Bad Manners box office: ಸೂರಿ- ಅಭಿ 'ಬ್ಯಾಡ್ ಮ್ಯಾನರ್ಸ್' ಫಸ್ಟ್ ವೀಕೆಂಡ್ ಅಸಲಿ ಗಳಿಕೆ ಎಷ್ಟು?

ದುನಿಯಾ ಸೂರಿ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್' ಸಿನಿಮಾ 4ನೇ ದಿನಕ್ಕೆ ಕಾಲಿಟ್ಟಿದೆ. ಅಭಿಷೇಕ್ ಅಂಬರೀಶ್ ಲೀಡ್‌ ರೋಲ್‌ನಲ್ಲಿ ನಟಿಸಿರುವ ಸಿನಿಮಾ ಅಭಿಮಾನಿಗಳ ಮನಗೆದ್ದಿದೆ. ಸೂರಿ ಸ್ಕ್ರೀನ್‌ಪ್ಲೇ, ಚರಣ್ ರಾಜ್ ಮ್ಯೂಸಿಕ್, ಮಾಸ್ತಿ- ಅಮ್ರಿ ಸಂಭಾಷಣೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶುಕ್ರವಾರ ಬಿಡುಗಡೆಯಾದ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ ಫಸ್ಟ್ ವೀಕೆಂಡ್ ಕಲೆಕ್ಷನ್ ಬಗ್ಗೆ ಭಾರೀ ಚರ್ಚೆ ನಡೀತಿದೆ.

'ಪಾಪ್‌ ಕಾರ್ನ್ ಮಂಕಿಟೈಗರ್' ಬಳಿಕ ಸೂರಿ ನಿರ್ದೇಶಿಸಿರುವ ಕ್ರೈಂ ಥ್ರಿಲ್ಲರ್ ಸಿನಿಮಾ 'ಬ್ಯಾಡ್ ಮ್ಯಾನರ್ಸ್'. ಅಭಿ ಖಡಕ್ ಪೊಲೀಸ್ ಆಫೀಸರ್ ಆಗಿ ಚಿತ್ರದಲ್ಲಿ ಅಬ್ಬರಿಸಿದ್ದಾರೆ. ಯಂಗ್ ರೆಬಲ್ ಸ್ಟಾರ್ ಅಭಿನಯದ ಬಗ್ಗೆಯೂ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಅಮರ್' ಚಿತ್ರಕ್ಕಿಂತ ಇಲ್ಲಿ ಅಭಿ ನಟನೆ ಸುಧಾರಿಸಿದೆ ಎನ್ನುತ್ತಿದ್ದಾರೆ. ಅಕ್ರಮವಾಗಿ ಪಿಸ್ತೂಲ್ ತಯಾರಿಸಿ, ಸಾಗಾಟ ಮಾಡುವ ಜಾಲದ ವಿರುದ್ಧ ಖಡಕ್ ಪೊಲೀಸ್ ಆಫೀಸರ್ ರುದ್ರನ ಹೋರಾಟದ ಕತೆ ಚಿತ್ರದಲ್ಲಿದೆ.

Duniya Suri- Abishek Ambareeshs Bad Manners first weekend box office collection

ಸೂರಿ ತಮ್ಮದೇ ಸ್ಟೈಲ್‌ನಲ್ಲಿ ಹಿಂದೆ ಮುಂದೆ ಸ್ಕ್ರೀನ್‌ಪ್ಲೇ ಮಾಡಿ ಈ ಭೂಗತ ಲೋಕದ ಕತೆ ಹೇಳಿದ್ದಾರೆ. ವಿಭಿನ್ನ ಲೊಕೇಶನ್‌ಗಳಲ್ಲಿ ಚಿತ್ರ ವಿಚಿತ್ರ ಪಾತ್ರಗಳನ್ನು ಸೃಷ್ಟಿಸಿ ಆಟ ಆಡಿದ್ದಾರೆ. ಗನ್, ಕಿಡ್ನ್ಯಾಪ್, ಕೊಲೆ, ದರೋಡೆ, ಪೊಲೀಸ್ ತನಿಖೆ ಜೊತೆ ಜೊತೆಗೆ ಫಿಲಾಸಫಿ ಹೇಳುವ ಪ್ರಯತ್ನ ಮಾಡಿದ್ದಾರೆ. ಅಭಿ ಜೋಡಿಯಾಗಿ ರಚಿತಾ ರಾಮ್ ನಟಿಸಿದ್ದಾರೆ. ಆ ಪಾತ್ರ ಬಂದು ಹೋಗುವುದು ಗೊತ್ತಾಗುವುದಿಲ್ಲ. ಖಡಕ್ ವಿಲನ್‌ಗಳಾಗಿ ಮಗಾಯ್, ಫೀನಿಕ್ಸ್ ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ.

'ಬ್ಯಾಡ್ ಮ್ಯಾನರ್ಸ್' ಸಿನಿಮಾ ಕೆಲವರಿಗೆ ಬಹಳ ಇಷ್ಟವಾಗಿದ್ದರೆ ಮತ್ತೆ ಕೆಲವರಿಗೆ ಇಷ್ಟವಾಗುತ್ತಿಲ್ಲ. ಶುಕ್ರವಾರಕ್ಕಿಂತ ಶನಿವಾರ, ಭಾನುವಾರ ಸಿನಿಮಾ ಕಲೆಕ್ಷನ್ ಡಲ್ ಆಗಿದೆ ಎನ್ನುವ ಮಾತುಗಳು ವಿತರಕರ ವಲಯದಲ್ಲಿ ಕೇಳಿಬರ್ತಿದೆ. ಫಸ್ಟ್ ವೀಕೆಂಡ್ ಕಲೆಕ್ಷನ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್‌ವೊಂದು ವೈರಲ್ ಆಗುತ್ತಿದೆ. 3 ದಿನಕ್ಕೆ ಸಿನಿಮಾ ಕರ್ನಾಟಕದಲ್ಲಿ 6.5 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರೋದಾಗಿ ಅದರಲ್ಲಿ ಹೇಳಲಾಗಿದೆ.

Duniya Suri- Abishek Ambareeshs Bad Manners first weekend box office collection

ಸೂರಿ- ಅಭಿ ಜೋಡಿಯ ಚಿತ್ರಕ್ಕೆ ಪ್ರೇಕ್ಷಕರ ರೆಸ್ಪಾನ್ಸ್ ಅಷ್ಟಾಗಿ ಇಲ್ಲ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. 300ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಸೂರಿ ಅಭಿಮಾನಿಗಳು ಬಿಟ್ಟರೆ ಉಳಿದವರು ಸಿನಿಮಾ ನೋಡಲು ಮುಂದೆ ಬರುತ್ತಿಲ್ಲ. 6.5 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರೋದಾಗಿ ಹೇಳಿದರೂ ಕೆಲವರು ಇದನ್ನು ಒಪ್ಪಲು ಸಿದ್ಧರಿಲ್ಲ. 'ಬ್ಯಾಡ್ ಮ್ಯಾನರ್ಸ್' ಸಿನಿಮಾ 2.25 ಕೋಟಿ ರೂ. ಆಸುಪಾಸಿನಲ್ಲಿ ಗಳಿಕೆ ಕಂಡಿದೆ ಅನ್ನೋ ಚರ್ಚೆ ವಿತರಕರ ವಲಯದಲ್ಲಿದೆ.

ಅಧಿಕೃತವಾಗಿ ಚಿತ್ರತಂಡ ಘೋಷಿಸಿದಾಗ ಮಾತ್ರ ಸಿನಿಮಾ ಕಲೆಕ್ಷನ್ ಎಷ್ಟು ಎನ್ನುವ ಬಗ್ಗೆ ಸ್ಪಷ್ಟನೆ ಸಿಗಲಿದೆ. 'ಬ್ಯಾಡ್‌ ಮ್ಯಾನರ್ಸ್' ಚಿತ್ರದಲ್ಲಿ ಅಭಿ- ರಚಿತಾ ರಾಮ್ ಜೊತೆಗೆ ತಾರಾ, ಶರತ್ ಲೋಹಿತಾಶ್ವ ಹಾಗೂ ಪ್ರಶಾಂತ್ ಸಿದ್ದಿ ನಟಿಸಿದ್ದಾರೆ. ಇನ್ನು ಚಿತ್ರಕ್ಕೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಂಬಲ ಸಿಕ್ಕಿತ್ತು. ಅಭಿ ಜೊತೆ ನಿಂತು ದರ್ಶನ್ ಪ್ರಚಾರ ಮಾಡಿದ್ದರು.

'ಬ್ಯಾಡ್ ಮ್ಯಾನರ್ಸ್' ಬಳಿಕ ದುನಿಯಾ ಸೂರಿ, ಜಯಣ್ಣ ಕಂಬೈನ್ಸ್ ಬ್ಯಾನರ್‌ಗೆ ಸಿನಿಮಾ ಮಾಡಲಿದ್ದಾರೆ. ವಿರಾಟ್ ಚಿತ್ರದಲ್ಲಿ ಹೀರೊ ಆಗಿ ನಟಿಸಲಿದ್ದು ಸೂರಿ ಕರಿಯರ್‌ನಲ್ಲೇ ಇದು ದೊಡ್ಡ ಸಿನಿಮಾ ಎನ್ನಲಾಗ್ತಿದೆ. ಈ ಬಗ್ಗೆ ಸೂರಿ ಅಧಿಕೃತವಾಗಿಯೇ ಮಾಹಿತಿ ಕೊಟ್ಟಿದ್ದಾರೆ. ಶೀಘ್ರದಲ್ಲೇ ಆ ಸಿನಿಮಾ ಸೆಟ್ಟೇರಲಿದೆ.

ಅಭಿಷೇಕ್ ಅಂಬರೀಶ್ ಮತ್ತೆರಡು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೆಬ್ಬುಲಿ ಕೃಷ್ಣ ನಿರ್ದೇಶನದ 'ಕಾಳಿ' ಚಿತ್ರಕ್ಕೆ ಹೀರೋ ಆಗಿ ಆಯ್ಕೆ ಆಗಿದ್ದಾರೆ. ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸಲಿದ್ದಾರೆ. ಇನ್ನು ಅಯೋಗ್ಯ ಖ್ಯಾತಿಯ ಮಹೇಶ್ ನಿರ್ದೇಶನದ ಚಿತ್ರದಲ್ಲೂ ಅಭಿ ನಟಿಸೋದು ಪಕ್ಕಾ ಆಗಿದೆ.

More from Filmibeat

English summary
Bad Manners box office collection day 3.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X