಜರಂಗಿ-2 ಬಿಡುಗಡೆ ದಿನವೇ ಮತ್ತೊಬ್ಬ ಸ್ಟಾರ್ ನಟನ ಚಿತ್ರ ರಿಲೀಸ್

  ಇನ್ನು ಶಿವರಾಜ್ ಕುಮಾರ್ ಅವರ ಚಿತ್ರಗಳ ಕುರಿತು ಹೇಳುವುದಾದರೆ ಭಜರಂಗಿ 2 ಬಿಡುಗಡೆಯಾಗಬೇಕಿದೆ. ಜಯಣ್ಣ-ಬೋಗೇಂದ್ರ ನಿರ್ಮಾಣ ಮಾಡಿರುವ, ಹರ್ಷ ನಿರ್ದೇಶಿಸಿರುವ ಭಜರಂಗಿ 2 ಸಿನಿಮಾ ಅಕ್ಟೋಬರ್ 29ಕ್ಕೆ ತೆರೆಗೆ ಬರಲಿದೆ. ಜಾಕಿ ಭಾವನಾ ನಾಯಕಿಯಾಗಿದ್ದು, ಹಿರಿಯ ನಟಿ ಶ್ರುತಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಭಜರಂಗಿ ಚಿತ್ರದಲ್ಲಿದ್ದ ಲೋಕಿ ಈ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ.

  Duniya Soori and Shiva Rajkumar Planning Reunite for Next Project

  ಈ ಚಿತ್ರದ ನಡುವೆಯೂ ಎರಡು ಹೊಸ ಸಿನಿಮಾ ಮಾಡ್ತಿದ್ದಾರೆ ಶಿವಣ್ಣ. ತಮಿಳು ನಿರ್ದೇಶಕ ವಿಜಯ್ ಮಿಲ್ಟನ್ ಜೊತೆ 'ಬೈರಾಗಿ' ಹಾಗೂ ರಾಮ್ ಧುಲಿಪುಡಿ ಜೊತೆ 'ನೀ ಸಿಗೋವರೆಗೂ' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 123ನೇ ಚಿತ್ರ ಬೈರಾಗಿ ಬಹುತೇಕ ಶೂಟಿಂಗ್ ಮುಗಿಸಿದೆ. ಈ ಚಿತ್ರದಲ್ಲಿ ಡಾಲಿ ಧನಂಜಯ್ ಸಹ ಅಭಿನಯಿಸಿದ್ದಾರೆ. 'ನೀ ಸಿಗೋವರೆಗೂ' ಔಟ್ ಅಂಡ್ ಔಟ್ ಲವ್ ಸ್ಟೋರಿ ಕಥೆ ಹೊಂದಿದ್ದು, ತೆಲುಗು ನಟಿ ಮೆಹ್ರಿನ್ ನಾಯಕಿಯಾಗಿದ್ದಾರೆ.

  ಇದಾದ ಮೇಲೆ ಹರ್ಷ ಜೊತೆ 125ನೇ ಚಿತ್ರದ ಶೂಟಿಂಗ್ ಶುರು ಮಾಡಲಿದ್ದಾರೆ. ಈ ಚಿತ್ರವನ್ನು ಸ್ವತಃ ಶಿವರಾಜ್ ಕುಮಾರ್ ತಮ್ಮದೇ ಬ್ಯಾನರ್‌ನಲ್ಲಿ ನಿರ್ಮಿಸಲಿದ್ದಾರೆ. ಗೀತಾ ಪಿಕ್ಚರ್ಸ್ ಅಡಿಯಲ್ಲಿ ಗೀತಾ ಶಿವರಾಜ್ ಕುಮಾರ್ ಬಂಡವಾಳ ಹಾಕಲಿದ್ದಾರೆ. ಇದಾದ ನಂತರ ಮಮ್ಮಿ ಸೇವ್ ಮಿ ನಿರ್ದೇಶಕ ಲೋಹಿತ್ ಎಚ್ ಜೊತೆ ಸತ್ಯಮಂಗಳ ಹಾಗೂ ರಿಷಬ್ ಶೆಟ್ಟಿ ಜೊತೆ ಇನ್ನೊಂದು ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ.

  English summary
  Director Duniya Soori and Century star Shiva Rajkumar Planning Reunite for Next Project.
  Thursday, October 7, 2021, 8:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X