ಶಿಷ್ಯನ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ ಸೂರಿ ; 'ಸೋಮು ಸೌಂಡ್' ಕೇಳಿ ಓಡಿ ಬಂದ ಡಾಲಿ ..!

ಚಿತ್ರರಂಗಕ್ಕೆ ಆಗಮಿಸುತ್ತಿರುವ ಹೊಸಬರಲ್ಲಿ ಬಹುತೇಕರು ಯಾವುದೋ ಬದಲಾವಣೆಯೊಂದರ ಸೂತ್ರ ಹಿಡಿದು ಬಂದವರಂತೆ ಕಾಣಿಸೋದರಲ್ಲಿ ವಿಶೇಷವೇನೂ ಇಲ್ಲ. ಯಾಕೆಂದರೆ ಹೀಗೆ ಬಂದ ಹೊಸಬರನೇಕರು ಗೆದ್ದಿದ್ದಾರೆ. ಸಂಚಲನವನ್ನೇ ಸೃಷ್ಟಿಸಿದ್ದಾರೆ. ಅದರಲ್ಲಿಯೂ ಕೆಲವರು ಟೈಟಲ್ ಮೂಲಕವೇ ಗಮನ ಸೆಳೆಯುತ್ತಾರೆ. ಆ ಸಾಲಿಗೆ ಸೇರುವ ಮತ್ತೊಂದು ಚಿತ್ರ ಸೋಮು ಸೌಂಡ್ ಇಂಜಿನಿಯರ್.

ಆರಂಭದಿಂದಲೂ ಕುತೂಹಲವನ್ನ ಕೆರಳಿಸುತ್ತಾ ಬಂದ ಈ ಚಿತ್ರದ ಟೀಸರ್ ಹಿಂದೆಯೇ ಟಾಕ್ ಆಫ್ ದಿ ಟೌನ್ ಆಗಿತ್ತು. ಇನ್ನೂ ವಾರದ ಹಿಂದೆ ಬಿಡುಗಡೆ ಆದ ಹಾಡು ಯುವ ಮನಸುಗಳನ್ನು ಮೊದಲ ಕೇಳುವಿಕೆಯಲ್ಲಿಯೇ ಆವರಿಸಿಕೊಂಡಿದೆ. ಇದೀಗ ಈ ಹಾಡಿನ ಪ್ರಭೆಯಲ್ಲಿಯೇ ಚಿತ್ರತಂಡ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಿದೆ. ಇಂದು ಸಂಜೆ ಟ್ರೇಲರ್ ಮೂಲಕ ಸಮಸ್ತ ಕನ್ನಡಿಗರಿಗೆ ಮಾರ್ಚ್ 15ಕ್ಕೆ ಚಿತ್ರಮಂದಿರಕ್ಕೆ ಬರುವಂತೆ ಆಮಂತ್ರಣ ಪತ್ರಿಕೆಯನ್ನೂ ನೀಡಲಿದೆ.

Duniya Suri To Release The Trailer Somu Sound Engineer

ಅಭಿ ಈ ಸೋಮು ಸೌಂಡ್ ಇಂಜಿನಿಯರ್ ಚಿತ್ರದ ಸಾರಥಿ. ಇನ್ನೂ ಹೇಳಿ..ಕೇಳಿ.. ಇವರು ದುನಿಯಾ ಸೂರಿ ಅವರ ಶಿಷ್ಯ. 09 ವರ್ಷ ಸೂರಿ ಜೊತೆ ಸಹಾಯಕ ಸಹ ನಿರ್ದೇಶಕನಾಗಿದ್ದ ಅಭಿ, ಆ ನಂತರ ದುನಿಯಾ ವಿಜಯ್‌ ಪಾಳಯದಲ್ಲಿ ಗುರುತಿಸಿಕೊಂಡು ಸೈ ಅನಿಸಿಕೊಂಡಿದ್ದರು. ಇದೀಗ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ವಿಶೇಷ ಅಂದರೆ ಇವರ ಮೊದಲ ಹೆಜ್ಜೆಯಲ್ಲಿ ಇವರ ಗುರು ಸೂರಿ ಜೊತೆಯಾಗಿದ್ದಾರೆ. ಚಿತ್ರದ ಟ್ರೇಲರ್ ನ ಇಂದು ಸಂಜೆ ಆರು ಘಂಟೆಗೆ ಬಿಡುಗಡೆ ಮಾಡಲಿದ್ದಾರೆ. ಡಾಲಿ ಧನಂಜಯ್ ಹೊಸತಂಡದ ಈ ಹೊಸ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಿದ್ದಾರೆ. ಟ್ರೇಲರ್ ಬಿಡುಗಡೆ ಮಾಡಲು ಸೂರಿ ಜೊತೆ ಡಾಲಿ ಕೈ ಜೋಡಿಸಿದ್ದಾರೆ.

ಶ್ರೇಷ್ಠ ಹಾಗೂ ನಿವಿಶ್ಕಾ ಪಾಟೀಲ್ ಸೋಮು ಸೌಂಡ್ ಇಂಜಿನಿಯರ್ ಚಿತ್ರದ ಎರಡು ಕಣ್ಣು. ಸಲಗ ಸಿನಿಮಾದಲ್ಲಿ ಕೆಂಡ ಪಾತ್ರದ ಮೂಲಕವೇ ಹೆಸರು ಮಾಡಿದ ಶ್ರೇಷ್ಠ ಈ ಚಿತ್ರದ ಮೂಲಕ ನಾಯಕ ನಟನಾಗಿ ಬಡ್ತಿಯನ್ನ ಪಡೆದಿದ್ದಾರೆ. ನಿವಿಶ್ಕಾ ಪಾಟೀಲ್ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ . ಈ ಎರಡು ಹೊಸ ಮುಖಗಳ ಜೊತೆ ಜಹಾಂಗೀರ್ .. ಯಶ್ ಶೆಟ್ಟಿ.. ಅವರಂತಹ ಅನುಭವಿ ಕಲಾವಿದರು ಚಿತ್ರದಲ್ಲಿದ್ದಾರೆ. ಚಿತ್ರದ ಚಿತ್ರೀಕರಣವನ್ನ ಸಂಪೂರ್ಣ ಉತ್ತರ ಕರ್ನಾಟಕದ ಭಾಗದಲ್ಲಿ ಮಾಡಿರುವುದು ಚಿತ್ರದ ವಿಶೇಷತೆಯಲ್ಲಿ ಒಂದು

Duniya Suri To Release The Trailer Somu Sound Engineer

ಟಗರು- ಸಲಗ ಚಿತ್ರದ ಹಿಂದೆ ಇದ್ದ ತಂತ್ರಜ್ಞರು ಸೋಮು ಸೌಂಡ್ ಇಂಜಿನಿಯರ್ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಚರಣ್ ರಾಜ್ ಚಿತ್ರಕ್ಕೆ ಸಂಗೀತ ನೀಡಿದ್ದರೆ, ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ದೀಪು ಎಸ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಸಲಗ ಹಾಗೂ ಭೀಮ ಖ್ಯಾತಿಯ ಶಿವಸೇನಾ ತಮ್ಮ ಕ್ಯಾಮರಾದಲ್ಲಿ ಚಿತ್ರವನ್ನ ಸೆರೆ ಹಿಡಿದಿದ್ದಾರೆ. ಹೊಸಬರ ಕನಸನ್ನ ಸಾಕಾರಗೊಳಿಸುವ ನಿಟ್ಟಿನಲ್ಲಿ ನಿರ್ಮಾಪಕರಾಗಿ ಕ್ರಿಸ್ಟೋಫರ್ ಕಿಣಿ ತಮ್ಮ ಕೆಲಸವನ್ನ ಅಚ್ಚು ಕಟ್ಟಾಗಿ ಮಾಡಿದ್ದಾರೆ. ಅತ್ಯಂತ ಪ್ರೀತಿಯಿಂದ ಚಿತ್ರವನ್ನ ನಿರ್ಮಿಸಿದ್ದಾರೆ.

Duniya Suri To Release The Trailer Somu Sound Engineer

ಒಟ್ಟಿನಲ್ಲಿ ಕನ್ನಡ ಚಿತ್ರರಂಗದ ಮಟ್ಟಿಗೆ ಉತ್ತರ ಕರ್ನಾಟಕದಿಂದ ಬಂದ ಹುಡುಗರು ನಿರ್ದೇಶಕರಾಗಿ ಗೆದ್ದಿರೋದು ಕಡಿಮೆ. ಅಭಿ ಈ ಕೊರತೆಯನ್ನ ನೀಗಿಸಲಿ, ಸೋಮು ಸೌಂಡ್ ಇಂಜಿನಿಯರ್ ಗೆಲ್ಲಲಿ ಎಂಬ ಗಾಂಧಿನಗರದ ಆಶಯದ ನಡುವೆ ಇಂದು ಸೋಮು ಸೌಂಡ್ ಇಂಜಿನಿಯರ್ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಚಿತ್ರ ಮೇ 15ಕ್ಕೆ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ತೆರೆಗೆ ಬರಲಿದೆ

More from Filmibeat

English summary
Duniya Suri & Daali Dhananjaya To Release The Trailer Of Somu Sound Engineer Today Evening At 6Pm.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X