''ನಾಗರತ್ನ ಜೊತೆ ಬಾಳೋಕೆ ಸಾಧ್ಯವಿಲ್ಲ'' ಎಂದ ನಟ ದುನಿಯಾ ವಿಜಯ್.!
ಸ್ಯಾಂಡಲ್ ವುಡ್ ನ ಕರಿಚಿರತೆ ದುನಿಯಾ ವಿಜಯ್ ಫ್ಯಾಮಿಲಿ ರಂಪಾಟ ಇನ್ನೂ ಮುಗಿದಿಲ್ಲ. ನಟ ದುನಿಯಾ ವಿಜಯ್ ವಿರುದ್ಧ ಪತ್ನಿ ನಾಗರತ್ನ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದರು. ದೂರಿನ ಅನ್ವಯ ಇಂದು ವಿಚಾರಣೆಗೆ ಹಾಜರ್ ಆಗುವಂತೆ ದುನಿಯಾ ವಿಜಯ್ ಗೆ ನೋಟೀಸ್ ಜಾರಿ ಮಾಡಲಾಗಿತ್ತು.
ಅದರಂತೆ ಇಂದು ಮಹಿಳಾ ಆಯೋಗದ ಮುಂದೆ ದುನಿಯಾ ವಿಜಯ್ ಹಾಜರಾದರು. ವಿಚಾರಣೆ ಸಂದರ್ಭದಲ್ಲಿ ''ನಾಗರತ್ನ ಜೊತೆ ಬಾಳಲು ನನ್ನಿಂದ ಸಾಧ್ಯವಿಲ್ಲ'' ಎಂದು ದುನಿಯಾ ವಿಜಯ್ ಹೇಳಿದ್ದಾರಂತೆ. ಹಾಗಂತ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಹೇಳಿಕೆ ಕೊಟ್ಟಿದ್ದಾರೆ.

''ನಾಗರತ್ನ ಜೊತೆ ಬಾಳೋಕೆ ಸಾಧ್ಯವಿಲ್ಲ. ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ನಾಗರತ್ನಗೆ ಜೀವನಾಂಶ ನೀಡಿದ್ದೇನೆ'' ಎಂದು ದುನಿಯಾ ವಿಜಯ್ ಹೇಳಿದರು. ಜೀವನಾಂಶ ನೀಡಿರುವುದಕ್ಕೆ ದಾಖಲೆ ಕೊಡಿ ಎಂದು ಕೇಳಿದ್ದೇವೆ'' ಅಂತ ಮಾಧ್ಯಮಗಳ ಮುಂದೆ ನಾಗಲಕ್ಷ್ಮಿ ಹೇಳಿದರು.
ಜಿಮ್ ಟ್ರೈನರ್ ಮಾರುತಿ ಗೌಡ ಮೇಲೆ ಹಲ್ಲೆ ನಡೆಸಿ ದುನಿಯಾ ವಿಜಯ್ ನ್ಯಾಯಾಂಗ ಬಂಧನದಲ್ಲಿ ಇದ್ದಾಗ, ಇಬ್ಬರು ಹೆಂಡತಿಯರಾದ ನಾಗರತ್ನ ಮತ್ತು ಕೀರ್ತಿ ಗೌಡ ಕಿತ್ತಾಡಿಕೊಂಡಿದ್ದರು. ಕೀರ್ತಿ ಗೌಡ ಮೇಲೆ ನಾಗರತ್ನ ಚಪ್ಪಲಿಯಿಂದ ಹಲ್ಲೆ ನಡೆಸಿದ್ದರು. ಇದಾದ ಬಳಿಕ ನಾಗರತ್ನ ಮಹಿಳಾ ಆಯೋಗದ ಮೊರೆ ಹೋಗಿದ್ದರು.


Click it and Unblock the Notifications











