ದುನಿಯಾ ವಿಜಿ ಜಾಮೀನು ಅರ್ಜಿ ವಜಾ: ಜೈಲಲ್ಲೇ ಉಳಿಯಬೇಕು 'ಜಂಗ್ಲಿ'

Recommended Video

ಕರಿ ಚಿರತೆಗೆ ಜೈಲೇ ಗತಿ..! | Filmibeat Kannada

ಜಿಮ್ ಟ್ರೈನರ್ ಮಾರುತಿ ಗೌಡ ಅವರ ಮೇಲಿನ ಹಲ್ಲೆ ಮತ್ತು ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನವಾಗಿರುವ ನಟ ದುನಿಯಾ ವಿಜಯ್ ಮತ್ತು ಸ್ನೇಹಿತರ ಜಾಮೀನು ಅರ್ಜಿ ವಜಾ ಆಗಿದೆ.

ಸೋಮವಾರ ಜಾಮೀನು ಅರ್ಜಿ ವಿಚಾರಣೆ ಮಾಡಿದ್ದ 8ನೇ ಎಸಿಎಂಎಂ ಕೊರ್ಟ್ ಇಂದು ತೀರ್ಪು ಪ್ರಕಟಿಸಿದೆ. ಹೀಗಾಗಿ, ಈ ಹಿಂದೆ ಕೋರ್ಟ್ ನೀಡಿದ್ದ ಆದೇಶದಂತೆ 14 ದಿನಗಳವರೆಗೂ ನ್ಯಾಯಾಂಗ ಬಂಧನದಲ್ಲೇ ಇರಬೇಕು.

Duniya Vijay bail rejected

ಸೆಪ್ಟೆಂಬರ್ 22 ರಂದು ರಾತ್ರಿ ವಸಂತನಗರದಲ್ಲಿರುವ ಅಂಬೇಡ್ಕರ್ ನಗರದಲ್ಲಿ ಈ ಘಟನೆ ನಡೆದಿತ್ತು. ಬಾಡಿ ಬಿಲ್ಡಿಂಗ್ ಕಾಂಪಿಟೇಶನ್ ನಡೆಯುತ್ತಿದ್ದ ವೇಳೆ ಹಲ್ಲೆ ಮಾಡಲಾಗಿದೆ ಎಂದು ದೂರು ದಾಖಲಾಗಿದೆ.

ದುನಿಯಾ ವಿಜಯ್, ಬಾಡಿ ಬಿಲ್ಡರ್ ಪ್ರಸಾದ್, ಡ್ರೈವರ್ ಪ್ರಸಾದ್ ಮಣಿ ನಾಲ್ಕು ಜನ ಜಾಮೀನುಗಾಗಿ ಅರ್ಜಿ ಸಲ್ಲಿಸಿದ್ದರು. ಈ ನಾಲ್ಕು ಜನರ ವಿರುದ್ಧ ಹಲ್ಲೆಗೊಳಗಾದ ಮಾರುತಿ ಗೌಡ ಅವರ ಚಿಕ್ಕಪ್ಪ ಪಾನಿಪುರಿ ಕಿಟ್ಟಿ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಅನ್ವಯ ವಿಜಿ ಮತ್ತು ಸ್ನೇಹಿತರನ್ನ ಬಂಧಿಸಲಾಗಿತ್ತು.

More from Filmibeat

English summary
Bengaluru 8th ACMM court on September 24, 2018 reserved the order of Kannada actor Duniya Vijay bail application rejected. (September 26, 2018.)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X