ಇಂದು ವಿಚಾರಣಾಧೀನ ಖೈದಿಗಳ ಕೊಠಡಿಗೆ ವಿಜಯ್ ಅಂಡ್ ಗ್ಯಾಂಗ್ ಶಿಫ್ಟ್.!
Recommended Video

ತೆರೆ ಮೇಲೆ ಹೀರೋ ಆಗಿ... ಝಬರ್ದಸ್ತ್ ಫೈಟ್ ಮಾಡುತ್ತಾ... ದುಷ್ಟರ ರುಂಡ ಚೆಂಡಾಡುತ್ತಿದ್ದ ದುನಿಯಾ ವಿಜಯ್ ನಿಜ ಜೀವನದಲ್ಲೂ ಒಬ್ಬರ ಮೇಲೆ ಹಲ್ಲೆ ನಡೆಸಿ ಪರಪ್ಪನ ಅಗ್ರಹಾರ ಜೈಲಿನ ಅತಿಥಿ ಆಗಿದ್ದಾರೆ.
ಜಿಮ್ ಟ್ರೈನರ್ ಹಾಗೂ ಬಾಡಿ ಬಿಲ್ಡರ್ ಮಾರುತಿ ಗೌಡ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ದುನಿಯಾ ವಿಜಯ್ ಮತ್ತು ಸಹಚರರು ಕಂಬಿ ಎಣಿಸುವಂತಾಗಿದೆ.
ಮಾರುತಿ ಗೌಡ ಮೇಲೆ ಹಲ್ಲೆ ನಡೆಸಿರುವುದು ನಿಜ ಅಂತ ದುನಿಯಾ ವಿಜಯ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡರು. ಬಳಿಕ ದುನಿಯಾ ವಿಜಯ್, ಜಿಮ್ ಟ್ರೈನರ್ ಪ್ರಸಾದ್, ಡ್ರೈವರ್ ಪ್ರಸಾದ್ ಹಾಗೂ ಮಣಿ ಎಂಬುವವರನ್ನ ನಿನ್ನೆ ರಾತ್ರಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು.
ವಿಚಾರಣೆ ನಡೆಸಿದ ನ್ಯಾಯಾಧೀಶರು ದುನಿಯಾ ವಿಜಯ್ ಮತ್ತು ಗ್ಯಾಂಗ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದರು. ಹೀಗಾಗಿ ಪರಪ್ಪನ ಅಗ್ರಹಾರಕ್ಕೆ ದುನಿಯಾ ವಿಜಯ್ ಮತ್ತು ಗ್ಯಾಂಗ್ ನ ಕರೆದೊಯ್ಯಲಾಯಿತು. ಇಂದು ಅವರನ್ನ ವಿಚಾರಣಾಧೀನ ಖೈದಿಗಳ ರೂಮ್ ಗೆ ಶಿಫ್ಟ್ ಮಾಡಲಾಗುವುದು. ಮುಂದೆ ಓದಿರಿ...

ಇಂದು ಖೈದಿಗಳ ಕೊಠಡಿಯಲ್ಲಿ ದುನಿಯಾ ವಿಜಯ್
ಕೋಪದಲ್ಲಿ ಮಾಡಿಕೊಂಡ ಒಂದು ಅವಾಂತರದಿಂದ ದುನಿಯಾ ವಿಜಯ್ ಅಂಡ್ ಗ್ಯಾಂಗ್ ಇಂದು ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುವ ಹಾಗಾಗಿದೆ. ನಿನ್ನೆ ತಡರಾತ್ರಿ ಪರಪ್ಪನ ಅಗ್ರಹಾರ ಸೇರಿದ ದುನಿಯಾ ವಿಜಯ್ ಮತ್ತು ತಂಡವನ್ನ ಇಂದು ವಿಚಾರಣಾಧೀನ ಖೈದಿಗಳ ಕೊಠಡಿಗೆ ಶಿಫ್ಟ್ ಮಾಡಲಾಗುತ್ತದೆ.

ಕಂಬಿ ಹಿಂದೆ ದುನಿಯಾ ವಿಜಯ್ ಮತ್ತು ತಂಡ
ನಿನ್ನೆ ರಾತ್ರಿ ಪರಪ್ಪನ ಅಗ್ರಹಾರ ತಲುಪುತ್ತಿದ್ದಂತೆಯೇ, ಜೈಲಿನ ಲೆಡ್ಜರ್ ಪುಸ್ತಕದಲ್ಲಿ ದುನಿಯಾ ವಿಜಯ್, ಜಿಮ್ ಟ್ರೈನರ್ ಪ್ರಸಾದ್, ಡ್ರೈವರ್ ಪ್ರಸಾದ್ ಹಾಗೂ ಮಣಿ ಹೆಸರನ್ನ ಎಂಟ್ರಿ ಮಾಡಲಾಗಿದೆ.

ರಾತ್ರಿ ಊಟ ಇಲ್ಲ.!
ನಿನ್ನೆ ರಾತ್ರಿ ಪರಪ್ಪನ ಅಗ್ರಹಾರ ತಲುಪುವಷ್ಟರಲ್ಲಿ ಊಟದ ಸಮಯ ಮುಗಿದಿದ್ದರಿಂದ, ವಿಜಯ್ ಮತ್ತು ಗ್ಯಾಂಗ್ ಗೆ ಊಟ ಲಭ್ಯವಾಗಿಲ್ಲ. ಇಂದು ಜೈಲಿನ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಪ್ರಕ್ರಿಯೆ ಮುಗಿದ ಬಳಿಕ ನಾಲ್ವರಿಗೆ ವಿಚಾರಾಣಾಧೀನ ಖೈದಿ ನಂಬರ್ ನೀಡಿ, ವಿಚಾರಾಣಾಧೀನ ಖೈದಿಗಳ ಕೊಠಡಿಯಲ್ಲಿ ಇರಿಸಲಾಗುವುದು.

ಗೃಹ ಸಚಿವರನ್ನ ಭೇಟಿ ಮಾಡ್ತಾರಂತೆ ಪಾನಿಪೂರಿ ಕಿಟ್ಟಿ
ತಮಗೆ ಸೂಕ್ತ ನ್ಯಾಯ ದೊರಕಿಸುವಂತೆ ಕೋರಿಕೊಳ್ಳಲು ಗೃಹ ಸಚಿವರನ್ನ ಭೇಟಿ ಮಾಡಲು ಮಾರುತಿ ಗೌಡ ಚಿಕ್ಕಪ್ಪ ಪಾನಿಪೂರಿ ಕಿಟ್ಟಿ ನಿರ್ಧರಿಸಿದ್ದಾರೆ. ಕಾನೂನು ಹೋರಾಟಕ್ಕೆ ಪಾನಿಪೂರಿ ಕಿಟ್ಟಿ ಸಜ್ಜಾಗಿದ್ದಾರೆ.


Click it and Unblock the Notifications











