'ಕಂಟ್ರಿ ಪಿಸ್ತೂಲ್' ಕೈಗೆತ್ತಿಕೊಂಡ ದುನಿಯಾ ಸೂರಿ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಗೆ ಮಾಡಿದ 'ಕಡ್ಡಿಪುಡಿ' ಚಿತ್ರಕ್ಕೆ ಒಳ್ಳೆಯ ಮೆಚ್ಚುಗೆ ಸಿಕ್ಕಿತು. ಆದರೆ ಚಿತ್ರ ನಿರೀಕ್ಷಿಸಿದಷ್ಟು ದುಡ್ಡು ಮಾಡಲಿಲ್ಲ. 'ಕಡ್ಡಿಪುಡಿ' ಚಿತ್ರದ ಸಮಯದಲ್ಲೇ ದುನಿಯಾ ಸೂರಿ ತಮ್ಮ ಮುಂದಿನ ಚಿತ್ರದ ಬಗ್ಗೆ ಚುಟುಕಾಗಿ ಹೇಳಿಕೊಂಡಿದ್ದರು.
"ಮುಂದಿನ ಚಿತ್ರದ ಬಗ್ಗೆ ಇನ್ನೂ ಏನೂ ಯೋಚಿಸಿಲ್ಲ. ಕಥೆ ಬರೆಯುತ್ತಿದ್ದೇನೆ. ಹೊಸಬರ ಜೊತೆ ಮಾಡಬೇಕೆಂದಿದ್ದೇನೆ. ಇಂತಹವರ ಜೊತೆಗೆ ಮಾಡಬೇಕೆಂದು ಯಾರ ಜೊತೆಗೂ ಕಮಿಟ್ ಆಗಿಲ್ಲ" ಎಂದು ಒನ್ಇಂಡಿಯಾ ಜೊತೆ ಮಾತನಾಡುತ್ತಾ ಹೇಳಿದ್ದರು. ಬಹುಶಃ ಈಗ ಕಥೆ ಸಿದ್ಧವಾದಂತಿದೆ. [ಕಡ್ಡಿಪುಡಿ ಚಿತ್ರವಿಮರ್ಶೆ]

ಚಿತ್ರದ ಹೆಸರು ಕೇಳಿದರೆ ಈ ಬಾರಿಯೂ ಸೂರಿ ಭೂಗತಜಗತ್ತಿಗೆ ಸಂಬಂಧಿಸಿದ ಕಥೆಗೆ ಕೈಹಾಕಿದ್ದಾರೆ ಎನ್ನಿಸುತ್ತದೆ. 'ಕಡ್ಡಿಪುಡಿ' ಚಿತ್ರದ ಬಳಿಕ ಸರಿಸುಮಾರು ಆರು ತಿಂಗಳು ಗ್ಯಾಪ್ ಬಳಿಕ ಸೂರಿ ಬರುತ್ತಿದ್ದಾರೆ. ಸೂರಿ ಸಿನಿಮಾ ಅಂದ್ರೆ ಅದಕ್ಕೆಂದೇ ಕಾಯುವ ಪ್ರೇಕ್ಷಕ ವರ್ಗವೂ ಇದೆ. ವರ್ಷಕ್ಕೊಮ್ಮೆ ಎರಡು ಸಿನಿಮಾ ಮಾಡೋ ಸೂರಿ ಸಿನಿಮಾಗಳು ಭಾರೀ ನಿರೀಕ್ಷೆಯೂ ಮೂಡಿಸುತ್ತವೆ. (ಏಜೆನ್ಸೀಸ್)


Click it and Unblock the Notifications











