»   » ಅನಿಲ್-ಉದಯ್ ಸಮಾಧಿ ಬಳಿ ದುನಿಯಾ ವಿಜಯ್ ಹುಟ್ಟುಹಬ್ಬ!

ಅನಿಲ್-ಉದಯ್ ಸಮಾಧಿ ಬಳಿ ದುನಿಯಾ ವಿಜಯ್ ಹುಟ್ಟುಹಬ್ಬ!

Posted By:
Subscribe to Filmibeat Kannada

ನಟ ದುನಿಯಾ ವಿಜಯ್ ಗಿಂದು 43ನೇ ಹುಟ್ಟುಹಬ್ಬದ ಸಂಭ್ರಮ. ಪ್ರತಿವರ್ಷದಂತೆ ಈ ವರ್ಷ ಗ್ರ್ಯಾಂಡ್ ಆಗಿ ಬರ್ತಡೇ ಸೆಲೆಬ್ರೇಟ್ ಮಾಡಿಕೊಳ್ಳದೇ, ಸ್ಮಶಾನದಲ್ಲಿ ದುನಿಯಾ ವಿಜಯ್ ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು.

'ಮಾಸ್ತಿಗುಡಿ' ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ದುರಂತ ಸಾವಿಗೀಡಾಗಿದ್ದ ಅನಿಲ್ ಮತ್ತು ಉದಯ್ ಸಮಾಧಿಗೆ ನಮಸ್ಕರಿಸಿದ ದುನಿಯಾ ವಿಜಯ್ ಭಾವುಕರಾದರು.[ದುನಿಯಾ ವಿಜಯ್ ಹುಟ್ಟುಹಬ್ಬ, 'ಮಾಸ್ತಿಗುಡಿ' ಟ್ರೈಲರ್ ರಿಲೀಸ್!]

Duniya Vijay celebrates 43rd Birthday

ಬನಶಂಕರಿಯ ರುದ್ರಭೂಮಿಯಲ್ಲಿ ಆತ್ಮೀಯ ಗೆಳೆಯರನ್ನ ನೆನೆದು ಕಣ್ಣೀರಿಟ್ಟ ವಿಜಿ, ಅನಿಲ್-ಉದಯ್ ಸಮಾಧಿ ಬಳಿಯೇ ಕೇಕ್ ಕತ್ತರಿಸಿ ಜನುಮದಿನವನ್ನ ಆಚರಿಸಿಕೊಂಡರು. ಈ ವೇಳೆ ಪತ್ನಿ ಕೀರ್ತಿ ಮತ್ತು ಗೆಳೆಯರ ಬಳಗ ಹಾಜರಿತ್ತು.[ದುನಿಯಾ ವಿಜಯ್ ಹುಟ್ಟುಹಬ್ಬ: ಬಡವರಿಗೆ 'ಕನಕ'ನ ಕಾಣಿಕೆ]

English summary
Kannada Actor Duniya Vijay celebrated his 43rd Birthday by remembering Anil and Uday, who died during 'Maasthi Gudi' climax shoot in T.G.Halli reservoir.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada