ಕ್ರಾಂತಿ 2ನೇ ಹಾಡು ಬಿಡುಗಡೆಗೆ ನಾನೂ ಡಿಬಾಸ್ ಜತೆ ಹೊಸಪೇಟೆಗೆ ಬರುತ್ತೇನೆ ಎಂದ ಸೂರಿ; ಆದ್ರೆ ಬರಲ್ಲ!

By ಫಿಲ್ಮಿಬೀಟ್ ಡೆಸ್ಕ್

ಕ್ರಾಂತಿ ಚಿತ್ರ ಮುಂದಿನ ಜನವರಿ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಕ್ರಾಂತಿ ಚಿತ್ರ ಬಿಡುಗಡೆಯಾಗಲಿದೆ. ಇನ್ನು ಚಿತ್ರದ ಬಿಡುಗಡೆಯ ದಿನ ಸಮೀಪಿಸುತ್ತಿದ್ದಂತೆ ಚಿತ್ರತಂಡ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಹೈಪ್ ಹೆಚ್ಚಿಸುವ ಕೆಲಸವನ್ನು ಮಾಡುತ್ತಿದೆ.

ಡಿಸೆಂಬರ್ 10ರಂದು ಕ್ರಾಂತಿ ಚಿತ್ರದ ಥೀಮ್ ಹಾಡು ಧರಣಿಯನ್ನು ಮೈಸೂರಿನಲ್ಲಿ ಅಭಿಮಾನಿಗಳ ಜತೆ ಬಿಡುಗಡೆಗೊಳಿಸಿದ ಚಿತ್ರತಂಡ ಇನ್ನುಳಿದ ಹಾಡುಗಳನ್ನು ಇದೇ ರೀತಿ ರಾಜ್ಯದ ವಿವಿಧ ನಗರ ಹಾಗೂ ಪಟ್ಟಣಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಹೌದು, ಚಿತ್ರದ ಒಂದೊಂದು ಹಾಡನ್ನು ಒಂದೊಂದು ನಗರದಲ್ಲಿ ಬಿಡುಗಡೆ ಮಾಡಲಿರುವ ಕ್ರಾಂತಿ ಚಿತ್ರತಂಡ ಹೊಸದೊಂದು ಟ್ರೆಂಡ್ ಹುಟ್ಟುಹಾಕಿದೆ.

ಇನ್ನು ಚಿತ್ರದ ಎರಡನೇ ಹಾಡು 'ಬೊಂಬೆ ಬೊಂಬೆ'ಯನ್ನು ಬಳ್ಳಾರಿ ಜಿಲ್ಲೆಯ ಹೊಸಪೇಟೆ ಪಟ್ಟಣದ ಡ್ಯಾಮ್ ರಸ್ತೆಯಲ್ಲಿರುವ ವಾಲ್ಮೀಕಿ ವೃತ್ತದಲ್ಲಿ ಇದೇ ಡಿಸೆಂಬರ್ 18ರ ಭಾನುವಾರ ಸಂಜೆ 7 ಗಂಟೆಗೆ ಬಿಡುಗಡೆ ಮಾಡಲು ಕ್ರಾಂತಿ ಚಿತ್ರತಂಡ ಸಿದ್ಧತೆ ನಡೆಸಿಕೊಳ್ಳಲಾಗುತ್ತಿದೆ. ಈಗಾಗಲೇ ಈ ಎಲ್ಲಾ ಮಾಹಿತಿಯನ್ನು ಹಂಚಿಕೊಂಡಿರುವ ಚಿತ್ರತಂಡ ಅಭಿಮಾನಿಗಳು ಭಾಗವಹಿಸುವಂತೆ ಕರೆ ನೀಡಿದೆ. ಈ ಕುರಿತು ಇದೀಗ ದುನಿಯಾ ಸೂರಿ ಹೆಸರಿನಲ್ಲಿ ಇರುವ ಟ್ವಿಟರ್ ಖಾತೆಯಿಂದಲೂ ಟ್ವೀಟ್ ಬಂದಿದ್ದು, ನಾನೂ ಸಹ ಕ್ರಾಂತಿ ಚಿತ್ರದ ಎರಡನೇ ಹಾಡು ಬಿಡುಗಡೆ ಕಾರ್ಯಕ್ರಮಕ್ಕೆ ಬರಲಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಆದ್ರೆ ಈ ಟ್ವೀಟ್‌ನಲ್ಲಿ ಇರುವಂತೆ ಸೂರಿ ಕ್ರಾಂತಿ ಎರಡನೇ ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕೆ ಬರುತ್ತಾರೆ ಎಂಬುದು ವದಂತಿ ಅಷ್ಟೇ.

ಟ್ವೀಟ್‌ನಲ್ಲಿ ಏನಿದೆ?

ಟ್ವೀಟ್‌ನಲ್ಲಿ ಏನಿದೆ?

ನಿರ್ದೇಶಕ ದುನಿಯಾ ಸೂರಿ ಹೆಸರನ್ನು ಹೊಂದಿರುವ ಟ್ವಿಟರ್ ಖಾತೆಯಲ್ಲಿ "ಇದೇ ಡಿಸೆಂಬರ್ 18 ರಂದು ವಾಲ್ಮೀಕಿ ವೃತ್ತ, ಡ್ಯಾಮ್ ರಸ್ತೆ, ಹೊಸಪೇಟೆಯಲ್ಲಿ #Kranti ಚಿತ್ರದ ಎರಡನೆ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ನಾನು ಸಹ ಆಗಮಿಸಲಿದ್ದೇನೆ" ಎಂದು ಮಾಡಿರುವ ಟ್ವೀಟ್ ತುಸು ವೈರಲ್ ಆಗಿದೆ. ಇದನ್ನು ಕಂಡ ಕೆಲ ನೆಟ್ಟಿಗರು ದರ್ಶನ್ ಹಾಗೂ ವಿ ಹರಿಕೃಷ್ಣ ಜತೆ ದುನಿಯಾ ಸೂರಿ ಸಹ ಇರಲಿದ್ದಾರೆ ಎಂದು ಖುಷಿಪಟ್ಟಿದ್ದಾರೆ.

ಇದೊಂದು ನಕಲಿ ಖಾತೆ!

ಇದೊಂದು ನಕಲಿ ಖಾತೆ!

ಇನ್ನು ದುನಿಯಾ ಸೂರಿ ಹೆಸರಿನ ಈ ಖಾತೆ ದುನಿಯಾ ಸೂರಿಯವರ ಅಧಿಕೃತ ಖಾತೆಯಲ್ಲ. ಯಾರೋ ಒಬ್ಬ ಈ ಖಾತೆಯನ್ನು ತೆರೆದು ದುನಿಯಾ ಸೂರಿ ಎಂಬ ಹೆಸರನ್ನು ಬಳಸಿ ಸಾಲು ಸಾಲು ಟ್ವೀಟ್ ಮಾಡಿದ್ದಾನೆ. ಇನ್ನು ಇದು ದುನಿಯಾ ಸೂರಿ ಅವರ ಟ್ವಿಟರ್ ಖಾತೆ ಎಂದು ನಂಬಿ ಮೂರು ಸಾವಿರಕ್ಕೂ ಹೆಚ್ಚು ನೆಟ್ಟಿಗರು ಈ ಖಾತೆಯನ್ನು ಅನುಸರಿಸುತ್ತಿದ್ದಾರೆ. ಆದರೆ ಈ ಹಿಂದೆಯೇ ನಾನು ಸಾಮಾಜಿಕ ಜಾಲತಾಣದಲ್ಲಿ ಇಲ್ಲ ಎಂದು ಸ್ವತಃ ದುನಿಯಾ ಸೂರಿ ಅವರೇ ಘೋಷಿಸಿದ್ದರು.

ದರ್ಶನ್ ಜತೆ ಚಿತ್ರ ಎಂದು ಪೋಸ್ಟರ್ ಕೂಡ ಅಪ್‌ಲೋಡ್

ದರ್ಶನ್ ಜತೆ ಚಿತ್ರ ಎಂದು ಪೋಸ್ಟರ್ ಕೂಡ ಅಪ್‌ಲೋಡ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ದೇಶಕ ದುನಿಯಾ ಸೂರಿ ಕಾಂಬಿನೇಶನ್‌ನಲ್ಲಿ ಚಿತ್ರವೊಂದು ಬರಬೇಕು ಎನ್ನುವುದು ಹಲವಾರು ಅಭಿಮಾನಿಗಳ ಆಸೆ. ಇಬ್ಬರ ಕಾಂಬೋದಲ್ಲಿ ಚಿತ್ರವೊಂದು ಬರಲಿದೆ ಎನ್ನುವ ಸುದ್ದಿ ಕೂಡ ಹಲವಾರು ಬಾರಿ ಹರಿದಾಡಿದೆ. ಆದರೆ ಈ ಬಗ್ಗೆ ನಟ ದರ್ಶನ್ ಆಗಲಿ ಅಥವಾ ಸೂರಿಯಾಗಲಿ ಅಧಿಕೃತವಾಗಿ ಎಲ್ಲಿಯೂ ಹೇಳಿಲ್ಲ. ಆದರೆ ಈ ದುನಿಯಾ ಸೂರಿ ಹೆಸರಿನಲ್ಲಿ ಇರುವ ಈ ನಕಲಿ ಖಾತೆಯಲ್ಲಿ ಮಾತ್ರ ದರ್ಶನ್ ಅಭಿನಯದ 58ನೇ ಚಿತ್ರಕ್ಕೆ ಸೂರಿ ನಿರ್ದೇಶನ ಮಾಡಲಿದ್ದಾರೆ, ರಾಕ್ ಲೈನ್ ವೆಂಕಟೇಶ್ ಬಂಡವಾಳ ಹೂಡಲಿದ್ದಾರೆ ಎಂಬ ಪೋಸ್ಟರ್ ಹಂಚಿಕೊಂಡಿದ್ದು, ಇದರಿಂದ ಅನೇಕರು ಗೊಂದಲಕ್ಕೀಡಾಗಿದ್ದಾರೆ.

ಈ ಹಿಂದೆ ಕೇಸ್ ದಾಖಲಿಸಿದರೂ ಉಪಯೋಗವಿಲ್ಲ!

ಈ ಹಿಂದೆ ಕೇಸ್ ದಾಖಲಿಸಿದರೂ ಉಪಯೋಗವಿಲ್ಲ!

ಇದೇ ವರ್ಷದ ಆಗಸ್ಟ್ ತಿಂಗಳಿನಲ್ಲಿ ಸೈಬರ್ ಪೊಲೀಸರ ಮೊರೆ ಹೋಗಿದ್ದ ದುನಿಯಾ ಸೂರಿ ನಾನು ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಖಾತೆಯನ್ನು ಹೊಂದಿಲ್ಲ, ಯಾರೋ ಕಿಡಿಗೇಡಿಗಳು ನನ್ನ ಹೆಸರಿನಲ್ಲಿ ಖಾತೆ ತೆರೆದು ಇಲ್ಲ ಸಲ್ಲದ ಸುದ್ದಿಗಳನ್ನು ಬರೆದು ಪುಕಾರು ಎಬ್ಬಿಸುತ್ತಿದ್ದಾರೆ ಎಂದು ದೂರನ್ನು ದಾಖಲಿಸಿದ್ದರು. ಆದರೆ ಈ ದೂರಿನಿಂದ ಯಾವುದೇ ಉಪಯೋಗವಾಗಿಲ್ಲ. ಇನ್ನೂ ಸಹ ದುನಿಯಾ ಸೂರಿ ಹೆಸರಿನಲ್ಲಿ ಟ್ವಿಟರ್ ಖಾತೆಯನ್ನು ನಡೆಸಲಾಗುತ್ತಿದೆ.

More from Filmibeat

English summary
Duniya Soori is not attending Darshan starrer Kranti second song release even. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X