For Quick Alerts
  ALLOW NOTIFICATIONS  
  For Daily Alerts

  ಸಮಾಧಿ ಮೇಲೆ ಅಮ್ಮನ ಪ್ರತಿಮೆ ಪ್ರತಿಷ್ಠಾಪಿಸಿದ ದುನಿಯಾ ವಿಜಯ್

  |

  ದುನಿಯಾ ವಿಜಯ್ ಬದುಕಿನಲ್ಲಿ ಅಮ್ಮಾನೇ ಎಲ್ಲ, ಅಮ್ಮನಿಂದಲೇ ಎಲ್ಲ. ವಿಜಯ್ ಜೀವನದಲ್ಲಿ ಈ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ ಅವರ ಹಿಂದೆ ತಂದೆ-ತಾಯಿಯ ಶಕ್ತಿ ಇದೆ. ಇದನ್ನು ಯಾವಾಗಲೂ ವಿಜಯ್ ಹೇಳುತ್ತಲೇ ಇದ್ದರು.

  ದುನಿಯಾ ಸಿನಿಮಾದ ಕಥೆಯಂತೆ ನಿಜಜೀವನದಲ್ಲಿಯೂ ಆಯ್ತು

  ವಿಜಯ್ ತಮ್ಮ ತಾಯಿ ಉಳಿಸಿಕೊಳ್ಳಲು ಬಹಳ ಕಷ್ಟಪಟ್ಟರು. ಆದರೆ ವಿಧಿಯ ಆಟದ ಮುಂದೆ ವಿಜಯ್ ಪ್ರಯತ್ನ ಫಲಿಸಲಿಲ್ಲ. ಜುಲೈ 8 ರಂದು ವಿಜಿ ಅವರ ತಾಯಿ ನಾರಾಯಣಮ್ಮ ಕೊನೆಯುಸಿರೆಳೆದರು. ತಾಯಿಯ ಆಸೆಯಂತೆ ಆನೇಕಲ್‌ನ ಕುಂಬಾರಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.

  'ಸಾವಿರ ದೇವರಿಗೂ ಮಿಗಿಲಿವಳು ನಮ್ಮಮ್ಮ': ತಾಯಿಯಲ್ಲಿ ದೇವರ ಕಂಡಿದ್ದ ವಿಜಯ್'ಸಾವಿರ ದೇವರಿಗೂ ಮಿಗಿಲಿವಳು ನಮ್ಮಮ್ಮ': ತಾಯಿಯಲ್ಲಿ ದೇವರ ಕಂಡಿದ್ದ ವಿಜಯ್

  ಪ್ರತಿಯೊಬ್ಬ ಮಗನಿಗೂ ತಾಯಿ ಸಮಾಧಿ ಸ್ಥಳ ದೇವರ ಮಂದಿರವಂತೆ. ಖುದ್ದು ವಿಜಯ್ ಅವರೇ ನಿಂತು ಅಮ್ಮನ ಸಮಾಧಿ ಸಹ ಕಟ್ಟಿಸಿದರು. ಈಗ ಆ ಸಮಾಧಿ ಮೇಲೆ ನಾರಾಯಣಮ್ಮ ಅವರ ಪ್ರತಿಮೆ ಪ್ರತಿಷ್ಠಾನ ಮಾಡುವ ಮೂಲಕ ಶ್ರೇಷ್ಠತೆ ಮರೆದಿದ್ದಾರೆ.

  ದುನಿಯಾ ವಿಜಯ್ ಅವರ ತಾಯಿಯ ಸಮಾಧಿ ಹಾಗು ಸಮಾಧಿ ಮೇಲೆ ಪ್ರತಿಮೆ ನಿರ್ಮಿಸಿರುವ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ನಟನ ಈ ಕೆಲಸಕ್ಕೆ ಅಭಿಮಾನಿ ವಲಯದಲ್ಲಿ ಭಾರಿ ಪ್ರಶಂಸೆಗೆ ವ್ಯಕ್ತವಾಗುತ್ತಿದೆ. ಅಮ್ಮನ ಮೇಲೆ ವಿಜಯ್ ಅವರ ಪ್ರೀತಿ ನೋಡಿ ಅನೇಕರು ಭಾವುಕರಾಗಿದ್ದಾರೆ.

  ಇನ್ನು ದುನಿಯಾ ವಿಜಯ್ ಅವರ ತಾಯಿಯ ಸಮಾಧಿ ಹಾಗೂ ಪ್ರತಿಮೆ ನೋಡಿದ ಅಭಿಮಾನಿಯೊಬ್ಬ, ''ಸರ್ ಈ ಪ್ರತಿಮೆ ಮಾಡಿದ ಶಿಲ್ಪಿಯ ನಂಬರ್ ಕೊಡಿ, ನಾನು ನಮ್ಮ ತಂದೆಯ ಪ್ರತಿಮೆ ಮಾಡಿಸುವೆ'' ಎಂದು ಕೇಳಿದ್ದಾರೆ.

  ದುನಿಯಾ ವಿಜಯ್ ಅವರು ಆತನ ಮನವಿಗೆ ಸ್ಪಂದಿಸಿ ನಂಬರ್ ಹಂಚಿಕೊಂಡಿದ್ದಾರೆ.

  English summary
  Kannada Actor Duniya Vijay built his Mother Narayanamma statue on her Grave at Kumbarahalli.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X