Bad Manners Exclusive: ಕುತ್ತಿಗೆಗೆ ತ್ರಿಶೂಲ.. ಬಾಯಿಗೆ ಗನ್ನು.. ಸೂರಿ 'ಬ್ಯಾಡ್ ಮ್ಯಾನರ್ಸ್'ಗೆ ಏನಂತು ಸೆನ್ಸಾರ್?

ದುನಿಯಾ ಸೂರಿ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಅಂತೂ ಇಂತೂ ರಿಲೀಸ್‌ಗೆ ರೆಡಿ ಆಗ್ತಿದೆ. ಜಯಣ್ಣ ಕಂಬೈನ್ಸ್ ಮೂಲಕ ಸಿನಿಮಾ ಶೀಘ್ರದಲ್ಲೇ ತೆರೆಗಪ್ಪಳಿಸಲಿದೆ. ಸದ್ಯ ಸಿನಿಮಾ ಸೆನ್ಸಾರ್ ಕಂಪ್ಲೀಟ್ ಆಗಿದ್ದು ಸಿಕ್ಕಾಪಟ್ಟೆ ವೈಲೆಂಟ್ ಆಗಿರುವ ಒಂದಷ್ಟು ಸನ್ನಿವೇಶಗಳಿಗೆ ಸೆನ್ಸಾರ್ ಕಟ್ ಹೇಳಿ ಯು/ಎ ಸರ್ಟಿಫಿಕೇಟ್ ನೀಡಿದೆ.

'ಅಮರ್‌' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಅಭಿಷೇಕ್ ಅಂಬರೀಶ್ 2ನೇ ಸಿನಿಮಾ 'ಬ್ಯಾಡ್ ಮ್ಯಾನರ್ಸ್'. ಅಭಿಗೆ ಜೋಡಿಯಾಗಿ ರಚಿತಾ ರಾಮ್ ನಟಿಸಿದ್ದಾರೆ. 'ಪಾಪ್‌ಕಾರ್ನ್‌ ಮಂಕಿ ಟೈಗರ್' ಬಳಿಕ ದುನಿಯಾ ಸೂರಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಖಡಕ್ ಪೊಲೀಸ್ ಆಫೀಸರ್ ಆಗಿ ಅಭಿಷೇಕ್ ಅಬ್ಬರಿಸಿದ್ದಾರೆ.

Duniya-suri-Bad-Manners-Censor-cuts

ಅಭಿ ಹುಟ್ಟುಹಬ್ಬಕ್ಕೆ ಚಿತ್ರದ ಟೀಸರ್ ರಿಲೀಸ್ ಆಗಿತ್ತು. ಇದೀಗ ಚಿತ್ರದ ಒಂದೊಂದೇ ಲಿರಿಕಲ್ ವಿಡಿಯೋ ಸಾಂಗ್ಸ್ ಬರ್ತಿದೆ. ಸೂರಿ ಅಭಿಮಾನಿಗಳಂತೂ ಈ ಚಿತ್ರಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಈ ವರ್ಷದ ಆರಂಭದಲ್ಲೇ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗಿತ್ತು. ಇದು ಪಕ್ಕಾ ಸೂರಿ ಸ್ಟೈಲ್ ರಾ ರಗಡ್ ಪೊಲೀಸ್ ಗಿರಿ ಸಿನಿಮಾ ಅನ್ನೋದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಡ್ರಗ್ಸ್ ದಂಧೆ ಸುತ್ತಾ ಸುತ್ತುವ 'ಬ್ಯಾಡ್ ಮ್ಯಾನರ್ಸ್' ಚಿತ್ರದಲ್ಲಿ ರೂಡ್ ಕಾಪ್ ರುದ್ರ ಆಗಿ ಅಭಿಷೇಕ್ ಅಬ್ಬರಿಸಿದ್ದಾರೆ. ಮಾಸ್ತಿ ಡೈಲಾಗ್ಸ್, ಚರಣ್ ರಾಜ್ ಮ್ಯೂಸಿಕ್ ಈ ಚಿತ್ರಕ್ಕಿದೆ. ಸುಧೀರ್ ಕೆ. ಎಂ ಚಿತ್ರವನ್ನು ನಿರ್ಮಿಸಿದ್ದು ತಾರಾ, ದತ್ತಣ್ಣ, ಶರತ್ ಲೋಹಿತಾಶ್ವ, ಕುರಿ ಪ್ರತಾಪ್ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಅಕ್ಟೋಬರ್‌ನಲ್ಲಿ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ.

ಇನ್ನು ಸೆನ್ಸಾರ್‌ ಮಂಡಳಿ ಸಿನಿಮಾ ನೋಡಿ ಒಂದು ಡೈಲಾಗ್ ಮ್ಯೂಟ್ ಮಾಡೋಕೆ ಹೇಳಿದೆ. ಜೊತೆಗೆ 5 ಸನ್ನಿವೇಶಗಳಲ್ಲಿ ಸಣ್ಣ ಸಣ್ಣ ಕಟ್‌ ಅಥವಾ ಬದಲಾವಣೆಗೆ ಸೂಚಿಸಿದೆ. ಸೆನ್ಸಾರ್ ಮಂಡಳಿ ಕಟ್‌ಗಳನ್ನು ಹೇಳಿರುವುದು ನೋಡುತ್ತಿದ್ದರೆ ಸಿನಿಮಾ ಸಿಕ್ಕಾಪಟ್ಟೆ ವೈಲೆಂಟ್ ಆಗಿದೆ ಎನಿಸುತ್ತಿದೆ. ಸೂರಿ ಸಿಕ್ಕಾಪಟ್ಟೆ ರಾ ಆಗಿ ಸಿನಿಮಾ ಕಟ್ಟಿಕೊಟ್ಟಿರುವಂತೆ ಕಾಣುತ್ತಿದೆ.

Duniya-suri-Bad-Manners-Censor-cuts

ಒಂದು ಸನ್ನಿವೇಶದಲ್ಲಿ 'ಮೆಂಟಲ್' ಎನ್ನುವ ಡೈಲಾಗ್ ಮ್ಯೂಟ್ ಮಾಡುವಂತೆ ಸೂಚಿಸಿದೆ. ಬಿಯರ್ ಬಾಟಲಿ ಮೇಲಿನ ಬ್ರ್ಯಾಂಡ್ ಹೆಸರು ಬ್ಲರ್ ಮಾಡುವಂತೆಯೂ ಹೇಳಲಾಗಿದೆ. ಮತ್ತೊಂದು ಸನ್ನಿವೇಶದಲ್ಲಿ ಡ್ರಗ್ಸ್‌ ತೋರಿಸುವಾಗ Disclaimer ಹಾಡುವಂತೆ ತಿಳಿಸಿದೆ. ತಲೆಯಿಂದ ರಕ್ತ ಸೋರುವುದು, ತ್ರಿಶೂಲವನ್ನು ಕುತ್ತಿಗೆಗೆ ಚುಚ್ಚುವುದು, ಬಾಯಿಯೊಳಗೆ ಗನ್ ಇಟ್ಟು ಶೂಟ್ ಮಾಡುವುದು ಹೀಗೆ ಒಂದಷ್ಟು ಸನ್ನಿವೇಶಗಳನ್ನು ಕಟ್ ಅಥವಾ ಬದಲಾಯಿಸಲು ಸೆನ್ಸಾರ್ ಮಂಡಳಿ ಹೇಳಿದೆ.

'ಬ್ಯಾಡ್ ಮ್ಯಾನರ್ಸ್' ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು ಚಿತ್ರದ ಕಾಲಾವಧಿ 2 ಗಂಟೆ 10 ನಿಮಿಷ 34 ಸೆಕೆಂಡ್ ಅನ್ನೋದು ಗೊತ್ತಾಗುತ್ತಿದೆ. ನಿರ್ದೇಶಕ ಸೂರಿ ಕಳೆದ 3 ವರ್ಷಗಳಿಂದ ಇದೊಂದೇ ಸಿನಿಮಾದಲ್ಲಿ ಮುಳುಗಿ ಹೋಗಿದ್ದರು. ಸದ್ಯ ಸಿನಿಮಾ ರಿಲೀಸ್ ಆಗುತ್ತಿದ್ದು ಆ ಗುಂಗಿನಿಂದ ಸೂರಿ ಹೊರ ಬರಲಿದ್ದಾರೆ.'ಬ್ಯಾಡ್ ಮ್ಯಾನರ್ಸ್' ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಕುತೂಹಲ ಮೂಡಿಸಿರುವುದಂತೂ ಸುಳ್ಳಲ್ಲ.

'ಅಮರ್' ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಹಾಗಾಗಿ ಅಭಿ ಕೂಡ 'ಬ್ಯಾಡ್ ಮ್ಯಾನರ್ಸ್' ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸೂರಿ ಎಂದಿನಂತೆ ವಿಭಿನ್ನ ಪಾತ್ರಗಳನ್ನು ಸೃಷ್ಟಿಸಿ, ಅದಕ್ಕೆ ವಿಚಿತ್ರ ಹೆಸರುಗಳನ್ನಿಟ್ಟು ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ಅಭಿ- ರಚಿತಾ ಕಾಂಬಿನೇಷನ್‌ ಕೂಡ ನಿರೀಕ್ಷೆ ಮೂಡಿಸಿರೋದು ಸುಳ್ಳಲ್ಲ. ಪ್ರಿಯಾಂಕಾ ಕುಮಾರ್ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಒಂದು ರಗಡ್ ಕತೆಗೆ ಸೂರಿ ಸುಕ್ಕಾ ಟ್ರೀಟ್‌ಮೆಂಟ್ ನೋಡೋಕೆ ಅಭಿಮಾನಿಗಳಂತೂ ಕಾಯುತ್ತಿದ್ದಾರೆ.

More from Filmibeat

English summary
Abishek Ambareesh's Bad Manners Censor: The Cuts And The Mutes
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X