For Quick Alerts
  ALLOW NOTIFICATIONS  
  For Daily Alerts

  ಸಲಗ ಸಿನಿಮಾ ಒಟಿಟಿ ರಿಲೀಸ್ ಬಗ್ಗೆ ದುನಿಯಾ ವಿಜಯ್ ಹೇಳಿದ್ದೇನು?

  |

  ನಟ ದುನಿಯಾ ವಿಜಿ ಅಭಿನಯದ ಸಲಗ ಮೂವಿ ರಾಜ್ಯದಾದ್ಯಂತ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ರಿಲೀಸ್ ಆದ ದಿನದಿಂದಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಸಲಗ ಚಿತ್ರ ಒಟಿಟಿಗೆ ಬರುತ್ತೆ ಎಂದು ಸುಳ್ಳು ಸುದ್ದಿಗಳು ಹಬ್ಬಿಸಲಾಗುತ್ತಿದೆ. ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ದುನಿಯಾ ವಿಜಯ್ ಆಕ್ರೋಶ ಹೊರ ಹಾಕಿದ್ದು, ಯಾವುದೇ ಕಾರಣಕ್ಕೂ ಸಿನಿಮಾ ಒಟಿಟಿಗೆ ಬರಲ್ಲ ಎಂದಿದ್ದಾರೆ.

  ಕನ್ನಡದ ಸಲಗ ಮೂವಿ ಸೆಟ್ಟೇರಿದಾಗಿನಿಂದಲೂ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಿತ್ತು. ಚಿತ್ರದ ಟ್ರೈಲರ್, ಹಾಡುಗಳು, ಪೋಸ್ಟರ್ ಹೀಗೆ ಸಾಕಷ್ಟು ವಿಚಾರಗಳಲ್ಲಿ ಗಮನ ಸೆಳೆದಿದ್ದ ಸಲಗ ಸಿನಿಮಾ ಕಳೆದ ಗುರುವಾರ, ಆಯುಧ ಪೂಜೆಯ ಸಂಭ್ರಮಕ್ಕೆ ಥಿಯೇಟರ್ ಪ್ರವೇಶ ಪಡೆದಿತ್ತು. ಚಿತ್ರ ರಿಲೀಸ್ ಆದಾಗಿನಿಂದಲೂ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ತಿರೋ ಸಲಗ ಹೌಸ್ ಫುಲ್ ಪ್ರದರ್ಶನ ಕೂಡ ಆಗುತ್ತಿದೆ. ಇದನ್ನ ಸಹಿಸಿಕೊಳ್ಳಲು ಆಗದ ಕೆಲ ಕಿಡಿಗೇಡಿಗಳು ಸಿನಿಮಾದ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಿದ್ದು, ಈ ಬಗ್ಗೆ ಸ್ವತಃ ನಟ ದುನಿಯಾ ವಿಜಯ್ ಪ್ರತಿಕ್ರಿಯಿಸಿದ್ದಾರೆ.

  ಸಲಗ ಮೂವಿ ದುನಿಯಾ ವಿಜಿ ನಿರ್ದೇಶನದ ಸಿನಿಮಾ. ಅಂದು ಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ಚಿತ್ರ ರಿಲೀಸ್ ಆಗಬೇಕಿತ್ತು. ಆದರೆ ಕೊರೋನಾ ಕಾರಣದಿಂದಾಗಿ ಹಾಗೇ ಚಿತ್ರಮಂದಿರಗಳಲ್ಲಿ 100% ಆಸನ ಭರ್ತಿಗೆ ಅವಕಾಶ ಸಿಗಲಿ ಎಂದು ಕಾದಿದ್ದ ಚಿತ್ರತಂಡ , ಕಳೆದ ವಾರ ಚಿತ್ರವನ್ನು ಪ್ರೇಕ್ಷಕರ ಮುಂದೆ ಇಟ್ಟಿತ್ತು. ಉತ್ತಮವಾಗಿ ಕಲೆಕ್ಷನ್ ಆಗುತ್ತಿರುವಾಗಲೇ ಸಲಗ ಸಿನಿಮಾ ಒಟಿಟಿಗೆ ಬರುತ್ತೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿದೆ. ಈ ವಿಚಾರದ ಬಗ್ಗೆ ಮಾತನಾಡಿರೋ ದುನಿಯಾ ವಿಜಯ್, ಯಾವುದೇ ಕಾರಣಕ್ಕೂ ಸಿನಿಮಾ ಒಟಿಟಿಗೆ ಬರಲ್ಲ, ಎಲ್ಲರೂ ಥಿಯೇಟರ್‌ನಲ್ಲೆ ನೋಡಬೇಕು ಎಂದಿದ್ದಾರೆ.

  ಈ ವಿಚಾರದ ಬಗ್ಗೆ ಸ್ವಲ್ಪ ಖಾರವಾಗೇ ಪ್ರತಿಕ್ರೀಯಿಸಿರೋ ವಿಜಯ್, ನಾವು ಸಿನಿಮಾ ಮಾಡಿದ್ದು ಥಿಯೇಟರ್‌ನಲ್ಲಿ ರಿಲೀಸ್ ಮಾಡಲು. ಒಟಿಟಿಯಲ್ಲಿ ರಿಲೀಸ್ ಮಾಡೋದಾಗಿದ್ರೆ, ಇಷ್ಟು ದಿನ ಕಾಯುತ್ತಿರಲಿಲ್ಲ. ಒಟಿಟಿಯಲ್ಲಿ ಸಿನಿಮಾ ಬಿಡುಗಡೆಗೆ ಕೇಳಿದಾಗಲೂ ನಾವು ಕೊಡಲ್ಲ ಎಂದಿದ್ದೆವು. ಸಲಗ ಚಿತ್ರ ಥಿಯೇಟರ್‌ನಲ್ಲೆ ಪ್ರದರ್ಶನ ಕಾಣುತ್ತೆ. ಯಾರು ಈ ಸುದ್ದಿಗೆ ಕಿವಿಕೊಡಬೇಡಿ. ಹೀಗೆ ಸುಳ್ಳು ಸುದ್ದಿಯನ್ನು ಹರಡುವ ಹುಳಗಳು ಇದ್ದೇ ಇರುತ್ತವೆ ಎಂದು ಹೇಳುವ ಮೂಲಕ ಟಾಂಗ್ ಕೊಟ್ಟಿದ್ದಾರೆ.

  ಅಲ್ಲದೇ ನಾನು ಸಲಗ ಚಿತ್ರ ನಿರ್ದೇಶನ ಮಾಡಲು ತೀರ್ಮಾನಿಸಿದಾಗಲೇ ಒಂದು ಕನಸು ಕಂಡಿದ್ದೆ. ಸಲಗ ಚಿತ್ರ ಚಿತ್ರಮಂದಿರದಲ್ಲೇ ರಿಲೀಸ್ ಆಗಬೇಕು ಅಂತ. ಆ ಆಸೆ ಈಡೇರಿದೆ. ಇಂಥ ಸುಳ್ಳು ಸುದ್ದಿ ಬಗ್ಗೆ ನಾವು ಕೇರ್ ಮಾಡಲ್ಲ, ಪ್ರೇಕ್ಷಕರು ನಮ್ಮೊಂದಿಗೆ ಇದ್ದಾಗ ತಲೆ ಕೆಡಿಸಿಕೊಳ್ಳಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

  ಕೆ.ಪಿ ಶ್ರೀಕಾಂತ್ ನಿರ್ಮಾಣದ ಸಲಗ ಚಿತ್ರ ರಿಲೀಸ್ ಆಗಿ 5 ದಿನಗಳಾದ್ರು ಇನ್ನು ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರ ನೋಡಿದ ಪ್ರೇಕ್ಷಕರು ರಾ ಸಬ್ಜೆಕ್ಟ್ ಅನ್ನು ಇಷ್ಟಪಡುತ್ತಿದ್ದಾರೆ. ಅಂಡರ್‌ವರ್ಲ್ಡ್ ಮತ್ತು ರೌಡಿಸಂ ಮೇಲೆ ಚಿತ್ರ ತಯಾರಾಗಿದ್ದು, ದುನಿಯಾ ವಿಜಿ ಅಭಿನಯ, ಡಾಲಿ ಧನಂಜಯ್ ಪರ್ಫಾಮೆನ್ಸ್‌ಗೆ ಜನ ಫಿದಾ ಆಗುತ್ತಿದ್ದಾರೆ. ಹಾಗೆಯೇ ಚಿತ್ರದ ಹಾಡು ಕೂಡ ಸಖತ್ ಫೇಮಸ್ ಆಗುತ್ತಿದೆ. ಹೀಗಾಗಿ ಚಿತ್ರತಂಡ ಕೂಡ ಗೆಲುವಿನ ನಗೆ ಬೀರಿದೆ.

  English summary
  Duniya Vijay Clarifies that No Hurry to Release Salaga Movie on OTT After Massive Response in Theatres. Know more.
  Monday, October 18, 2021, 16:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X