»   » ದುನಿಯಾ ವಿಜಿ ಅಭಿನಯದ ಟಾಪ್ 5 ಚಿತ್ರಗಳು

ದುನಿಯಾ ವಿಜಿ ಅಭಿನಯದ ಟಾಪ್ 5 ಚಿತ್ರಗಳು

Posted By:
Subscribe to Filmibeat Kannada

ಇಂದು ಬ್ಲಾಕ್ ಕೋಬ್ರಾ, ಕರಿಚಿರತೆ, ಆಕ್ಷನ್ ಜಾಕ್ಸನ್ ಅಂತೆಲ್ಲಾ ಪ್ರೀತಿಯಿಂದ ಕರೆಯಿಸಿಕೊಳ್ಳುವ 'ಹೀರೋ' ದುನಿಯಾ ವಿಜಿ ಕೇವಲ ಏಳು ವರ್ಷಗಳ ಹಿಂದೆ 'ಹೆಸರಾಂತ ಹೀರೋ'ಗಳಿಂದ ಒದೆ ತಿನ್ನುತ್ತಿದ್ದ ಒಬ್ಬ ಸಾಮಾನ್ಯ 'ಫೈಟರ್'.

ಅವಕಾಶಕ್ಕೋಸ್ಕರ ನಿರ್ಮಾಪಕರು, ನಿರ್ದೇಶಕರ ಮನೆ ಬಾಗಿಲಿಗೆ ಅಲಿಯುತ್ತಿದ್ದ ವಿಜಿ, ಇಂದು ಕನ್ನಡದ ಎಲ್ಲಾ ನಿರ್ದೇಶಕರು ಮತ್ತು ನಿರ್ಮಾಪಕರ ಫೇವರಿಟ್ ಹೀರೋ. ಆಕ್ಷನ್ ಸಿನಿಮಾಗಳಿಗೆ ಪರ್ಫೆಕ್ಟ್ ಆಗಿ ಸೂಟ್ ಆಗುವ ದುನಿಯಾ ವಿಜಿ, ಮಾಸ್ ಅಭಿಮಾನಿಗಳ ಆರಾಧ್ಯದೈವ.


ಇಂತಿಪ್ಪ ದುನಿಯಾ ವಿಜಿಗಿಂದು 41ನೇ ವಸಂತಕ್ಕೆ ಕಾಲಿಟ್ಟ ಸಂಭ್ರಮ. ಹುಟ್ಟುಹಬ್ಬವನ್ನ ಸ್ಮಶಾನದಲ್ಲಿ ವಿಭಿನ್ನವಾಗಿ ಆಚರಿಸಿಕೊಳ್ಳುತ್ತಿರುವ ದುನಿಯಾ ವಿಜಿ, ಅದ್ದೂರಿ, ವೈಭೋಗದ ಸಿನಿಮಾಗಳಿಗಿಂತ ಹೆಚ್ಚಾಗಿ ಪಕ್ಕಾ ಲೋಕಲ್, ಸ್ಲಂಗಳಲ್ಲಿ ರೆಡಿಯಾಗಿರುವ ಚಿತ್ರಗಳಿಂದಲೇ ಹೆಸರುವಾಸಿಯಾದವರು. [ದುನಿಯಾ ವಿಜಿ ಹುಟ್ಟುಹಬ್ಬದ ಉಡುಗೊರೆ: RX ಸೂರಿ ಟೀಸರ್]


ನೈಜತೆಗೆ ಹೆಚ್ಚು ಒತ್ತು ಕೊಡುವ ದುನಿಯಾ ವಿಜಿ, ಏಳು ವರ್ಷಗಳಲ್ಲಿ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಿಂಚಿದ್ದಾರೆ. ದುನಿಯಾ ವಿಜಿ ಹುಟ್ಟುಹಬ್ಬದ ಪ್ರಯುಕ್ತ, ಅವರ ಬೆಸ್ಟ್ ಆಫ್ ದಿ ಬೆಸ್ಟ್ ಚಿತ್ರಗಳ ಪಟ್ಟಿ ಇಲ್ಲಿದೆ. ಸ್ಲೈಡ್ ಗಳನ್ನು ಕ್ಲಿಕ್ ಮಾಡಿ ಪಟ್ಟಿಯಲ್ಲಿರುವ ಚಿತ್ರಗಳಲ್ಲಿ ನಿಮಗೆ ಯಾವುದು ಇಷ್ಟ ಅಂತ ಕಾಮೆಂಟ್ ಮಾಡಿ....


ಬದುಕು ಬದಲಾಯಿಸಿದ 'ದುನಿಯಾ'

'ಜೋಗಿ' ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವಣ್ಣನಿಂದ ಬಿಸಿ ಬಿಸಿ ಕವತ ತಿಂದಿದ್ದ ಫೈಟರ್ ವಿಜಿಯ 'ರಿಯಲ್ ದುನಿಯಾ' ಬದಲಾಯಿಸಿದ ಸಿನಿಮಾ 'ದುನಿಯಾ'. ನಿರ್ದೇಶಕ ಸೂರಿ, ನಾಯಕಿ ರಶ್ಮಿ, ಖಳನಟ ಯೋಗೀಶ್ ಸೇರಿದಂತೆ ಎಲ್ಲಾ ಹೊಸಬರ ತಂಡ ಸೇರಿ ಮಾಡಿದ್ದ 'ದುನಿಯಾ' ಗಾಂಧಿನಗರದಲ್ಲಿ ಅಚ್ಚರಿ ಮೂಡಿಸಿತು. ಬಾಕ್ಸ್ ಆಫೀಸ್ ನ ಚಿಂದಿ ಉಡಾಯಿಸಿತು. ಒದೆ ತಿನ್ನುವುದಕ್ಕೆ ಚಾನ್ಸ್ ಕೇಳುತ್ತಿದ್ದ ವಿಜಿ, 'ದುನಿಯಾ' ಚಿತ್ರದಿಂದ ಏಕ್ದಂ ಬಹುಬೇಡಿಕೆಯ ಹೀರೋ ಆಗಿಬಿಟ್ಟರು. 'ದುನಿಯಾ' ಋಣದಿಂದ ಬಹುದಿನಗಳ ಕನಸನ್ನ ಈಡೇರಿಸಿಕೊಂಡ ವಿಜಿ, ಸ್ವಂತ ಮನೆಯನ್ನ ಕಟ್ಟಿಸಿದ್ದು, ಈ ಚಿತ್ರದಲ್ಲಿ ಬಂದ ಹಣದಿಂದಲೇ.


ಪ್ರಯೋಗಾತ್ಮಕ ಚಿತ್ರ 'ಅವ್ವ'

ಆಕ್ಷನ್ ಸಿನಿಮಾಗಳಿಗೆ ಮಾತ್ರ ದುನಿಯಾ ವಿಜಿ ಮೀಸಲು ಅನ್ನುತ್ತಿದ್ದವರ ಬಾಯಿಗೆ ದುನಿಯಾ ವಿಜಿ ಬೀಗ ಹಾಕಿದ್ದು 'ಅವ್ವ' ಚಿತ್ರದ ಮೂಲಕ. ಪಿ.ಲಂಕೇಶ್ ರವರ 'ಮುಸ್ಸಂಜೆಯ ಕಥಾ ಪ್ರಸಂಗ'ವನ್ನ ಆಧರಿಸಿದ 'ಅವ್ವ' ಚಿತ್ರವನ್ನ ನಿರ್ದೇಶಿಸಿದ್ದು ಕವಿತಾ ಲಂಕೇಶ್. ಚಿತ್ರದಲ್ಲಿ 'ಬ್ಯಾಡರ ಮಂಜ'ನ ಪಾತ್ರ ಮಾಡಿದ್ದ ದುನಿಯಾ ವಿಜಿ ವಿಮರ್ಶಕರಿಂದ ಭೇಷ್ ಅನಿಸಿಕೊಂಡರು. 'ಅವ್ವ' ಕಮರ್ಶಿಯಲ್ಲಾಗಿ ಸಕ್ಸಸ್ ಆಗದ್ದಿದ್ದರೂ, ರಾಜ್ಯ ಪ್ರಶಸ್ತಿಗಳನ್ನ ಬಾಚಿಕೊಳ್ತು.


ಸೂರಿ ಜೊತೆ ವಿಜಿ 'ಜಂಗ್ಲಿ'

'ದುನಿಯಾ' ಚಿತ್ರದ ನಂತ್ರ ಸೂರಿ ಮತ್ತು ವಿಜಿ ಮತ್ತೊಮ್ಮೆ ಒಂದಾಗಿದ್ದು 'ಜಂಗ್ಲಿ' ಚಿತ್ರದ ಮೂಲಕ. ರೋಮ್ಯಾನ್ಸ್ ಮತ್ತು ಆಕ್ಷನ್ ಚಿತ್ರವಾಗಿದ್ದ 'ಜಂಗ್ಲಿ', ಭಟ್ರು ಬರೆದ 'ಹಳೆ ಪಾತ್ರೆ, ಕಬ್ಬಿಣ' ಹಾಡುಗಳಿಂದ ಜನಪ್ರಿಯವಾಯ್ತು. ದುನಿಯಾ ವಿಜಿ ವೃತ್ತಿ ಜೀವನಕ್ಕೆ ಎಕ್ಸ್ ಟ್ರಾ ಬೂಸ್ಟ್ ಕೊಟ್ಟ ಸಿನಿಮಾ 'ಜಂಗ್ಲಿ'.


'ಭೀಮಾ ತೀರದಲ್ಲಿ'

ಟೈಟಲ್ ಮತ್ತು ಚಿತ್ರಕಥೆ ವಿಷಯವಾಗಿ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ವಿವಾದ ಸೃಷ್ಟಿಸಿದ ಸಿನಿಮಾ 'ಭೀಮಾ ತೀರದಲ್ಲಿ'. ರಿಲೀಸ್ ಗೂ ಮುನ್ನ ಹೆಚ್ಚು ಸದ್ದು-ಸುದ್ದಿ ಮಾಡಿದ ಓಂ ಪ್ರಕಾಶ್ ರಾವ್ ನಿರ್ದೇಶನದ 'ಭೀಮ ತೀರದಲ್ಲಿ', ಬಿಡುಗಡೆ ಆದ್ಮೇಲೆ ಅಂತಹ ಕಮಾಲ್ ಮಾಡ್ಲಿಲ್ಲ. ಆದರೂ, ದುನಿಯಾ ವಿಜಿ ವೃತ್ತಿಬದುಕಿನ ಉತ್ತಮ ಚಿತ್ರಗಳ ಪಟ್ಟಿಯಲ್ಲಿ 'ಭೀಮಾ ತೀರದಲ್ಲಿ' ಸ್ಥಾನ ಪಡೆದಿದೆ.


'ಜಯಮ್ಮನ ಮಗ'

ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದ್ದ ದುನಿಯಾ ವಿಜಿಗೆ ಎರಡನೇ ಬಿಗ್ ಬ್ರೇಕ್ ತಂದುಕೊಟ್ಟ ಸಿನಿಮಾ 'ಜಯಮ್ಮನ ಮಗ'. ತಮ್ಮದೇ ಬ್ಯಾನರ್ ನಿಂದ ಹೊರಬಂದ ಹಾರರ್-ಥ್ರಿಲ್ಲರ್ ಸಿನಿಮಾ 'ಜಯಮ್ಮನ ಮಗ' ಗಲ್ಲಪೆಟ್ಟಿಗೆಯಲ್ಲಿ ಒಳ್ಳೆಯ ಕಲೆಕ್ಷನ್ ಮಾಡುವುದರ ಜೊತೆಗೆ ವಿಜಿಗೆ ಹೊಸ ಹುರುಪನ್ನ ತಂದುಕೊಡ್ತು. ಅಲ್ಲಿಂದ 'ಶಿವಾಜಿನಗರ', 'ಸಿಂಹಾದ್ರಿ' ಮತ್ತು ಲೇಟೆಸ್ಟ್ 'ಜಾಕ್ಸನ್' ಸೇರಿದಂತೆ ಮಿನಿಮಂ ಗ್ಯಾರೆಂಟಿ ಚಿತ್ರಗಳನ್ನ ನೀಡುತ್ತಿರುವ ವಿಜಿ, ಹೀಗೆ ಮತ್ತಷ್ಟು ಸದಭಿರುಚಿಯ ಚಿತ್ರಗಳನ್ನ ನೀಡಲಿ ಅನ್ನುವುದೇ ಅವರ ಅಭಿಮಾನಿಗಳ ಆಶಯ.


English summary
Kannada Actor Duniya Vijay is celebrating his 41st Birthday today (Jan 20th). On this occasion, here is the special report on Top 5 Movies of Duniya Vijay.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada