ನಟ ದುನಿಯಾ ವಿಜಯ್ ವಿರುದ್ಧವೇ ದೂರು ನೀಡಿದ ಪುತ್ರಿ
ಪಾನಿಪುರಿ ಕಿಟ್ಟಿ ಪ್ರಕರಣದಲ್ಲಿ ನಟ ದುನಿಯಾ ವಿಜಯ್ ಜೈಲುವಾಸ ಅನುಭವಿಸಿದ್ದರು. ವಾರಗಳ ನಂತರ ಕೊನೆಗೂ ಜಾಮೀನು ಪಡೆದು ಮನೆ ಸೇರಿದ್ದರು. ಆದರೆ, ಈಗ ಮತ್ತೆ ದುನಿಯಾ ವಿಜಯ್ ಗೆ ಪೊಲೀಸ್ ಠಾಣೆ ಮೆಟ್ಟಿಲೇರುವ ಸಮಯ ಬಂದಿದೆ.
ದುನಿಯಾ ವಿಜಯ್ ವಿರುದ್ಧ ಈಗ ಸ್ವತಃ ಅವರ ಮಗಳೆ ದೂರು ನೀಡಿದ್ದಾರೆ. ವಿಜಿ ಪುತ್ರಿ ಮೋನಿಕಾ ಗಿರಿ ನಗರ ಪೊಲೀಸ್ ಠಾಣೆಯಲ್ಲಿ ತಂದೆಯ ವಿರುದ್ಧ ಕಂಪ್ಲೆಂಟ್ ಕೊಟ್ಟಿದ್ದಾರೆ. ಐವರ ವಿರುದ್ದ ಪೊಲೀಸರು ಎಫ್ ಐ ಆರ್ ಹಾಕಿದ್ದಾರೆ.
ಮನೆಗೆ ಬಂದಾಗ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದರು ಎಂದು ಮೋನಿಕಾ ಆರೋಪ ಮಾಡಿದ್ದಾರೆ. ತಂದೆ ದುನಿಯಾ ವಿಜಯ್, ಚಿಕ್ಕಮ್ಮ ಕೀರ್ತಿ ಗೌಡ ಹಾಗೂ ವಿಜಿ ಕಾರ್ ಡ್ರೈವರ್ ಸೇರಿದಂತೆ ಐದು ಜನರ ವಿರುದ್ಧ ದೂರು ದಾಖಲಾಗಿದೆ.

ಪಾನಿಪುರಿ ಕಿಟ್ಟಿ ಪ್ರಕರಣದಲ್ಲಿ ಅಂದರ್ ಆಗಿದ್ದ ದುನಿಯಾ ವಿಜಯ್ ಆ ಪ್ರಕರಣ ಮರೆಯುವ ಮೊದಲೇ ಮತ್ತೊಂದು ಕೇಸ್ ಹಾಕಿಸಿಕೊಂಡಿದ್ದಾರೆ.
English summary
Actor Duniya Vijay daughter monica filed a complaint against father in Vijayanagar police station, Bengaluru.


Click it and Unblock the Notifications