ಆಸ್ಪತ್ರೆಯಿಂದ ಹೊರ ಬಂದ ದುನಿಯಾ ವಿಜಯ್ ಪುತ್ರಿ ಅಪ್ಪನ ಬಗ್ಗೆ ಹೇಳಿದ್ದೇನು?
ನಟ ದುನಿಯಾ ವಿಜಯ್ ಅವರ ಹಿರಿಯ ಪುತ್ರಿ ಮೋನಿಕಾ ನಿನ್ನೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಂದೆ ದುನಿಯಾ ವಿಜಯ್, ಕೀರ್ತಿ ಸೇರಿದಂತೆ ನಾಲ್ಕು ಜನರಿಂದ ತನ್ನ ಮೇಲೆ ಹಲ್ಲೆ ಆಗಿದೆ ಎಂದು ಅವರು ಆರೋಪ ಮಾಡಿದ್ದರೆ.
ಚಿಕಿತ್ಸೆಯ ಬಳಿಕ ಇದೀಗ ಮೋನಿಕಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಿಂದ ಹೊರ ಬಂದ ಮೇಲೆ ಘಟನೆಯ ಬಗ್ಗೆ ಮಾತನಾಡಿರುವ ಅವರು ''ನಾನು ಸುಳ್ಳು ದೂರು ನೀಡಿಲ್ಲ. ನನ್ನ ಮೇಲೆ ಹಲ್ಲೆ ಆಗಿರುವ ಕಾರಣ ಪೊಲೀಸ್ ಠಾಣೆಗೆ ಹೋದೆ. ನಾಲ್ಕು ಜನ ಸೇರಿ ನನ್ನನ್ನು ಹೊಡೆದರು.'' ಎಂದು ಹೇಳಿದ್ದಾರೆ.
''ನನಗೆ ಕೀರ್ತಿ ಪರ ಮಾತನಾಡುವಂತೆ ಎಲ್ಲರೂ ಒತ್ತಾಯ ಮಾಡುತ್ತಿದ್ದರು. ನಾನು ಇಲ್ಲ ಎಂದಾಗ ನನ್ನ ಮೇಲೆ ಹಲ್ಲೆ ಮಾಡಿದರು. ಮನೆಯಿಂದ ಆಚೆ ಹಾಕಲು ಈ ರೀತಿ ಪ್ಲಾನ್ ಮಾಡಿದ್ದಾರೆ.'' ಎಂದು ತಂದೆಯ ವಿರುದ್ಧ ಮೋನಿಕಾ ಹೇಳಿಕೆ ನೀಡಿದ್ದಾರೆ.

ಈಗಾಗಲೇ ಈ ಘಟನೆಯ ಬಗ್ಗೆ ಗಿರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ ಐ ಆರ್ ದಾಖಲಾಗಿದೆ.
English summary
Actor Duniya Vijay daughter Monica discharged from hospital.


Click it and Unblock the Notifications