ಮನಸ್ಸಿಗೆ ನೋವುಂಟಾಗಿದೆ, ದೂರು ನೀಡುತ್ತೇನೆ: ದುನಿಯಾ ಸೂರಿ

ದುನಿಯಾ ಸೂರಿ ಸಾಮಾಜಿಕ ಜಾಲತಾಣದಿಂದ ದೂರ. ಇನ್‌ಸ್ಟಾಗ್ರಾಂನಲ್ಲಿದ್ದಾರಾದರೂ ಹೆಚ್ಚು ಪೋಸ್ಟ್‌ಗಳನ್ನು ಹಾಕುವುದಿಲ್ಲ.

ಆದರೆ ಇದೇ ಸಾಮಾಜಿಕ ಜಾಲತಾಣದಿಂದ ದುನಿಯಾ ಸೂರಿ ಮನಸ್ಸಿಗೆ ನೋವುಂಟಾಗಿದೆಯಂತೆ. ಈ ಬಗ್ಗೆ ಅವರೇ ಪತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ದುನಿಯಾ ಸೂರಿಗೆ ಬೇಸರವಾಗಲು ಕಾರಣ, ಅವರ ಹೆಸರಲ್ಲಿ ಸೃಷ್ಟಿಯಾಗಿರುವ ನಕಲಿ ಖಾತೆ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ದುನಿಯಾ ಸೂರಿ, ''ಇನ್‌ಸ್ಟಾಗ್ರಾಂ ಬಿಟ್ಟರೆ ಬೇರೆ ಯಾವುದೇ ರೀತಿಯ ಸೋಷಿಯಲ್ ಮೀಡಿಯಾದಲ್ಲೂ ನಾನು ಇಲ್ಲ. ಟ್ವಿಟ್ಟರ್‌ನಲ್ಲಿರುವ 'ದುನಿಯಾ ಸೂರಿ' ಖಾತೆ ನನ್ನದಲ್ಲ'' ಎಂದಿದ್ದಾರೆ.

Duniya Suri Upset Because Of Fake Twitter Account On His Name

''ಈ ಟ್ವಿಟ್ಟರ್ ಖಾತೆಯಲ್ಲಿ ಅಪ್‌ಲೋಡ್ ಆಗುತ್ತಿರುವ ಯಾವುದೇ ಅನಿಸಿಕೆ, ಅಭಿಪ್ರಾಯ ಮತ್ತು ಸಮಾಜದ ಆಗು-ಹೋಗುಗಳ ಬಗ್ಗೆ ಹಾಕಲಾಗುತ್ತಿರುವ ಯಾವುದೇ ಅಪ್‌ಡೇಟ್ಸ್ ನನ್ನದಲ್ಲ. ಕಾನೂನು ಪ್ರಕಾರ, ನನ್ನ ಅನುಮತಿ ಇಲ್ಲದೆ ನನ್ನ ಹೆಸರು, ಫೋಟೊ ಬಳಸುವುದು ಅಪರಾಧ. ದಯವಿಟ್ಟು ಇದನ್ನು ಇಲ್ಲಿಗೆ ನಿಲ್ಲಿಸಿ'' ಎಂದು ಮನವಿ ಮಾಡಿದ್ದಾರೆ ಸೂರಿ.

''ಸೈಬರ್ ಕ್ರೈಂಗೆ ಈ ಹಿಂದೆ ಫೇಕ್ ಅಕೌಂಟ್ಸ್ ಹಾಗೂ ಫೇಕ್ ಆಡಿಷನ್‌ಗಳ ಬಗ್ಗೆ ನಾನು ದೂರು ನೀಡಿದ್ದೇನೆ. ಈಗ ಈ ಟ್ವಿಟ್ಟರ್‌ನ ಫೇಕ್ ಖಾತೆ ಬಗ್ಗೆಯೂ ದೂರು ನೀಡುತ್ತೇನೆ. ನನ್ನ ಕೆಲಸದ ನಡುವೆ ಈ ರೀತಿಯ ವಿಚಾರವು ನನ್ನ ಮನಸ್ಸಿಗೆ ಬಹಳ ನೋವು ಉಂಟು ಮಾಡಿದೆ'' ಎಂದಿದ್ದಾರೆ ಸೂರಿ.

ಸೂರಿ ಹೆಸರಲ್ಲಿ 'ದುನಿಯಾ ಸೂರಿ' ಹೆಸರಿನ ಟ್ವಿಟ್ಟರ್ ಖಾತೆ ಇದ್ದು, ಆ ಖಾತೆಯ ಮೂಲಕ ಅನಾಮಿಕರು ಹಲವು ಪೋಸ್ಟ್‌ಗಳನ್ನು ಆಗಾಗ್ಗೆ ಹರಿಬಿಡುತ್ತಿರುತ್ತಾರೆ. ಹಲವರು ಇದು ದುನಿಯಾ ಸೂರಿಯವರ ಅಧಿಕೃತ ಟ್ವಿಟ್ಟರ್ ಖಾತೆ ಎಂದೇ ನಂಬಿದ್ದಾರೆ.

ಸಿನಿಮಾಗಳ ವಿಷಯಕ್ಕೆ ಬರುವುದಾದರೆ, ದುನಿಯಾ ಸೂರಿ ಪ್ರಸ್ತುತ 'ಬ್ಯಾಡ್ ಮ್ಯಾನರ್ಸ್' ಹೆಸರಿನ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಸಿನಿಮಾದಲ್ಲಿ ಅಭಿಶೇಕ್ ಅಂಬರೀಶ್ ನಾಯಕ. ಈ ಸಿನಿಮಾದ ಬಳಿಕ ನಟ ದರ್ಶನ್ ಜೊತೆಗೆ ಸೂರಿ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

More from Filmibeat

English summary
Director Duniya Suri upset because of fake twitter account on his name. He said he will give complaint about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X