ಸಮಾಧಿ ಮೇಲೆ ಅಮ್ಮನ ಪ್ರತಿಮೆ ಪ್ರತಿಷ್ಠಾಪಿಸಿದ ದುನಿಯಾ ವಿಜಯ್
ದುನಿಯಾ ವಿಜಯ್ ಬದುಕಿನಲ್ಲಿ ಅಮ್ಮಾನೇ ಎಲ್ಲ, ಅಮ್ಮನಿಂದಲೇ ಎಲ್ಲ. ವಿಜಯ್ ಜೀವನದಲ್ಲಿ ಈ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ ಅವರ ಹಿಂದೆ ತಂದೆ-ತಾಯಿಯ ಶಕ್ತಿ ಇದೆ. ಇದನ್ನು ಯಾವಾಗಲೂ ವಿಜಯ್ ಹೇಳುತ್ತಲೇ ಇದ್ದರು.
Recommended Video
ವಿಜಯ್ ತಮ್ಮ ತಾಯಿ ಉಳಿಸಿಕೊಳ್ಳಲು ಬಹಳ ಕಷ್ಟಪಟ್ಟರು. ಆದರೆ ವಿಧಿಯ ಆಟದ ಮುಂದೆ ವಿಜಯ್ ಪ್ರಯತ್ನ ಫಲಿಸಲಿಲ್ಲ. ಜುಲೈ 8 ರಂದು ವಿಜಿ ಅವರ ತಾಯಿ ನಾರಾಯಣಮ್ಮ ಕೊನೆಯುಸಿರೆಳೆದರು. ತಾಯಿಯ ಆಸೆಯಂತೆ ಆನೇಕಲ್‌ನ ಕುಂಬಾರಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.
ಪ್ರತಿಯೊಬ್ಬ ಮಗನಿಗೂ ತಾಯಿ ಸಮಾಧಿ ಸ್ಥಳ ದೇವರ ಮಂದಿರವಂತೆ. ಖುದ್ದು ವಿಜಯ್ ಅವರೇ ನಿಂತು ಅಮ್ಮನ ಸಮಾಧಿ ಸಹ ಕಟ್ಟಿಸಿದರು. ಈಗ ಆ ಸಮಾಧಿ ಮೇಲೆ ನಾರಾಯಣಮ್ಮ ಅವರ ಪ್ರತಿಮೆ ಪ್ರತಿಷ್ಠಾನ ಮಾಡುವ ಮೂಲಕ ಶ್ರೇಷ್ಠತೆ ಮರೆದಿದ್ದಾರೆ.

ದುನಿಯಾ ವಿಜಯ್ ಅವರ ತಾಯಿಯ ಸಮಾಧಿ ಹಾಗು ಸಮಾಧಿ ಮೇಲೆ ಪ್ರತಿಮೆ ನಿರ್ಮಿಸಿರುವ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ನಟನ ಈ ಕೆಲಸಕ್ಕೆ ಅಭಿಮಾನಿ ವಲಯದಲ್ಲಿ ಭಾರಿ ಪ್ರಶಂಸೆಗೆ ವ್ಯಕ್ತವಾಗುತ್ತಿದೆ. ಅಮ್ಮನ ಮೇಲೆ ವಿಜಯ್ ಅವರ ಪ್ರೀತಿ ನೋಡಿ ಅನೇಕರು ಭಾವುಕರಾಗಿದ್ದಾರೆ.
ಇನ್ನು ದುನಿಯಾ ವಿಜಯ್ ಅವರ ತಾಯಿಯ ಸಮಾಧಿ ಹಾಗೂ ಪ್ರತಿಮೆ ನೋಡಿದ ಅಭಿಮಾನಿಯೊಬ್ಬ, ''ಸರ್ ಈ ಪ್ರತಿಮೆ ಮಾಡಿದ ಶಿಲ್ಪಿಯ ನಂಬರ್ ಕೊಡಿ, ನಾನು ನಮ್ಮ ತಂದೆಯ ಪ್ರತಿಮೆ ಮಾಡಿಸುವೆ'' ಎಂದು ಕೇಳಿದ್ದಾರೆ.
ದುನಿಯಾ ವಿಜಯ್ ಅವರು ಆತನ ಮನವಿಗೆ ಸ್ಪಂದಿಸಿ ನಂಬರ್ ಹಂಚಿಕೊಂಡಿದ್ದಾರೆ.


Click it and Unblock the Notifications











