»   » ಬೆಳಗೆರೆ ವೇಷ ಕಳಚಿದ್ದ 'ಕರಿ ಚಿರತೆ' ವಿಜಿ ಬೆತ್ತಲಾದ

ಬೆಳಗೆರೆ ವೇಷ ಕಳಚಿದ್ದ 'ಕರಿ ಚಿರತೆ' ವಿಜಿ ಬೆತ್ತಲಾದ

Posted By:
Subscribe to Filmibeat Kannada

ದುನಿಯಾ ವಿಜಯ್ ದಾಂಪತ್ಯದಲ್ಲಿ ಬಿರುಕು..ವಿಚ್ಛೇದನಕ್ಕೆ ಅರ್ಜಿ... ಹೆಡ್ ಲೈನ್ ಗಳು.. ತಾಜಾ ವರದಿಗಳ ನಡುವೆ ಕೊಂಚ ಫ್ಲಾಶ್ ಬ್ಯಾಕ್ ಗೆ ಹೋಗೋಣ,,,,ಭೀಮಾತೀರದಲ್ಲಿ ಚಿತ್ರದ 'ನೈಜ'ಪಾತ್ರಧಾರಿಗಳ ಬಗ್ಗೆ ವಿವಾದ ಎದ್ದಿತ್ತು

ಬಹುಶಃ ಏಪ್ರಿಲ್ ತಿಂಗಳಿರಬೇಕು ಕಣ್ರೀ.. ಟಿವಿ 9ನಲ್ಲಿ ಸೌಜನ್ಯ ಎಂಬ ಪದದಿಂದ ಹುಟ್ಟಿಕೊಂಡ ಈ ಚರ್ಚೆ ನಂತರ ತೀರ ಯಾನ ದಾಟಿ ಸುವರ್ಣದ ನೇರ. ದಿಟ್ಟ. ನಿರಂತರ. ವೇದಿಕೆ ತಲುಪಿತ್ತು.

ಆಗ ಸಂಜೆಯಿಂದ ರಾತ್ರಿ ತನಕ ಸುವರ್ಣ ವಾಹಿನಿಯಲ್ಲಿ ಬೀಡು ಬಿಟ್ಟಿದ್ದ ದುನಿಯಾ ವಿಜಯ್ ಅವರು ಐತಿಹಾಸಿಕ ಚರ್ಚೆಗೆ ನಾಂದಿ ಹಾಡಿದ್ದರು. ಅಂದು ಬೆಳಗೆರೆ ಬಣ್ಣ ಕಳಚಿದ ದುನಿಯಾ ವಿಜಯ್ ಇಂದು ಬೆತ್ತಲಾಗಿದ್ದಾರೆ. ಕಟ್ಟಿಕೊಂಡವಳು ಕೊನೆ ತನಕ ಎಂಬ ಮಾತು ಸುಳ್ಳು ಮಾಡಲು ಹೊರಟಿದ್ದಾರೆ. ಕೇಸ್ ಏನಾಗುವುದೋ ಗೊತ್ತಿಲ್ಲ. ಡೀಟೈಲ್ ಸಿಗುತ್ತಿದ್ದಂತೆ ತಿಳಿಸುತ್ತೇವೆ ಸದ್ಯಕ್ಕೆ ಅಂದು ದುನಿಯಾ ವಿಜಯ್ ಹೇಳಿದ್ದ ನುಡಿಮುತ್ತುಗಳು ಇಲ್ಲಿದೆ ಓದ್ಕೊಳ್ಳಿ...

'ನನ್ನ ಹಾಗೂ ನನ್ನ ಹೆಂಡತಿ ಮಧ್ಯೆ ನಟಿ ಶುಭಾ ಪೂಂಜಾ ಹೆಸರು ಸೇರಿಸಿ ಏನೇನೋ ಹೊಲಸಾಗಿ ಬರೆದು ನಮ್ಮ ಸಂಸಾರ ಕೆಡಿಸಲು ನೋಡಿದರು.

ಶುಭಾ ಜೊತೆ ಇರೋ ಫೊಟೋ ಕದ್ದು ಬರೆಯುವುದಾದರೂ ಏನು..? ಏಕೆ? ನಾನೇ ಫೊಟೋ ಕೊಡ್ತಾ ಇದ್ದೆ ಬೇಕಾದರೆ.. ಸಿನಿಮಾ ರಂಗದಲ್ಲೇ ಕೆಲವರು ಸಪೋರ್ಟರ್ಸ್ ಇದ್ದಾರೆ.

ಅವರು ಮಾಡಿದ್ದಕ್ಕೆಲ್ಲ ನೀವೇ ಸರಿಯಣ್ಣ ಎಂದು ಹೇಳುತ್ತಿರುತ್ತಾರೆ. ಹಾಗಾಗಿ ಎಲ್ಲಾ ಗೊತ್ತಿದ್ದರೂ ಸುಮ್ಮನಿರಬೇಕಾದ ಪರಿಸ್ಥಿತಿ ಬಂದಿದೆ. ನಾನು ಕೆಲವರಿಗೆ ಡೇಟ್ ಕೊಟ್ಟರೆ ಒಳ್ಳೆಯವನು.. ಇಲ್ಲ ಅಂದ್ರೆ ನನ್ನ ಟಾರ್ಗೆಟ್ ಮಾಡೋದು ಇದೇ ಆಗಿ ಬಿಟ್ಟಿದೆ.

ನಾಯಕಿ ಬಾಳು ಗೋಳಾಯ್ತು: ಎಷ್ಟೊ ಜನ ಹೆದರಿಕೊಂಡು ಅಳ್ತಾ ಇದ್ದಾರೆ. ಇನ್ನೊಂದು ಹುಡುಗಿ (ನನ್ನ ಸಿನಿಮಾದಲ್ಲಿ ಹೀರೋಯಿನ್) ಜೊತೆ ನನ್ನ ಹೆಸರು ಸೇರಿಸಿ ಕೆಟ್ಟದಾಗಿ ಬರೆದರು. ಅವರು ಮನೆಯಲ್ಲಿ ಅವಳನ್ನು ವಿಷ ಹಾಕಿ ಸಾಯಿಸುಬಿಡುತ್ತೀನಿ ಎಂದು ಅವರ ಅಪ್ಪ ಅಮ್ಮ ಹೇಳಿದ್ರು ಸಾರ್..ಇವರು ಮಾಡಿರುವ ಅನ್ಯಾಯ ಒಂದೆರಡಲ್ಲ.
ಎಷ್ಟು ಜನ ಆರ್ಟಿಸ್ಟ್ ಜೀವನ ಹಾಳು ಮಾಡಿದ್ದಾರೆ ಎಂದು ನನ್ನ ಹತ್ರಾ ಪ್ರೂಫ್ ಇದೆ.

ಹೆಣ್ಣಿನ ಮೇಲೆ ಗೌರವವಿರಲಿ: ನನ್ನ ಮೇಲೆ ಬರ್ಕೋತ್ತಿರಾ ಬರೆದುಕೊಳ್ಳಿ...ನಾನು ಕೇರ್ ಮಾಡೋಲ್ಲ.. ಮನೆ ಹೆಣ್ಣಿಗೆ ಕೈ ಹಾಕ್ಬೇಡಿ. ನನ್ನ ಮೂರು ವರ್ಷದ ಮಗು ಅಳುತ್ತಾ ಬಂದು..

ಅಪ್ಪ ನಿನ್ನ ಬಗ್ಗೆ ಏನೇನೋ ಬಂದಿದೆ ಪೇಪರ್ ನಲ್ಲಿ ಎಂದು ಹೇಳಿದ ದಿನವೇ ತಿರುಗಿ ಬೀಳಬೇಕಿತ್ತು.. ಇಷ್ಟು ವರ್ಷ ನಮ್ಮ ಇಂಡಸ್ಟ್ರಿ ಬಗ್ಗೆ ಏನೇನೋ ಬರೆದಿದ್ದಾರಾ. ಇನ್ನು ಮೇಲೆ ಕೆಟ್ಟದಾಗಿ ಬರೆಯಬೇಡಿ.

ಮುಖ್ಯಮಂತ್ರಿ ಐ ಲವ್ ಯೂ ನೀವೇ ಹೀರೋ ಅಲ್ವ?: ನನಗೂ ಅವರಿಗೂ ಸಂಬಂಧ ಹಳಸೋದಿರಲಿ. ಮೊದಲಿಂದಲೂ ಆಗೋದಿಲ್ಲ...ಕಷ್ಟಪಟ್ಟು ಸಿನಿಮಾ ಮುಗಿಸಿಕೊಟ್ಟಿದ್ದೇನೆ. ಯಾಕೆ ರಿಲೀಸ್ ಮಾಡಿಲ್ಲ ಎಂದರೆ ಕೋರ್ಟ್ ಕಚೇರಿ ಎನ್ನುತ್ತಾರೆ. ತಪ್ಪು ಇದ್ದರೆ ಹೇಳಿ ಆದರೆ, ಸುಮ್ಮನೆ ಒಂದಕ್ಕೆ ಹತ್ತು ಬರೆಯಬೇಡಿ.

ಆರ್ ಬಿ ವೇಷಧಾರಿ ಅಂಥ ಇವತ್ತು ಗೊತ್ತಾಗಿದೆ. ನಾನು ತುಂಬಾ ಶೋಷಣೆ ಒಳಗಾಗಿದ್ದೇನೆ...ಸಾರ್.. ಮುಂಚೆ ಏನು ಮಾಡೋಕು ಒಳ್ಳೆ ವೇದಿಕೆ ಸಿಗಲಿಲ್ಲ. ಇವತ್ತು ನಿಮ್ಮ(ಮಾಧ್ಯಮ) ಬೆಂಬಲ ಸಿಕ್ಕ ಮೇಲೆ ಏನು ಬಂದರೂ ಎದುರಿಸುತ್ತೀವಿ. ಕನ್ನಡ ಚಿತ್ರರಂಗದ ಹೆಣ್ಣು ಕಲಾವಿದರ ರಕ್ಷಣೆಗೆ ನಾವೆಲ್ಲ ಒಂದಾಗಿ ಹೋರಾಡಬೇಕಿದೆ ಎಂದು ವಿಜಯ್ ಹೇಳಿದ್ದರು. ಅಂದು ವಿಜಿ ಹಿಂದೆ ಅವರ ಪ್ರಾಯದ ಎಲ್ಲಾ ನಾಯಕರು ಬೆಂಬಲಕ್ಕೆ ನಿಂತಿದ್ದರು. ಆದರೆ ಈಗ...?

English summary
Actor Duniya Vijay once claimed(in Suvarna News Channel Studio) that Ravi Belagere has spoiled life of many artist in the film industry with his defamatory reportsin HI Bangalore Tabloid. But, now the reports become true as Vijay applied for divorce today(Jan.17)
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada