ದುನಿಯಾ ವಿಜಿಯಿಂದ ಹೊಡೆತ ತಿಂದ ಮಾರುತಿ ಗೌಡ ಯಾರು.? ಆತನ ಹಿನ್ನಲೆ ಏನು.?
Recommended Video

ಮಾರುತಿ ಗೌಡ... ಕೇವಲ ಎರಡು ದಿನಗಳ ಹಿಂದೆ ಈ ಹೆಸರು ಯಾರಿಗೆ ಗೊತ್ತಿತ್ತೋ, ಇಲ್ವೋ... ಆದ್ರೆ, ಇಂದು ಕರುನಾಡ ಮೂಲೆ ಮೂಲೆಯಲ್ಲೂ ಮಾರುತಿ ಗೌಡ ಬಗ್ಗೆ ಚರ್ಚೆ ಆಗುತ್ತಿದೆ. ಅದಕ್ಕೆ ಕಾರಣ ಒನ್ ಅಂಡ್ ಒನ್ಲಿ ಬ್ಲಾಕ್ ಕೋಬ್ರಾ ದುನಿಯಾ ವಿಜಯ್.!
ವಸಂತನಗರದ ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದ್ದ ಬಾಡಿ ಬಿಲ್ಡಿಂಗ್ ಕಾಂಪಿಟೇಶನ್ ನಲ್ಲಿ ದುನಿಯಾ ವಿಜಯ್ ಹಾಗೂ ಮಾರುತಿ ಗೌಡ ನಡುವೆ ರಂಪಾಟ ನಡೆಯಿತು.
ಮಾರುತಿ ಗೌಡ ರನ್ನ ಕಾರ್ ನಲ್ಲಿ ಕರ್ಕೊಂಡು ಹೋಗಿ, ಹಲ್ಲೆ ಮಾಡಿದ್ದಾರೆ ಎಂಬ ಆರೋಪ ದುನಿಯಾ ವಿಜಯ್ ಸೇರಿದಂತೆ ನಾಲ್ವರ ಮೇಲಿದೆ. ಅಷ್ಟಕ್ಕೂ, ಯಾರೀ ಮಾರುತಿ ಗೌಡ.? ಆತನ ಹಿನ್ನಲೆ ಏನು.? ಬಾಡಿ ಬಿಲ್ಡಿಂಗ್ ಕಾಂಪಿಟೇಶನ್ ನಲ್ಲಿ ಮಾರುತಿ ಗೌಡಗೆ ಏನು ಕೆಲಸ.? ಎಲ್ಲದರ ಸಂಪೂರ್ಣ ವಿವರ ಇಲ್ಲಿದೆ, ಓದಿರಿ...

ಯಾರೀ ಮಾರುತಿ ಗೌಡ.?
ಒಂದ್ಕಾಲದಲ್ಲಿ ದುನಿಯಾ ವಿಜಯ್ ಗೆ ಪರ್ಸನಲ್ ಜಿಮ್ ಟ್ರೈನರ್ ಆಗಿದ್ದ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಈ ಮಾರುತಿ ಗೌಡ. ಪಾನಿಪೂರಿ ಕಿಟ್ಟಿ ಅನುಪಸ್ಥಿತಿಯಲ್ಲಿ ಸ್ಯಾಂಡಲ್ ವುಡ್ ತಾರೆಯರಿಗೆ ಮಾರುತಿ ಗೌಡ ಜಿಮ್ ಟ್ರೈನಿಂಗ್ ಕೊಡ್ತಾರೆ. ಹೀಗಾಗಿ, ದುನಿಯಾ ವಿಜಯ್ ಗೆ ಮಾರುತಿ ಗೌಡ ಪರಿಚಯ ಇತ್ತು.

ಮಿಸ್ಟರ್ ಬೆಂಗಳೂರು.!
ಈ ಮಾರುತಿ ಗೌಡ ಕೂಡ ಬಾಡಿ ಬಿಲ್ಡರ್. 2016 ರಲ್ಲಿ 'ಮಿಸ್ಟರ್ ಬೆಂಗಳೂರು' ಸ್ಪರ್ಧೆಯಲ್ಲಿ ಗೆಲುವಿನ ನಗೆ ಬೀರಿದ್ದು ಇದೇ ಮಾರುತಿ ಗೌಡ. ರಾಷ್ಟ್ರೀಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಗುರುತಿಸಿಕೊಂಡಿರುವ ಮಾರುತಿ ಗೌಡ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಗೆ ಇಳಿಯಲು ಸಕಲ ತಯಾರಿ ನಡೆಸುತ್ತಿದ್ದರು.

ಚಿಕ್ಕಪ್ಪನೇ ಸ್ಫೂರ್ತಿ
ಪಿಯುಸಿ ಪಾಸ್ ಮಾಡಿರುವ ಮಾರುತಿ ಗೌಡಗೆ ಚಿಕ್ಕಪ್ಪ ಪಾನಿಪೂರಿ ಕಿಟ್ಟಿಯೇ ಸ್ಫೂರ್ತಿ. ಪಾನಿಪೂರಿ ಕಿಟ್ಟಿಯಂತೆ ಬಾಡಿ ಬಿಲ್ಡ್ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂಬುದು ಮಾರುತಿ ಗೌಡ ಕನಸು.

ಮಗನಂತೆ ನೋಡಿಕೊಳ್ಳುವ ಕಿಟ್ಟಿ
ಕಿಟ್ಟಿ ರವರದ್ದು ಜಾಯಿಂಟ್ ಫ್ಯಾಮಿಲಿ. ಹೀಗಾಗಿ, ಅಣ್ಣನ ಮಗ ಮಾರುತಿ ಗೌಡ ಕಂಡ್ರೆ ಪಾನಿಪೂರಿ ಕಿಟ್ಟಿಗೆ ಎಲ್ಲಿಲ್ಲದ ಅಕ್ಕರೆ. ಸ್ವಂತ ಮಗನಂತೆ ಕಿಟ್ಟಿ ಆತನನ್ನ ಸಾಕಿ ಸಲುಹಿದ್ದಾರೆ. ತಮ್ಮ ಮೇಲಿನ ಕೋಪವನ್ನ ಮಾರುತಿ ಗೌಡ ಮೇಲೆ ದುನಿಯಾ ವಿಜಯ್ ತೋರಿಸಿರುವುದಕ್ಕೆ ಪಾನಿಪೂರಿ ಕಿಟ್ಟಿ ಸಿಟ್ಟಾಗಿದ್ದಾರೆ.


Click it and Unblock the Notifications











