»   » ನರ್ತಕಿಗೆ ವೆಸ್ಪಾದಲ್ಲಿ ಬಂದ ಮಿ. ಅಂಡ್ ಮಿಸಸ್ ದುನಿಯಾ ವಿಜಿ

ನರ್ತಕಿಗೆ ವೆಸ್ಪಾದಲ್ಲಿ ಬಂದ ಮಿ. ಅಂಡ್ ಮಿಸಸ್ ದುನಿಯಾ ವಿಜಿ

By: ಹರಾ
Subscribe to Filmibeat Kannada

ದುನಿಯಾ ವಿಜಿ ಅಭಿಮಾನಿಗಳಿಗಿವತ್ತು ಅಕ್ಷರಶಃ ಹಬ್ಬ. ಒಂದ್ಕಡೆ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಸಂಭ್ರಮವಾಗಿದ್ದರೆ, ಇನ್ನೊಂದ್ಕಡೆ ಬಹುನಿರೀಕ್ಷಿತ 'ಜಾಕ್ಸನ್' ಚಿತ್ರ ತೆರೆಗೆ ಬಂದಿದೆ. ಮೈಕೇಲ್ 'ಜಾಕ್ಸನ್' ಆಗಿ ಸೂಪರ್ ಸ್ಟೆಪ್ ಹಾಕಿರುವ ವಿಜಿಯನ್ನ ಕಣ್ತುಂಬಿಕೊಳ್ಳಬೇಕು ಅಂತ ಚಿತ್ರಮಂದಿರಕ್ಕೆ ಇವತ್ತು ಭೇಟಿ ಕೊಟ್ಟ ಅಭಿಮಾನಿಗಳಿಗೆ ಒಂದು ಸರ್ಪ್ರೈಸ್ ಕಾದಿತ್ತು.

ರೀಲ್ ನಲ್ಲಿ ಮಾತ್ರ ದುನಿಯಾ ವಿಜಿಯನ್ನ ನೋಡೋಕೆ ಬಂದ ಜನರಿಗೆ, ರಿಯಲ್ಲಾಗೂ 'ಜಾಕ್ಸನ್' ದರ್ಶನವಾಗಿತ್ತು. 10.15 ಕ್ಕೆ ಮೊದಲ ಶೋ ಶುರುವಾಗುವುದಕ್ಕೆ ಕೆಲವೇ ನಿಮಿಷಗಳು ಬಾಕಿ ಇತ್ತು. ಆಗ, ದುನಿಯಾ ವಿಜಿ, ಥೇಟ್ 'ಜಾಕ್ಸನ್' ಸ್ಟೈಲ್ ನಲ್ಲಿ ಬೆಂಗಳೂರಿನ 'ನರ್ತಕಿ' ಚಿತ್ರಮಂದಿರಕ್ಕೆ ಭೇಟಿ ಕೊಟ್ಟರು. ['ಆಟೋ'ದಲ್ಲಿ ಬಂದ ನಾಗರತ್ನ 'ಲ್ಯಾಂಡ್ ರೋವರ್'ನಲ್ಲಿ ಹೋದ್ರು!]

Duniya Vijay

ಸೆಲೆಬ್ರಿಟಿಗಳು ಕಾರ್ ನಲ್ಲಿ ಸ್ಟೈಲ್ ಆಗಿ ಬಂದಿಳಿಯುವುದು ಕಾಮನ್. ಆದ್ರೆ, ದುನಿಯಾ ವಿಜಿ ಸ್ಪೆಷಾಲಿಟಿನೇ ಬೇರೆ. ಕಾರ್ ನ ಪಕ್ಕಕ್ಕಿಟ್ಟು, ವೆಸ್ಪಾ ಬೈಕ್ ನಲ್ಲಿ ದುನಿಯಾ ವಿಜಿ 'ನರ್ತಕಿ' ಚಿತ್ರಮಂದಿರದ ಮುಂದೆ ಬಂದಿಳಿದರು.

ಅವರೊಬ್ಬರೇ ಆಗಿದ್ದರೆ, ಅದ್ರಲ್ಲಿ ವಿಶೇಷತೆ ಏನಿರುತ್ತಿರಲಿಲ್ಲ. ಎಲ್ಲರಿಗೂ ಸ್ಪೆಷಲ್ ಅನಿಸಿದ್ದು, ವೆಸ್ಪಾ ಗಾಡಿಯಲ್ಲಿ ದುನಿಯಾ ವಿಜಿ ಬೆನ್ನಿಗೆ ಅಂಟಿಕೊಂಡು ಬಂದ ಪತ್ನಿ ನಾಗರತ್ನರನ್ನ ನೋಡಿದಾಗ. [ದುನಿಯಾ ವಿಜಿ-ನಾಗರತ್ನ ಸಂಧಾನಕ್ಕೆ 6 ಸೂತ್ರಗಳು]

Duniya Vijay2

ಎರಡು ವರ್ಷಗಳಿಂದ ಇದೇ ದಂಪತಿಯ ಸಂಸಾರ ಕಲಹ, ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಮೆಗಾ ಸೀರಿಯಲ್ ಆಗಿ ಪ್ರಸಾರವಾಗುತ್ತಿದ್ದಾಗ ತಲೆಚಚ್ಚಿಕೊಂಡಿದ್ದ ಜನ, ಇಂದು ಅದೇ ಜೋಡಿಯ ರೋಮ್ಯಾನ್ಸ್ ನೋಡಿ ಬೆಕ್ಕಸ ಬೆರಗಾದರು. ಇದೇ ಖುಷಿಯಲ್ಲಿ ಅಲ್ಲಿ ನರೆದಿದ್ದ ಜನಸಮೂಹ ಮಿಸ್ಟರ್ ಅಂಡ್ ಮಿಸಸ್ ದುನಿಯಾ ವಿಜಿಗೆ ಪುಷ್ಪಾರ್ಚಣೆ ಕೂಡ ಮಾಡಿದರು.

Duniya Vijay3

ಬೈಕ್ ಇಳಿತ್ತಿದ್ದ ಹಾಗೆ, ಅಭಿಮಾನಿಗಳತ್ತ ಕೈ ಬೀಸಿ ಪತ್ನಿ ಕೈಹಿಡಿದುಕೊಂಡೇ ಚಿತ್ರಮಂದಿರದ ಒಳಗೆ ದುನಿಯಾ ವಿಜಿ ಎಂಟ್ರಿಕೊಟ್ಟರು. ಇಡೀ ಚಿತ್ರವನ್ನ ದುನಿಯಾ ವಿಜಿ ಮತ್ತು ನಾಗರತ್ನ ಅಭಿಮಾನಿಗಳೊಂದಿಗೆ ಕೂತು ನೋಡಿದರು. ದಂಪತಿಯ ಮಕ್ಕಳೂ ಕೂಡ 'ಜಾಕ್ಸನ್' ನೋಡಿ ಎಂಜಾಯ್ ಮಾಡಿದರು. [ವೈಮನಸು ಮರೆತು ಒಂದಾದ ವಿಜಯ್ - ನಾಗರತ್ನ]

ದುನಿಯಾ ವಿಜಿ ಮತ್ತು ನಾಗರತ್ನ ಜೊತೆ ನಿಂತು ಫೋಟೋ ಹಿಡಿಸಿಕೊಳ್ಳಬೇಕು ಅಂತ ಬಯಸಿದ ಪ್ರತಿಯೊಬ್ಬ ಅಭಿಮಾನಿಯೊಂದಿಗೆ ದಂಪತಿ ಫೋಟೋ ಕ್ಲಿಕ್ ಮಾಡಿಸಿಕೊಂಡರು. ದುನಿಯಾ ವಿಜಿ ಜೊತೆ ಪಾವನಾ ಮಿಂಚಬೇಕಾಗಿದ್ದ ಸಂದರ್ಭದಲ್ಲಿ ದುನಿಯಾ ವಿಜಿ ಪತ್ನಿ ನಾಗರತ್ನ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು ವಿಶೇಷ.

Duniya Vijay5

ಹೀರೋಯಿನ್ ಗಿಂತ ಹೆಚ್ಚಾಗಿ ಮಿಂಚುತ್ತಿದ್ದ ನಾಗರತ್ನ, ಇಂತಹ ಚಾನ್ಸ್ ನ ದುನಿಯಾ ವಿಜಿ ಅಭಿನಯದ ಕಳೆದ ನಾಲ್ಕು ಸಿನಿಮಾಗಳಲ್ಲಿ ಮಿಸ್ ಮಾಡಿಕೊಂಡಿದ್ದರು. ಪತಿಯೊಂದಿಗೆ, ಪತಿಯ 'ಜಯಮ್ಮನ ಮಗ', 'ರಜನಿಕಾಂತ', 'ಶಿವಾಜಿನಗರ', 'ಸಿಂಹಾದ್ರಿ' ಚಿತ್ರಗಳನ್ನ ನೋಡದ ನಾಗರತ್ನ, ಇಂದು 'ಜಾಕ್ಸನ್' ಚಿತ್ರವನ್ನ ಪತಿಯ ಪಕ್ಕದಲ್ಲಿ ಕೂತು ಕಣ್ಣಾರೆ ಕಂಡು ಖುಷಿಪಟ್ಟರು.

ಕೋರ್ಟ್ ಆವರಣದಲ್ಲಿ ಮುಖಾಮುಖಿಯಾಗುತ್ತಿದ್ದ ಈ ದಂಪತಿ ಇಂದು ಖುಷಿಯಿಂದ ಕೈಕೈ ಹಿಡಿದುಕೊಂಡು ಕನ್ನಡ ಜನತೆ ಮುಂದೆ ಕಾಣಿಸಿಕೊಂಡಿದ್ದು ವಿಜಿ ಅಭಿಮಾನಿಗಳಿಗಂತೂ ಖುಷಿ ಕೊಟ್ಟಿದೆ.

English summary
After the prolonged Divorce drama, Duniya Vijay and his wife Nagaratna made their first public appearance together today (January 15th) in Narthaki Theater. The couple watched the movie Jackson along with their fans.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada