ದುನಿಯಾ ವಿಜಿ ಹುಟ್ಟುಹಬ್ಬದ ಉಡುಗೊರೆ: RX ಸೂರಿ ಟೀಸರ್

By Harshitha

ಬ್ಲಾಕ್ ಕೋಬ್ರಾ...ಕನ್ನಡ ಚಿತ್ರರಂಗದ ಕರಿಚಿರತೆ...ದುನಿಯಾ ವಿಜಿಗಿಂದು ಹುಟ್ಟುಹಬ್ಬದ ಸಂಭ್ರಮ. 41ನೇ ವಸಂತಕ್ಕೆ ಕಾಲಿಟ್ಟಿರುವ ದುನಿಯಾ ವಿಜಿ, ಅಭಿಮಾನಿಗಳೊಂದಿಗೆ ತಮ್ಮ ಜನ್ಮದಿನವನ್ನ ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡ್ತಿದ್ದಾರೆ.

ಬರ್ತಡೆ ದಿನ, ಸ್ಟಾರ್ ನಟರ ಹೊಸ ಚಿತ್ರಗಳ ಟೀಸರ್ ರಿಲೀಸ್ ಆಗುವುದು ಈಗಿನ ಟ್ರೆಂಡ್. ಅದನ್ನ ಚಾಚೂ ತಪ್ಪದೆ ಪಾಲಿಸಿರುವ 'RX ಸೂರಿ' ಚಿತ್ರತಂಡ, ದುನಿಯಾ ವಿಜಿ ಹುಟ್ಟುಹಬ್ಬದ ಪ್ರಯುಕ್ತ, 'ದುನಿಯಾ ವಿಜಿ ಬರ್ತಡೆ ಸ್ಪೆಷಲ್ ಟೀಸರ್'ನ ಬಿಡುಗಡೆ ಮಾಡಿದೆ.

Duniya Vijay Birthday Gift

ತಿಂಗಳ ಹಿಂದೆ ಹೊರಬಂದಿದ್ದ 'RX ಸೂರಿ' ಚಿತ್ರದ ಫಸ್ಟ್ ಲುಕ್ ನೋಡಿದವರು, ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದರೊಂದಿಗೆ ಇಂದು ರಿಲೀಸ್ ಆಗಿರುವ ಬರ್ತಡೆ ಸ್ಪೆಷಲ್ ಟೀಸರ್ ನಲ್ಲಿ ಬ್ಲಾಕ್ ಕೋಬ್ರಾ ಮ್ಯಾಜಿಕ್ ಎದ್ದು ಕಾಣುತ್ತೆ.

'ಜಾಕ್ಸನ್' ಚಿತ್ರದಲ್ಲಿ ಕರಿಚಿರತೆಯ ಆಕ್ಷನ್ ಮಿಸ್ ಮಾಡಿಕೊಂಡವರಿಗೆ 'RX ಸೂರಿ' ಚಿತ್ರದಲ್ಲಿ ಭರ್ಜರಿ ರಸದೌತಣ ಸಿಕ್ಕುವುದು ಪಕ್ಕಾ. ಲೋಕಲ್ ಹುಡುಗನಾಗಿ ಖಡಕ್ ಲುಕ್ ನಲ್ಲಿ ವಿಜಿ ಮೈನವಿರೇಳಿಸುವ ಸ್ಟಂಟ್ಸ್ ಮಾಡಿದ್ದಾರೆ. [ದುನಿಯಾ ವಿಜಿ ಅಭಿನಯದ ಟಾಪ್ 5 ಚಿತ್ರಗಳು]

Duniya Vijay Birthday Gift2

ಡಿಫರೆಂಟ್ ಡ್ಯಾನಿ ಸಂಯೋಜಿಸಿರುವ ಸಾಹಸ ದೃಶ್ಯಗಳಲ್ಲಿ ವಿಜಿ, ನೀರುಕುಡಿದಷ್ಟೆ ಸಲೀಸಾಗಿ ನಟಿಸಿದ್ದಾರೆ. ಅದೆಲ್ಲವೂ ಈಗ ರಿಲೀಸ್ ಆಗಿರುವ ಹೊಸ ಟೀಸರ್ ನಲ್ಲಿ ಸ್ಪಷ್ಟವಾಗಿದೆ. ಟ್ರೂ ಲವ್ ಸ್ಟೋರಿ ಅಂತ ಟ್ಯಾಗ್ ಲೈನ್ ಇರುವ 'RX ಸೂರಿ' ಚಿತ್ರ 'ನೈಜಕಥೆ' ಆಧರಿಸಿರುವ ಸಿನಿಮಾ.

ಆದ್ರೆ, ನಿಜವಾದ ಸೂರಿ ಯಾರು? ಯಾರ ರಿಯಲ್ ಲವ್ ಸ್ಟೋರಿ ಅಂತ ಈವರೆಗೂ ಬಯಲಾಗಿಲ್ಲ. 'ಗೋವಿಂದಾಯ ನಮಃ', 'ಶ್ರಾವಣಿ ಸುಬ್ರಮಣ್ಯ' ದಂತಹ ಹಿಟ್ ಸಿನಿಮಾಗಳನ್ನ ನೀಡಿದ್ದ ನಿರ್ಮಾಪಕ ಕೆ.ಎ.ಸುರೇಶ್, 'RX ಸೂರಿ' ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಆ ಮೂಲಕ ಯುವ ಪ್ರತಿಭೆ ಶ್ರೀ ಜೈ ಗೆ ನಿರ್ದೇಶನ ಮಾಡುವ ಚಾನ್ಸ್ ಕೂಡ ಕೊಟ್ಟಿದ್ದಾರೆ ಸುರೇಶ್. [ಬರ್ತಡೇ ಬಾಯ್ ದುನಿಯಾ ವಿಜಯ್ ಹೊಸ ಸಿನಿಮಾ ಗವಿ]

ವಿಜಿ ಜೊತೆ ಆಕಾಂಕ್ಷ ನಾಯಕಿಯಾಗಿ ಕಾಣಿಸಿಕೊಂಡಿದ್ದರೆ, ರವಿಶಂಕರ್ ಮತ್ತು ಆದಿ ಲೋಕೇಶ್ ಖತರ್ನಾಕ್ ಖೇಡಿಗಳಾಗಿದ್ದಾರೆ. [ನರ್ತಕಿಗೆ ವೆಸ್ಪಾದಲ್ಲಿ ಬಂದ ಮಿ. ಅಂಡ್ ಮಿಸಸ್ ದುನಿಯಾ ವಿಜಿ]

RX ಯಮಹಾ ಏರಿ ಸೂರಿ ಅಲಿಯಾಸ್ ದುನಿಯಾ ವಿಜಿ ತೆರೆಮೇಲೆ ಪವರ್ ತೋರಿಸುವುದು ಮಾರ್ಚ್ ತಿಂಗಳಲ್ಲಿ. ಅಲ್ಲಿವರೆಗೂ ವಿಜಿ ಅಭಿಮಾನಿಗಳು ಸ್ವಲ್ಪ ತಣ್ಣಗಾಗಲಿ ಅಂತ 'RX ಸೂರಿ' ಚಿತ್ರದ ಹೊಚ್ಚ ಹೊಸ ಟೀಸರ್ ಹೊರಬಂದಿದೆ. ದುನಿಯಾ ವಿಜಿ ಹುಟ್ಟುಹಬ್ಬದ ದಿನ, ಅವರ ಅಭಿಮಾನಿಗಳಿಗೆ ಇದಕ್ಕಿಂತ ಮತ್ತೊಂದು ಉಡುಗೊರೆ ಬೇಕಾ..? (ಫಿಲ್ಮಿಬೀಟ್ ಕನ್ನಡ)

More from Filmibeat

English summary
Kannada Actor Duniya Vijay is celebrating his 41st Birthday today (Jan 20th). On this occasion, Duniya Vijay's brand new movie RX Soori teaser has released. Watch the special teaser here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X