ಶಿವಣ್ಣ, ರಾಧಿಕಾ 'ಕಡ್ಡಿಪುಡಿ' ವಯಸ್ಕರಿಗೆ ಮಾತ್ರ

By Rajendra

ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ದುನಿಯಾ ಸೂರಿ ಆಕ್ಷನ್ ಕಟ್ ಹೇಳಿರುವ 'ಕಡ್ಡಿಪುಡಿ' ಚಿತ್ರವೂ ಒಂದು. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ರಾಧಿಕಾ ಪಂಡಿತ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ ಜೂನ್ 7ಕ್ಕೆ ತೆರೆಗೆ ತರಲಾಗುತ್ತಿದೆ.

ಒನ್ಸ್ ಎಗೈನ್ ಈ ಚಿತ್ರದಲ್ಲಿ ಶಿವಣ್ಣ ಲಾಂಗು ಹಿಡಿದಿದ್ದಾರೆ. ರೌಡಿಯಿಸಂ ಚಿತ್ರವಾದರೂ ಸ್ವಲ್ಪ ಭಿನ್ನವಾಗಿರುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ದುನಿಯಾ ಸೂರಿ ಅವರ ನಿರ್ದೇಶನದ ಬಗ್ಗೆ ಕುತೂಹಲವೂ ಇದೆ. ಈ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಲಾಗಿದೆ ಎಂಬ ಸುದ್ದಿ ಈ ಹಿಂದೆ ಬಂದಿತ್ತು.

"ತಮ್ಮ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನಿರೀಕ್ಷಿಸಿದ್ದೆವು. ಆದರೆ 'ಎ' ಸರ್ಟಿಫಿಕೇಟ್ ಸಿಕ್ಕಿದೆ. ಆದರೆ ಸ್ಯಾಟರೈಟ್ ಆವೃತ್ತಿಗಾಗಿ ಕೆಲವು ಸನ್ನಿವೇಶಗಳಿಗೆ ಕತ್ತರಿ ಹಾಕಲಾಗುತ್ತಿದ್ದು ಯು/ಎ ಸರ್ಟಿಫಿಕೇಟ್ ಪ್ರಯತ್ನಿಸಲಾಗುತ್ತಿದೆ" ಎನ್ನುತ್ತಾರೆ ದುನಿಯಾ ಸೂರಿ.

ಚಿತ್ರದಲ್ಲಿ ಶಿವಣ್ಣ ಹೆಸರು ಆನಂದ್ ಅಲಿಯಾಸ್ ಕಡ್ಡಿಪುಡಿ. ಉಮಾ ಪಾತ್ರದಲ್ಲಿ ರಾಧಿಕಾ ಪಂಡಿತ್ ಕಾಣಿಸಲಿದ್ದಾರೆ. ಕಡ್ಡಿಪುಡಿ ಹೆಸರಿಗೆ ತಕ್ಕಂತೆ ತಂಬಾಕಿನ ಕಿಚ್ ಚಿತ್ರದಲ್ಲೂ ಇರುತ್ತದೆ ಎನ್ನುತ್ತಾರೆ ನಿರ್ದೇಶಕರು. ಚಿತ್ರದಲ್ಲಿ ಶಿವಣ್ಣ ಪಾತ್ರಕ್ಕೆ ನೆಗಟೀವ್ ಶೇಡ್ ಇದ್ದರೂ ಸ್ವಾರಸ್ಯಕರವಾಗಿದೆಯಂತೆ.

ಚಿತ್ರದಲ್ಲಿ ಲಾಂಗು ಮಚ್ಚುಗಳ ಅಬ್ಬರವಿದ್ದರೂ ಪ್ರೀತಿಯ ಸಣ್ಣ ಎಳೆಯೂ ಬಿಚ್ಚಿಕೊಳ್ಳುತ್ತದೆ. ಗೆಳೆತನ, ಪ್ರೀತಿ ಪ್ರೇಮ ಪ್ರಣಯ, ದ್ವೇಷ, ಮದುವೆ ಅಂಶಗಳೂ ಚಿತ್ರದಲ್ಲಿವೆ. ಇಷ್ಟೆಲ್ಲಾ ವಿಶೇಷಗಳ 'ಕಡ್ಡಿಪುಡಿ' ಚಿತ್ರದ ಕತೆಯನ್ನು ಯುವ ಮತ್ತು ಮಧ್ಯ ವಯಸ್ಕರನ್ನು ಗಮನದಲ್ಲಿಟ್ಟುಕೊಂಡು ಹೆಣೆಯಲಾಗಿದೆ ಎನ್ನುತ್ತಾರೆ ಸೂರಿ. (ಏಜೆನ್ಸೀಸ್)

More from Filmibeat

English summary
Duniya Soori and Sandalwood King Shivrajkumar coming together for the first time in the movie Kaddipudi. The movie clears censor and got 'A' certificate. Sources say that the film could be scheduled for release on 31st May.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X