ದುನಿಯಾ ಸೂರಿ 'ಕಂಟ್ರಿ ಪಿಸ್ತೂಲ್' ಫಸ್ಟ್ ಲುಕ್ ಔಟ್
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಜೊತೆಗಿನ 'ಕಡ್ಡಿಪುಡಿ' ಚಿತ್ರದ ಬಳಿಕ ದುನಿಯಾ ಸೂರಿ ಹೊಸ ಚಿತ್ರವನ್ನು ಕೈಗೆತ್ತಿಕೊಂಡಿರುವುದು ಗೊತ್ತೇ ಇದೆ. ಚಿತ್ರದ ಹೆಸರು 'ಕಂಟ್ರಿ ಪಿಸ್ತೂಲ್'. ಈ ಚಿತ್ರದ ಫಸ್ಟ್ ಲುಕ್ ಈಗ ಬಿಡುಗಡೆಯಾಗಿದೆ. ಇಲ್ಲೂ ಸೂರಿ ತನ್ನ ಎಂದಿನ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.
ಕೇವಲ 'ಕಂಟ್ರಿ ಪಿಸ್ತೂಲ್' ಎಂದು ಇಂಗ್ಲಿಷ್ ಮತ್ತು ಕನ್ನಡದಲ್ಲಿದೆ. ಅಜಯ್ ಪಿಕ್ಚರ್ಸ್ ಲಾಂಛನದ ಹೆಸರು ಅದರ ಜೊತೆಗೆ ನಿರ್ಮಾಪಕ ಎಂ.ಗೋವಿಂದು ಹೆಸರು ಬಿಟ್ಟರೆ ಪೋಸ್ಟರ್ ನಲ್ಲಿ ಇನ್ನೇನೂ ಇಲ್ಲ. ಕಪ್ಪುಬಿಳುಪಿನಲ್ಲಿ ದುನಿಯಾ ಸೂರಿ ಫೋಟೋ ಶೀರ್ಷಿಕೆ ಪಕ್ಕದಲ್ಲಿ ಕಾಣಿಸುತ್ತದೆ. [ದುನಿಯಾ ಸೂರಿ ಸಂದರ್ಶನ]

ಪುನೀತ್ ರಾಜ್ ಕುಮಾರ್ ಜೊತೆಗಿನ 'ಅಣ್ಣಾಬಾಂಡ್' ಚಿತ್ರಕ್ಕೆ ಒಳ್ಳೆಯ ವಿಮರ್ಶೆ ವ್ಯಕ್ತವಾಗದಿದ್ದರೂ ಚಿತ್ರ ದುಡ್ದು ಬಾಚಿತು. 'ಕಡ್ಡಿಪುಡಿ' ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದರೂ ಬಾಕ್ಸ್ ಆಫೀಸಲ್ಲಿ ನಿರೀಕ್ಷಿಸಿದ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಈ ಬಾರಿ ಸೂರಿ ಸಬ್ಜೆಕ್ಟ್ ಹಾಗೂ ಬಾಕ್ಸ್ ಆಫೀಸ್ ಎರಡರ ಮೇಲೂ ಕಣ್ಣಿಟ್ಟಿರುವುದು ಫಸ್ಟ್ ಲುಕ್ ನಲ್ಲೇ ಗೊತ್ತಾಗುತ್ತದೆ.
ಚಿತ್ರದ ಹೆಸರು ಕೇಳಿದರೆ ಈ ಬಾರಿಯೂ ಸೂರಿ ಭೂಗತಜಗತ್ತಿಗೆ ಸಂಬಂಧಿಸಿದ ಒಂದು ಸಣ್ಣ ಎಳೆಗೆ ಕೈಹಾಕಿದ್ದಾರೆ ಎನ್ನಿಸುತ್ತದೆ. 'ಕಡ್ಡಿಪುಡಿ' ಚಿತ್ರದ ಬಳಿಕ ಸರಿಸುಮಾರು ಆರು ತಿಂಗಳು ಗ್ಯಾಪ್ ಬಳಿಕ ಸೂರಿ ಬರುತ್ತಿದ್ದಾರೆ. ಸೂರಿ ಸಿನಿಮಾ ಅಂದ್ರೆ ಅದಕ್ಕೆಂದೇ ಕಾಯುವ ಪ್ರೇಕ್ಷಕ ವರ್ಗವೂ ಇದೆ. ವರ್ಷಕ್ಕೊಮ್ಮೆ ಎರಡು ಸಿನಿಮಾ ಮಾಡೋ ಸೂರಿ ಸಿನಿಮಾಗಳು ಭಾರೀ ನಿರೀಕ್ಷೆಯೂ ಮೂಡಿಸುತ್ತವೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











